ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಶಿವಕುಮಾರಸ್ವಾಮಿ ಭವನದಲ್ಲಿ ಬೆಂಗಳೂರು ವಾಸವಿಚಾರಿಟಬಲ್ ಟ್ರಸ್ಟ್, ಮಾರ್ಗದರ್ಶಿ ವಿಕಲಚೇತನರ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಿದ್ದ ೧೦೧ ಮತ್ತು ೧೦೨ನೇ ಗೋದಾನಗಳ ಸಮರ್ಪಣೆ ಹಾಗೂ ಫಲಾನುಭವಿಗಳ ಸಮಾಗಮ ಕಾರ್ಯಕ್ರಮ ಉದ್ಘಾಟಿಸಿ, ಸಾನ್ನಿದ್ಯ ವಹಿಸಿ ಮಾತನಾಡಿದರು.
ನಮ್ಮ ಭಾರತದ ಸಂಸ್ಕೃತಿ ಪರಂಪರೆಯಲ್ಲಿ ಗೋವುಗಳಿಗೆ ಮಹತ್ವದ ಸ್ಥಾನ ನೀಡಲಾಗಿದೆ, ಗೋವಿನಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಈಗಲೂ ಜನಜನಿತವಾಗಿದೆ. ದಾನಕೊಡುವವರು ಯಾವುದಾದರೂ ಒಂದು ವಸ್ತುವನ್ನು ದಾನ ನೀಡಿದಾಗ, ಅವರ ಮನಸ್ಸಿನಲ್ಲಿ ಆತ್ಮತೃಪ್ತಿ, ಕೃತಜ್ಞತಾ ಭಾವ ಮೂಡುತ್ತದೆ ಎಂದರು.ವಿಶೇಷಚೇತನರ ಬದುಕು ಸುಧಾರಿಸುವ ನಿಟ್ಟಿನಲ್ಲಿ, ಅವರು ಆರ್ಥಿಕವಾಗಿ ಸಬಲರನ್ನಾಗಿಸುವ ಸಂಬಂಧ ವಾಸವಿಚಾರಿಟಬಲ್ ಟ್ರಸ್ಟ್, ಮಾರ್ಗದರ್ಶಿ ವಿಕಲಚೇತನರ ಸಂಸ್ಥೆ ಸಹಯೋಗದಲ್ಲಿ ತೀವ್ರತರ ಅಂಗವೈಕಲ್ಯ ಹೊಂದಿರುವ ಕುಟುಂಬಗಳಿಗೆ ಈವರಗೆ ೧೦೦ ಗೋವುಗಳನ್ನು ದಾನವಾಗಿ ನೀಡಿದ್ದು, ಇಂದಿನ ಕಾರ್ಯಕ್ರಮದಲ್ಲಿ ೧೦೧ ಮತ್ತು ೧೦೨ ನೇ ಗೋವುಗಳನ್ನು ಸಮರ್ಪಣೆ ಮಾಡುತ್ತಿರುವುದು ಸಮಾಜಮುಖಿ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದೆ ಎಂದರು,
ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ದಿ ನಿಗಮದ ಅಧ್ಯಕ್ಷ ಕೆ.ವಿ.ರಾಮಪ್ರಸಾದ್ ಮಾತನಾಡಿದರು.
ಈ ಸಂದರ್ಭದಲ್ಲಿ ವಾಸವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪೋತಣ್ಣಶೆಟ್ಟಿ, ಟ್ರಸ್ಟಿ ಗಿರಿಜಾನವೀನ್, ಮಾರ್ಗದರ್ಶಿ ವಿಕಲಚೇತನರ ಸಂಸ್ಥೆ ಅಧ್ಯಕ್ಷೆ ಶಾಂತಲಕ್ಷ್ಮೀ, ಉಪಾಧ್ಯಕ್ಷೆ ಕೆ.ಎಂ.ಗೀತಾಮೃತ, ಯೋಜನಾನಿರ್ದೇಶಕ ಕೆ.ವಿ.ರಾಜಣ್ಣ, ಸಂಸ್ಥೆಯ ಸಿಬ್ಬಂದಿ, ದಾನಿಗಳಾದ ನಾರಾಯಣ, ವರದರಾಜು, ಶ್ರೀಧರ್ ಬೆಂತೋಲ ವಿಶೇಷಚೇತನರ ಆರೈಕೆದಾರರು ಇದ್ದರು.