ಪ್ರಜಾಸೇವಾ ಆಂದೋಲನದಲ್ಲಿ ದೂರುಗಳ ಸುರಿಮಳೆ

KannadaprabhaNewsNetwork |  
Published : Nov 01, 2026, 02:45 AM IST
ಲೀಡ | Kannada Prabha

ಸಾರಾಂಶ

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ರೇಷ್ಮೆ, ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ 190ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿ ಸಾರ್ವಜನಿಕರು ದೂರುಗಳ ಸುರಿಮಳೆಗೈದರು.

ಕನ್ನಡಪ್ರಭ ವಾರ್ತೆ ಯಳಂದೂರು

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ರೇಷ್ಮೆ, ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ 190ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿ ಸಾರ್ವಜನಿಕರು ದೂರುಗಳ ಸುರಿಮಳೆಗೈದರು.

ಗುಂಬಳ್ಳಿ ಯರಗಂಬಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ನಂಜಶೆಟ್ಟಿರವರಿಗೆ ಸೇರಿದ ಕರಿಕಲ್ಲು ಗಣಿಗಾರಿಕೆಗೆ ಸರ್ಕಾರಿ ಜಮೀನು ಬಳಕೆಯಾಗಿದ್ದು ಇದು ತನಿಖೆಯಾಗಬೇಕು. ಈ ಬಗ್ಗೆ ಎಲ್ಲಾ ದಾಖಲೆಗಳಿದ್ದು ಹಲವು ಬಾರಿ ದೂರು ನೀಡಿದ್ದರೂ ಕೂಡ ಕ್ರಮ ವಹಿಸಿಲ್ಲ ಎಂದು ವೈ.ಕೆ.ಮೋಳೆ ನಾಗರಾಜು ದೂರು ಸಲ್ಲಿಸಿದರು. ವೈ.ಕೆ.ಮೋಳೆ ಗ್ರಾಮದಲ್ಲಿ ಅರ್ಧಕ್ಕೆ ನಿಂತಿರುವ ಅಂಬೇಡ್ಕರ್ ಸಮುದಾಯ ಭವನದ ಕಾಮಗಾರಿಯನ್ನು ಪುನರಾರಂಭಿಸುವಂತೆ ಗ್ರಾಮದ ನಂಜುಂಡಸ್ವಾಮಿ ಅರ್ಜಿ ಸಲ್ಲಿಸಿದರು. ಪಟ್ಟಣದ ಬಳೇಪೇಟೆಯಲ್ಲಿ ಖಾಲಿ ನಿವೇಶನಗಳನ್ನು ಅಕ್ರಮವಾಗಿ ಖಾತೆ ಮಾಡಲಾಗಿದೆ ಎಂಬುದು ಸುಳ್ಳು ಮಾಹಿತಿಯಾಗಿದೆ. ಈ ಬಗ್ಗೆ ಪಪಂ ಮುಖ್ಯಾಧಿಕಾರಿಗಳಿಗೆ ಮಾಹಿತಿಯೇ ಇಲ್ಲ. ಇಲ್ಲಿರುವ ನಿವೇಶಗಳ ಜಾಗದಲ್ಲಿ ಅಂಬೇಡ್ಕರ್ ಪಾರ್ಕ್‌ ಕೆಲವು ಜಾಗವನ್ನು ಮಾತ್ರ ಮೀಸಲಾಗಿಟ್ಟಿದೆ. ಅಧಿಕಾರಿಗಳು ಶಾಸಕರು, ಜಿಲ್ಲಾಧಿಕಾರಿಗಳನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಪಿ.ಮಾದೇಶ್ ದೂರು ಸಲ್ಲಿಸಿದರು.

ಅಂಬಳೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟಿದೆ. ಇಲ್ಲಿ ರಸ್ತೆ ಒತ್ತುವರಿಯಾಗಿದೆ. ಸ್ಮಶಾನದ ಅಭಿವೃದ್ಧಿಗೆ ಆದ್ಯತೆ ನೀಡಿ ಎಂದು ದೂರಲಾಯಿತು. ಟಿ. ಹೊಸೂರು ಗ್ರಾಮದಲ್ಲಿ ತಮಗೆ ನಿವೇಶನವನ್ನು ನೀಡಬೇಕು ಎಂದು ಮರಿಸ್ವಾಮಿ ಅರ್ಜಿ ಸಲ್ಲಿಸಿದರು. ಸರ್ಕಾರಿ ಜಮೀನು ಇದ್ದಲ್ಲಿ ನಿವೇಶನ ನೀಡಲು ಕ್ರಮ ವಹಿಸುವುದಾಗಿ ಉಸ್ತುವಾರಿ ಸಚಿವರು, ಶಾಸಕರು ಭರವಸೆ ನೀಡಿದರು. ಆಲ್ಕೆರೆ ಅಗ್ರಹಾರ ಗ್ರಾಮದಲ್ಲಿ ಇರುವ ಕೆರೆಗೆ ಚರಂಡಿ ನೀರು ಸೇರಿ ಇದು ಗಬ್ಬುನಾರುತ್ತಿದೆ. ಇಲ್ಲಿಗೆ ಚರಂಡಿ ನೀರು ಹೋಗದಂತೆ ತಡೆಯಬೇಕು. ಇಲ್ಲಿರುವ ರಸ್ತೆಗಳಲ್ಲಿ ಬಹುತೇಕ ಡೆಕ್‌ಗಳು ಹಾಳಾಗಿದ್ದು ಇದನ್ನು ದುರಸ್ತಿ ಮಾಡಬೇಕು ಎಂದು ರೇವಣ್ಣ ಅರ್ಜಿ ಸಲ್ಲಿಸಿದರು.

ಇದರೊಂದಿಗೆ ರಸ್ತೆ, ಚರಂಡಿ, ನರೇಗಾ ಕೂಲಿ, ಕುಡಿಯುವ ನೀರು, ಇ-ಖಾತೆ, ಜೆಜೆಎಂ ಸಮಸ್ಯೆ ಸೇರಿದಂತೆ ಇತರೆ ಅನೇಕರ ಸಮಸ್ಯೆಗಳ ಬಗ್ಗೆ ದೂರುಗಳ ಕೇಳಿ ಬಂದವು. ಇದರೊಂದಿಗೆ ಕೊಳ್ಳೇಗಾಲ, ಹನೂರು, ಚಾಮರಾಜನಗರ ತಾಲೂಕಿನ ಕೆಲವರು ಅರ್ಜಿಯನ್ನು ಸಲ್ಲಿಸಿದ್ದು ವಿಶೇಷವಾಗಿತ್ತು.

ಎಲ್ಲಾ ಸಮಸ್ಯೆಗಳಿಗೂ ಆದ್ಯತೆಗೆ ಅನುಗುಣವಾಗಿ ಬಗೆಹರಿಸಲು ಕ್ರಮ ವಹಿಸಲಾಗುವುದು. ಕೆಲವು ಕಡೆ ಅಧಿಕಾರಿಗಳು ಬಂದು ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ, ಶಾಸಕ ಎ.ಆರ್. ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಶ್ರೀರೂಪಾ ಭರವಸೆ ನೀಡಿದರು. ವಿವಿಧ ಇಲಾಖೆಗಳಿಂದ ನೀಡಲಾಗುವ ಸೌಲಭ್ಯಗಳ ಬಗ್ಗೆ ಇಟ್ಟಿದ್ದ ವಸ್ತುಪ್ರದರ್ಶನ ಗಮನ ಸೆಳೆಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಿಯದರ್ಶಿನಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಕೃತಿ ಬನ್ಸಾಲ್, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಜಿಪಂ ಕಾರ್ಯದರ್ಶಿ ಶೃತಿ ಡಿವೈಎಸ್‌ಪಿ ಮೋಹನ್, ತಹಶೀಲ್ದಾರ್ ಎಸ್.ಎಲ್. ನಯನಾ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ