ಬಿಜೆಪಿ ಹೋರಾಟ ರೈತರ ವಿರುದ್ಧವೇ: ಮಧು ಪ್ರಶ್ನೆ

KannadaprabhaNewsNetwork |  
Published : Nov 01, 2026, 02:45 AM IST
ಮಧು  ಪ್ರಶ್ನೆ | Kannada Prabha

ಸಾರಾಂಶ

Is the BJP's struggle actually against the farmers? Madhu asks

ಹಾಲಿನ ದರ ₹8 ಏರಿಕೆಯಲ್ಲಿ ₹7 ರೈತರಿಗೇ ಹೋಗುತ್ತೇ, ಆಗಿದ್ದಾಗ ಬಿಜೆಪಿ ಹೋರಾಟ ಯಾರ ವಿರುದ್ಧ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹಾಲಿನ ದರವನ್ನು ₹8 ರು. ಹೆಚ್ಚಳ ಮಾಡಲಾಗಿದ್ದು, ಇದರಲ್ಲಿ ₹7 ರೈತರಿಗೆ ತಲುಪುತ್ತದೆ. ಆಗಿದ್ದಾಗ ಬಿಜೆಪಿ ಹೋರಾಟ ಯಾರ ವಿರುದ್ಧ, ರೈತರ ವಿರುದ್ಧವೇ? ಎಂದು ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ತಿಳಿದಿರುವ ಪ್ರಕಾರ 10 ವರ್ಷಗಳ ಹಿಂದೆ ಹಾಲಿನ ದರ ಹೆಚ್ಚಳ ಮಾಡಿದ್ದು, ಅದರ ಹೊರತಾಗಿ ಈಗ ಹೆಚ್ಚಳ ಆಗಿದೆ. ಇದರಿಂದ ಗ್ರಾಹಕರಿಗೆ ಸ್ವಲ್ಪ ಮಟ್ಟಿಗೆ ಹೊರೆ ಆಗಬಹುದು. ಆದರೆ, ರೈತರಿಗೆ ಹೆಚ್ಚು ಅನುಕೂಲ ಆಗಲಿದೆ. ಹೀಗಿರುವಾಗ ಬಿಜೆಪಿ ದರ ಹೆಚ್ಚಳ ಸಂಬಂಧಿಸಿದಂತೆ ಹೋರಾಟ ಮಾಡುತ್ತಿಲ್ಲ. ಅವರ ರೈತರ ವಿರುದ್ಧದ ಹೋರಾಟ ಮಾಡುತ್ತಿದ್ದಾರೆ ಎಂದು ಕುಟುಕಿದರು.

ರೈತರಿಗೆ ಜಾನುವಾರುಗಳಿಗೆ ಮೇವು ಮತ್ತು ಔಷಧಿ ತರಲು ತುಂಬಾ ಖರ್ಚಾಗುತ್ತದೆ. ಬೈಕ್ ಪೇಟ್ರೋಲ್ ರೆಟ್ ಕೂಡ ಜಾಸ್ತಿಯಾಗಿದೆ. ಇದೆಲ್ಲವೂ ರೈತರ ಬದುಕಿಗೆ ಬಹಳ ಸಂಕಷ್ಟ ತಂದಿದೆ. ಹಾಲಿನ ದರ ಹೆಚ್ಚಳದಿಂದ ಈ ಹೊರೆ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತದೆ ಎಂದು ಖುಷಿ ಪಡಬೇಕು, ಅದನ್ನು ಬಿಟ್ಟು ಹೋರಾಟ ಮಾಡುವುದಲ್ಲ ಎಂದರು.

ಕಬ್ಬು ಬೆಳೆ ಬೆಲೆಯ ಹೆಚ್ಚಳದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಕಬ್ಬು ಬೆಳೆಗೆ ಎಂಎಸ್‌ಪಿ ಕೊಡಬೇಕು. ಅದು ರಾಜ್ಯ ಹಾಗೂ ಕೇಂದ್ರ ಸರ್ಕಾರ ಇಬ್ಬರು ಸೇರಿ ಬೆಲೆಯನ್ನು ಕೊಡಬೇಕಾಗುತ್ತದೆ. ಈ ಕುರಿತು ಸಿಎಂ ರೈತರ ಜೊತೆ ಮಾತನಾಡಿದ್ದಾರೆ.

ಆದಷ್ಟು ಬೇಗ ಕಬ್ಬು ಬೆಳೆಗಾರರ ಬಗ್ಗೆ ತೀರ್ಮಾನ ತೆಗೆದುಕೊಳ್ಳತ್ತಾರೆ. ಒಂದು ವೇಳೆ ಕಬ್ಬು ಬೆಳೆಗಾರರಿಗೆ ಅನುಕೂಲವಾಗಲೆಂದು ಸಕ್ಕರೆ ಬೆಳೆ ಹೆಚ್ಚಳ ಮಾಡಿದರೆ, ಬಿಜೆಪಿಯವರು ಇದನ್ನು ಕೂಡ ಗ್ರಾಹಕರಿಗೆ ಹೊರೆ ಎಂದು ಹೇಳುತ್ತಾರೆ ಟೀಕಿಸಿದರು.

ಹಾಲಿನ ಪ್ರೋತ್ಸಾಹ ಧನ ಬಾಕಿ ವಿಚಾರ ಕುರಿತು ಪ್ರತಿಕ್ರಿಯಿಸಿ, ಈ ಬಗ್ಗೆ ನನಗೆ ಹೆಚ್ಚಾಗಿ ತಿಳಿದಿಲ್ಲ. ಆದರೆ, ನಮ್ಮ ಸರ್ಕಾರ ಯಾವುದನ್ನು ಬಾಕಿ ಉಳಿಸಿಕೊಳ್ಳಲ್ಲ. ತಡವಾಗಬಹುದು ಆದರೆ ಕೊಟ್ಟೆ ಕೊಡುತ್ತೇವೆ. ಅರ್ಧಕ್ಕೆ ಬಿಟ್ಟು ಓಡಿ ಹೋಗು ಚಾಳಿ ನಮಗಿಲ್ಲ. ಬಸ್ ದರ ಹೆಚ್ಚಾಗಿ, ಡಿಸೇಲ್ ಗೆ ಕಾಸಿಲ್ಲ ಎಂದು ಸಿಎಂ ಹೇಳಿದ್ದಾರೆ ಎಂಬ ಪತ್ರಕರ್ತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಸ್ ದರ ಏರಿಕೆ ವಿಚಾರ ಬಗ್ಗೆ ಸಾರಿಗೆ ಸಚಿವರು ನಿರ್ಧಾರ ತೆಗೆದುಕೊಳ್ಳತ್ತಾರೆ ಎಂದರು.

ದೆಹಲಿ ಹೋರಾಟ ಕುರಿತು ಪ್ರತಿಕ್ರಿಯಿಸಿ, ರಾಜ್ಯ ಮಟ್ಟದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನನ್ನ ಇಲಾಖೆಯಿಂದ ಮಾಡುತ್ತಿರುವುದರಿಂದ ನಾನು ದೆಹಲಿಯ ಹೋರಾಟಕ್ಕೆ ಹೋಗುತ್ತಿಲ್ಲ. ಇಲ್ಲಿನ ಕಾರ್ಯಕ್ರಮ ಮುಗಿಸಿಕೊಂಡು ನಂತರ ಹೋರಾಟಕ್ಕೆ ಹೋಗುತ್ತೇನೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ