ಆ್ಯಂಕರ್‌..........ಸಂಸ್ಕಾರವಿಲ್ಲದ ಸಂಸ್ಕೃತಿ ‘ವೃದ್ಧಾಶ್ರಮ’: ಷಡಕ್ಷರಿ

KannadaprabhaNewsNetwork |  
Published : Jan 29, 2024, 01:33 AM ISTUpdated : Jan 29, 2024, 01:34 AM IST
೨೮ಕೆಎಲ್‌ಆರ್-೧ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸರ್ವಸದಸ್ಯರ ಸಭೆ, ಪ್ರತಿಭಾ ಪುರಸ್ಕಾರ, ರಾಜ್ಯಮಟ್ಟದ ಕ್ರೀಡಾಪಟುಗಳಿಗೆ ಸನ್ಮಾನ, ಶಿಕ್ಷಕರ ಗೆಳೆಯರ ಬಳಗದ ಆಶ್ರಯದಲ್ಲಿ ಸಾವಿತ್ರಿ ಬಾಯಿ ಫುಲೆ ಪುರಸ್ಕಾರ ಕಾರ್ಯಕ್ರಮ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಸರ್ಕಾರಿ ನೌಕರರು ಸಾಮಾಜಿಕ ಸೇವೆಯಲ್ಲೂ ಹಿಂದೆ ಬಿದ್ದಿಲ್ಲ, ನನ್ನ ಅವಧಿಯಲ್ಲಿ ಕೋವಿಡ್ ಸಂದರ್ಭ, ನೆರೆ, ಪುಣ್ಯಕೋಟಿ, ಮಡಿಕೇರಿ ಗುಡ್ಡಗಳ ಕುಸಿತ ಸಂದರ್ಭದಲ್ಲಿ ನೌಕರರಿಂದ ೭೦೦ ಕೋಟಿ ದೇಣಿಗೆ ನೀಡಿದ್ದಾರೆ

ಕನ್ನಡಪ್ರಭ ವಾರ್ತೆ ಕೋಲಾರ

ತಂದೆ ತಾಯಿ ಸಮಾಜದಲ್ಲಿ ತಲೆಯೆತ್ತಿ ನಡೆಯುವಂತೆ ನಿಮ್ಮ ಬದುಕುಕಟ್ಟಿಕೊಳ್ಳಿ, ಸಂಸ್ಕಾರವಿಲ್ಲದ ಸಂಸ್ಕೃತಿಯಾದ ವೃದ್ಧಾಶ್ರಮಕ್ಕೆ ನೂಕದೇ ಅವರೊಂದಿಗೆ ಜೀವನವಿಡೀ ಬದುಕುವ ಸಂಕಲ್ಪ ಮಾಡಿ ಎಂದು ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಕರೆ ನೀಡಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸರ್ವಸದಸ್ಯರ ಸಭೆ, ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ರಾಜ್ಯಮಟ್ಟದ ಕ್ರೀಡಾಸಾಧಕರಿಗೆ ಸನ್ಮಾನ, ಶಿಕ್ಷಕ ಗೆಳೆಯರ ಬಳಗದಿಂದ ಸಾಧಕ ಶಿಕ್ಷಕರಿಗೆ ಸಾವಿತ್ರಿಬಾಯಿ ಫುಲೆ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಿಮಗಾಗಿ ಅವರು ಬಾಳು ಸವೆಸಿದ್ದಾರೆ, ಅವರ ಆಶಯಗಳು, ಕನಸು ನನಸಾಗಿಸಿ, ಸಮಾಜಕ್ಕೆ ಕೊಡುಗೆಯಾಗುವ ವ್ಯಕ್ತಿಗಳಾಗಿ. ಸರ್ಕಾರಿ ನೌಕರರ ಸಂಘ ರಾಜ್ಯದ ೨೪ ಸಾವಿರ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು, ಇಂತಹ ಸಂಸ್ಕಾರದ ಮಾರ್ಗದರ್ಶನ ನೀಡುವ ಉದ್ದೇಶದಿಂದ ಎಂದರು.

ನಾವು ಸಾಮಾಜಿಕ ಸೇವೆಯಲ್ಲೂ ಹಿಂದೆ ಬಿದ್ದಿಲ್ಲ, ನನ್ನ ಅವಧಿಯಲ್ಲಿ ಕೋವಿಡ್ ಸಂದರ್ಭ, ನೆರೆ, ಪುಣ್ಯಕೋಟಿ, ಮಡಿಕೇರಿ ಗುಡ್ಡಗಳ ಕುಸಿತ ಸಂದರ್ಭದಲ್ಲಿ ನೌಕರರಿಂದ ೭೦೦ ಕೋಟಿ ದೇಣಿಗೆ ನೀಡಿದ್ದೇವೆ ಎಂದರು.

ವರ್ಗಾವಣೆ ನೀತಿ ಪಾಲಿಸಿ

ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮಾತನಾಡಿ, ಸರ್ಕಾರ ವರ್ಗಾವಣೆ ನೀತಿ ಪಾಲಿಸಬೇಕು, ಯಾವುದೇ ಅಧಿಕಾರಿ ಕನಿಷ್ಠ ೨-೩ ವರ್ಷ ಒಂದು ಕಡೆ ಇರಬೇಕು ಆಗ ಮಾತ್ರ ಅಭಿವೃದ್ಧಿ ನಿರೀಕ್ಷೆ ಸಾಧ್ಯ ಎಂದರು.

ಎಂಎಲ್‌ಸಿ ಇಂಚರ ಗೋವಿಂದರಾಜು ಮಾತನಾಡಿ, ಸರ್ಕಾರದ ಗ್ಯಾರಂಟಿ ಯೋಜನೆ ಜಾರಿ ಮಾಡುವುದೇ ನೌಕರರು. ಆರ್‌ಟಿಐ ದುರ್ಬಳಕೆ ಕುರಿತು ವಿಷಾದ ವ್ಯಕ್ತಪಡಿಸಿದರು.

ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ. ಸುರೇಶ್‌ಬಾಬು ಪ್ರಾಸ್ತಾವಿಕವಾಗಿ ಮಾತನಾಡಿ, ನೌಕರರ ಭವನ ನವೀಕರಣ ಕಾರ್ಯ ಆರಂಭಗೊಂಡಿದ್ದು, ಅನುದಾನ ನೀಡಲು ರಾಜ್ಯಾಧ್ಯಕ್ಷರು, ಜನಪ್ರತಿನಿಧಿಗಳಿಗೆ ಮನವಿ ಮಾಡಿ, ಆರೇಳು ತಿಂಗಳಲ್ಲಿ ಎರಡು ಅಂತಸ್ತು ಮುಗಿಸುವ ಸಂಕಲ್ಪವಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಸರ್ಕಾರಿ ನೌಕರರ ೨೦೦ಕ್ಕೂ ಹೆಚ್ಚು ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯ ಸಾಧಕ ಪ್ರತಿಭಾನ್ವಿತ ಮಕ್ಕಳಿಗೆ, ರಾಜ್ಯಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ ೩೫ ಕ್ರೀಡಾ ಸಾಧಕರಿಗೆ ಸನ್ಮಾನ, ಶಿಕ್ಷಕ ಗೆಳೆಯರ ಬಳಗದ ಆಶ್ರಯದಲ್ಲಿ ಸಾಧಕ ಶಿಕ್ಷಕರಿಗೆ ಸಾವಿತ್ರಿಬಾಯಿಫುಲೆ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ ಮಾಡಲಾಯಿತು.

ಬೆಂಗಳೂರು ಪೂರ್ವವಲಯ ಡಿಸಿಪಿ ದೇವರಾಜ್‌ ಮಾತನಾಡಿದರು. ರಾಜ್ಯ ನೌಕರರ ಸಂಘದ ಖಜಾಂಚಿ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ್ ಬಳ್ಳಾರಿ, ಹಿರಿಯ ಉಪಾಧ್ಯಕ್ಷರಾದ ರುದ್ರಪ್ಪ, ಎಸ್. ಬಸವರಾಜ್, ರಾಜ್ಯಪರಿಷತ್ ಸದಸ್ಯ ವೆಂಕಟರೆಡ್ಡಿ, ಜಿಲ್ಲಾ ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ, ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಗೌತಮ್, ಜಿಲ್ಲಾ ಕಾರ್ಯಾಧ್ಯಕ್ಷ ಎನ್. ಶ್ರೀನಿವಾಸರೆಡ್ಡಿ, ಗೌರವಾಧ್ಯಕ್ಷ ಎನ್. ರವಿಚಂದ್ರ, ಮತ್ತಿತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ