ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ವತಿಯಿಂದ ನಗರದ ಮಂಡ್ಯ ವಿವಿ ಆವರಣದಲ್ಲಿ ನಡೆದ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮತ್ತು ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಸಿದ್ದರಾಮಯ್ಯ ಅವರನ್ನು ಸ್ಟಿಂಗ್ ಆಪರೇಷನ್ ಮಾಡಿ ಅದರಲ್ಲಿ ಡಿ.ಕೆ.ಶಿವಕುಮಾರ್ ಅವರನ್ನೂ ಸಿಲುಕಿಸಲು ತಂತ್ರ ನಡೆಸಿದ್ದೀರಿ. ಅದು ಎಂದಿಗೂ ಸಾಧ್ಯವಾಗದು ಎಂದರು.
ಹಲವಾರು ಸಂದರ್ಭಗಳಲ್ಲಿ ನಮ್ಮ ರಾಷ್ಟ್ರ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಟೀಕೆ ಮಾಡುತ್ತೀರಿ. ಇತ್ತೀಚೆಗೆ ಅವರ ಪುತ್ರ ಪ್ರಿಯಾಂಕ ಖರ್ಗೆ ಅವರನ್ನು ಏಕ ವಚನದಲ್ಲಿ ಟೀಕಿಸುತ್ತೀರಿ. ನಮಗೂ ಸಹ ನಿಮಗಿಂತಲೂ ಹೆಚ್ಚಾಗಿ ಏಕವಚನ ಪ್ರಯೋಗಿಸಲು ತಿಳಿದಿದೆ. ಆದರೆ, ನಾವು ಅಂತಹ ದಾರಿ ಹಿಡಿಯುವುದಿಲ್ಲ ಎಂದು ಎಚ್ಚರಿಸಿದರು.ಕರಾವಳಿಯಲ್ಲಿ ಕಿಚ್ಚು ಹಚ್ಚಲು ಬಿಡಲ್ಲ:
ಮೇಕೆದಾಟಿ ಯೋಜನೆಯ ಕನಸು ಕಂಡವರು ಡಿ.ಕೆ.ಶಿವಕುಮಾರ್ ಅವರು, ಅದಕ್ಕಾಗಿ ಹೋರಾಟವನ್ನೂ ಮಾಡಿದ್ದೇವೆ. ಕೇಂದ್ರ ಸಚಿವರು ತಾವು ಅಕಾರಕ್ಕೆ ಬಂದರೆ ಐದೇ ನಿಮಿಷದಲ್ಲಿ ಅನುಮತಿ ಕೊಡಿಸುವುದಾಗಿ ಹೇಳಿ ಈವರೆವಿಗೂ ಅನುಮತಿ ಕೊಡಿಸಲಿಲ್ಲ. ನಿತ್ಯ ಡಿ.ಕೆ.ಶಿ.ಯವರನ್ನು ಟೀಕಿಸುವುದೇ ಕಾಯಕವಾಗಿ ಮಾಡಿಕೊಂಡಿದ್ದೀರಿ. ಮೇಕೆದಾಟು ಯೋಜನೆಯಿಂದ ಶಿಂಷಾವರೆವಿಗೂ ನೀರು ಇರುತ್ತದೆ ಎಂಬುದನ್ನು ಜಿಲ್ಲೆಯ ಜನತೆ ಅರ್ಥ ಮಾಡಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.
ಈ ಹಿಂದೆ ಅಧಿಕಾರದಲ್ಲಿದ್ದ ಜೆಡಿಎಸ್‌ನವರು ನಮ್ಮನ್ನು ಅಶಕ್ತರು, ಅವರಿಂದ ಏನೂ ಆಗುವುದಿಲ್ಲ ಎಂದು ಮೂದಲಿಸುತ್ತಿದ್ದರು. ನಮ್ಮ ನಾಯಕರಾದ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ನಮಗೆ ಧೈರ್ಯ ತುಂಬಿ ಚುನಾವಣಾ ಪೂರ್ವದಲ್ಲಿ ಏನೆಲ್ಲಾ ಮಾಡಬೇಕು ಹಾಗೂ ಕಾರ್ಯಕರ್ತರು ಹೇಗೆ ಕೆಲಸ ಮಾಡಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ನೀಡಿದ್ದರು ಎಂದು ವಿವರಿಸಿದರು.