ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ
ಹಸ್ತಾಂತರದ ನಂತರ ಶ್ರೀಗಳು ಆಶೀರ್ವಚನ ನೀಡಿ ಗ್ರಾಮೀಣ ಪ್ರದೇಶದ ಬಡಕೂಲಿ ಕಾರ್ಮಿಕ ವರ್ಗದ ಮಧ್ಯಮವರ್ಗದವರ ಜನರ ತುರ್ತು ಸೇವೆಗೆ ಇದರಿಂದ ಹೆಚ್ಚಿನ ಸಹಕಾರಿಯಾಗಲಿದೆ. ತುರ್ತು ಸಂದರ್ಭದಲ್ಲಿ ರೋಗಿಗಳನ್ನು ದೂರದ ತಾಲೂಕು ಜಿಲ್ಲಾ ಕೇಂದ್ರದ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಲು ಈ ಅಂಬುಲೆನ್ಸ್ ಸಹಕಾರಿಯಾಗಲಿದೆ ಎಂದರು.
ಸಂಸ್ಥೆಯ 28 ನೇ ಕಾರ್ಯಕ್ರಮ ಇದಾಗಿದ್ದು ಆಂಬ್ಯುಲೆನ್ಸ್‌ನಲ್ಲಿ ಅತ್ಯಾದುನಿಕ ಗುಣಮಟ್ಟದ 11 ವಿಧದ ತುರ್ತು ಹಾಗೂ ಜೀವರಕ್ಷಕ ಆರೋಗ್ಯ ರಕ್ಷಕ ಉಪಕರಣಗಳನ್ನು ಅಳವಡಿಸಲಾಗಿದೆ. 33 ಲಕ್ಷ ರು. ವೆಚ್ಚದ ಸುಸಜ್ಜಿತ ಆಂಬ್ಯುಲೆನ್ಸ್ ಸೌಲಭ್ಯಗಳನ್ನು ಕಲ್ಪಸಲಾಗಿದ್ದು ಈ ಸೌಲಭ್ಯದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ನಿರ್ದೇಶಕ ಆನಂದ ಹರಿಹರ ಹೇಳಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ನಾಗರಾಜ್‍ನಾಯ್ಕ್ ಮಾತನಾಡಿ ಇಂತಹ ಸೇವೆಗಳ ಮೂಲಕ ಕೊಡುಗೆ ನೀಡಿದ ಸಂಸ್ಥೆಯವರ ಕಾರ್ಯ ಪ್ರಶಂಸನೀಯವಾಗಿದೆ ಎಂದರು. ಬೆಂಗಳೂರಿನ ಪ್ರಗತಿ ಅಟೋಮೇಷನ್ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಅತುಲ್ ಎಸ್ ಬಾರಂಗಿ ಹಾಗೂ ಕುಟುಂಬದವರು ಆಂಬ್ಯುಲೆನ್ಸ್ ಅಸ್ಪತ್ರೆಗೆ ಹಸ್ತಾಂತರಿಸಿದರು.
---------------
ಹೊಂಬುಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಡುಗೆಯಾಗಿ ನೀಡಲಾದ ಆಂಬ್ಯುಲೆನ್ಸ್‌ನ್ನು ಹಸ್ತಾಂತರಿಸಲಾಯಿತು.