ಜನರನ್ನು ರಂಜಿಸಿದ ಜೋಡು ಕುದುರೆ ಗಾಡಿ ಷರತ್ತು

KannadaprabhaNewsNetwork | Published : May 27, 2024 1:00 AM

ಸಾರಾಂಶ

ಕನ್ನಡಪ್ರಭ ವಾರ್ತೆ ಕಬ್ಬೂರ: ಶ್ರೀ ಹನುಮಾನ ದೇವರ ಜಾತ್ರಾ ಮಹೋತ್ಸವ ನಿಮಿತ್ತ ಪಟ್ಟಣದಲ್ಲಿ ರವಿವಾರ ಜೋಡು ಕುದುರೆ ಗಾಡಿ ಷರತ್ತು, ಕುಳಿತು ಕುದುರೆ ಗಾಡಿ ಓಡಿಸುವ ಷರತ್ತು, ವೈಯಕ್ತಿತ ಓಟದ ಸ್ಪರ್ಧೆ, ಸ್ಲೋ ಮೋಟಾರ ಸೈಕಲ್‌ ಸ್ಪರ್ಧೆಗಳು ಜನರ ಗಮನ ಸೆಳದವು.

ಕನ್ನಡಪ್ರಭ ವಾರ್ತೆ ಕಬ್ಬೂರ: ಶ್ರೀ ಹನುಮಾನ ದೇವರ ಜಾತ್ರಾ ಮಹೋತ್ಸವ ನಿಮಿತ್ತ ಪಟ್ಟಣದಲ್ಲಿ ರವಿವಾರ ಜೋಡು ಕುದುರೆ ಗಾಡಿ ಷರತ್ತು, ಕುಳಿತು ಕುದುರೆ ಗಾಡಿ ಓಡಿಸುವ ಷರತ್ತು, ವೈಯಕ್ತಿತ ಓಟದ ಸ್ಪರ್ಧೆ, ಸ್ಲೋ ಮೋಟಾರ ಸೈಕಲ್‌ ಸ್ಪರ್ಧೆಗಳು ಜನರ ಗಮನ ಸೆಳದವು.

ಪಟ್ಟಣದ ರಾಯಬಾಗ ರಸ್ತೆಯ ಕೆಇಬಿ ಯಿಂದ ಮಾಡಲಗಿ ಗ್ರಾಮದವರೆಗೆ ಅಂದಾಜು 5 ಕಿ.ಮೀ ದೂರದವರೆಗೆ ನಡೆದ ಜೋಡು ಕುದುರೆ ಗಾಡಿ ಷರತ್ತು. ಕುಳಿತು ಕುದರೆ ಓಡಿಸುವ ಸ್ಪರ್ಧೆಗೆ ಕಬ್ಬೂರ ಪಟ್ಟಣದ ಪಿಕೆಪಿಎಸ್‌ ಅಧ್ಯಕ್ಷ ಮಿಲನ ಪಾಟೀಲ ಚಾಲನೆ ನೀಡಿದರು.

ಜೋಡು ಕುದುರೆ ಗಾಡಿ ಷರತ್ತು. ಕುಳಿತು ಕುದರೆ ಓಡಿಸುವ ಷರತ್ತು ಹಾಗೂ ಸ್ಲೋ ಮೋಟಾರ್‌ ಸೈಕಲ್‌ ಷರತ್ತು ಮತ್ತು ವೈಯಕ್ತಿಕ ಓಟದ ಸ್ಪರ್ಧೆ ವೀಕ್ಷಿಸಲು ಸಹಸ್ರಾರೂ ಅಭಿಮಾನಿಗಳು ಆಗಮಿಸಿದ್ದರು.

ಕುದುರೆ ಸವಾರಿ ಸ್ಪರ್ಧೆಯಲ್ಲಿ ಯುವ ಜನತೆ ಉತ್ಸಾಹದಿಂದ ಭಾಗವಹಿಸಿದ್ದು, ನಾನಾ ವರಸೆಗಳನ್ನು ಪ್ರದರ್ಶಿಸಿದರು. ಜಾತ್ರೆ ಉತ್ಸವ ಸಂದರ್ಭದಲ್ಲಿ ಕುದುರೆ, ಎತ್ತಿನ ಗಾಡಿ ಸ್ಪರ್ಧೆ, ಕುಸ್ತಿ ಸ್ಪರ್ಧೆ ಗ್ರಾಮೀಣ ಜನರ ಮನರಂಜಿಸುವುದು ವಾಡಿಕೆ. ಜೋಡು ಕುದುರೆ ಗಾಡಿ ಷರತ್ತಿನಲ್ಲಿ ಪ್ರಥಮ ಸ್ಥಾನವನ್ನು ಅಜ್ಜಪ್ಪ ಶಿರಹಟ್ಟಿ, ದ್ವಿತೀಯ ಸ್ಥಾನವನ್ನು ಜೈ ಹನುಮಾನ ವಡ್ರಟ್ಟಿ, ತೃತೀಯ ಸ್ಥಾನವನ್ನು ಮಹಾಂತೇಶ ಚಿಕ್ಕೋಡಿ ಪಡೆದರು.ಕುಳಿತು ಕುದುರೆ ಓಡಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಹಣಮಂತ ಮಗದುಮ್ಮ, ದ್ವಿತೀಯ ಸ್ಥಾನವನ್ನು ಚಂದ್ರಮ್ಮದೇವಿ ಹಿಡಕಲ, ತೃತೀಯ ಸ್ಥಾನವನ್ನು ನಿಖಿಲ ಕಾಂಬಳೆ ಪಡೆದರು.

ಸ್ಲೋ ಮೋಟಾರ್‌ ಸೈಕಲ್‌ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಎಸ್‌.ಜಿ.ಮಗದುಮ್ಮ, ದ್ವಿತೀಯ ಸ್ಥಾನವನ್ನು ಭೀಮಪ್ಪ ಮದರಖಂಡಿ, ತೃತೀಯ ಸ್ಥಾನವನ್ನು ಪುಟ್ಟು ಬಸ್ತವಾಡೆ ಪಡೆದರು.

ವೈಯಕ್ತಿಕ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಅಜೀತ ಹಿರೇಕುರಬರ, ದ್ವಿತೀಯ ಸ್ಥಾನವನ್ನು ಕಿರಣ ಸಂಗಟಿ, ತೃತೀಯ ಸ್ಥಾನವನ್ನು ಕುಮಾರ ವಡೇರ, ಚತುರ್ಥ ಸ್ಥಾನವನ್ನು ಸೌರಭ ನಾಗನ್ನವರ ಪಡೆದರು.

ಈ ಸಂದರ್ಭದಲ್ಲಿ ಪುಟ್ಟು ಹಳ್ಳೂರ, ಸುನೀಲ ಕುಲಕರ್ಣಿ, ಶಂಕರ ವಡೇರ, ಮಲ್ಲಪ್ಪ ಕಾಮಗೌಡ, ಅಪ್ಪು ಹೇರಲಗಿ, ನೇಮಿನಾಥ ಕಾಗವಾಡೆ, ಕಾಶಪ್ಪ ಕಾಡೇಶಗೋಳ, ಶ್ರೀಶೈಲ ಬಡಿಗೇರ, ಮಾರುತಿ ಕಾಗವಾಡೆ, ಅಜೀತ ಮರಾಠೆ ಸೇರಿದಂತೆ ಮುಂತಾದವರು ಇದ್ದರು.

Share this article