ಮಾನವ ಹಕ್ಕುಗಳಿಗೋಸ್ಕರ ಕಾರ್ಯನಿರ್ವಹಿಸುವ ವಿಕನಸ ಸಂಸ್ಥೆ: ಎ.ಎಂ.ವರ್ಗೀಸ್ ಕ್ಲೀಟಸ್

KannadaprabhaNewsNetwork |  
Published : Apr 07, 2026, 01:15 AM IST
ಜಿಲ್ಲಾ ಮಟ್ಚದಲ್ಲಿ ಜೀತ ವಿಮುಕ್ತಿ ಹೊಂದಿದವರ ಒಕ್ಕೂಟ ಪ್ರಾರಂಬಿಸಲು ಪೂರ್ವ ತರಬೇತಿ ಕಾರ್ಯಕ್ರಮ | Kannada Prabha

ಸಾರಾಂಶ

ತರೀಕೆರೆವಿಕಸನ ಸಂಸ್ಥೆ ಕಳೆದ 37 ವರ್ಷಗಳಿಂದ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಅರ್ಥಿಕ ಅಭಿವೃದ್ಧಿ ಹಾಗೂ ಮಾನವ ಹಕ್ಕುಗಳಿಗೋಸ್ಕರ ಕಾರ್ಯಗಳನ್ನು ನಿರ್ವಹಿಸುತ್ತಿರುವ ವಿಕನಸ ಸಂಸ್ಥೆ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಜೀತ ವಿಮುಕ್ತರನ್ನು ಗುರುತಿಸಿ ಪುನರ್ವಸತಿ ಕಲ್ಲಿಸುವಲ್ಲಿ ನಿರತವಾಗಿದೆ ಎಂದು ಸಂಸ್ಥೆ ಮುಖ್ಯಸ್ಥ ಎ.ಎಂ.ವರ್ಗೀಸ್ ಕ್ಲೀಟಸ್ ಹೇಳಿದ್ದಾರೆ.

ಜಿಲ್ಲಾ ಮಟ್ಚದಲ್ಲಿ ಜೀತ ವಿಮುಕ್ತಿ ಹೊಂದಿದವರ ಒಕ್ಕೂಟಕ್ಕೆ ಪೂರ್ವ ತರಬೇತಿ

ಕನ್ನಡಪ್ರಭ ವಾರ್ತೆ, ತರೀಕೆರೆ

ವಿಕಸನ ಸಂಸ್ಥೆ ಕಳೆದ 37 ವರ್ಷಗಳಿಂದ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಅರ್ಥಿಕ ಅಭಿವೃದ್ಧಿ ಹಾಗೂ ಮಾನವ ಹಕ್ಕುಗಳಿಗೋಸ್ಕರ ಕಾರ್ಯಗಳನ್ನು ನಿರ್ವಹಿಸುತ್ತಿರುವ ವಿಕನಸ ಸಂಸ್ಥೆ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಜೀತ ವಿಮುಕ್ತರನ್ನು ಗುರುತಿಸಿ ಪುನರ್ವಸತಿ ಕಲ್ಲಿಸುವಲ್ಲಿ ನಿರತವಾಗಿದೆ ಎಂದು ಸಂಸ್ಥೆ ಮುಖ್ಯಸ್ಥ ಎ.ಎಂ.ವರ್ಗೀಸ್ ಕ್ಲೀಟಸ್ ಹೇಳಿದ್ದಾರೆ.

ವಿಕಸನ ಸಂಸ್ಥೆಯಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೀತ ಪದ್ಧತಿಯಿಂದ ಬಿಡುಗಡೆ ಹೊಂದಿದ ಕಾರ್ಮಿಕರ ಪೂರ್ವ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ 10 ವರ್ಷಗಳಿಂದ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯಲ್ಲಿ ಜೀತ ವಿಮುಕ್ತರನ್ನು ಗುರುತಿಸಿ ಜೀತದಲ್ಲಿ ದುಡಿಯುತ್ತಿದ್ದವರ ಮನಃ ಪರಿವರ್ತನೆ ಮಾಡಿ ಅವರನ್ನು ಸರ್ಕಾರ ಹಾಗೂ ಸಂಘ ಸಂಸ್ಥೆಗಳ ಸಹಕಾರದಿಂದ ಬಿಡುಗಡೆಗೊಳಿಸಿ, ಅವರಿಗೆ ಪುನರ್ವಸತಿ ಕಲ್ಲಿಸುವ ಮೂಲಕ ಮಾನವ ಹಕ್ಕುಗಳಿಗೋಸ್ಕರ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು.ಕಾರ್ಮಿಕ ಪದ್ಧತಿ ಅಧಿನಿಯಮ 1979 ನೇ ಪ್ರಕಾರ ಯಾವುದೇ ವ್ಯಕ್ತಿಗಳನ್ನು ಬಲವಂತವಾಗಿ ದುಡಿಸಿಕೊಳ್ಳುವುದು ತಪ್ಪು ಹಾಗೂ ದುರ್ಬಲ ವರ್ಗದವರಿಗೆ ಆರ್ಥಿಕ, ದೈಹಿಕ ಶೋಷಣೆ ನೀಡಿ ದುಡಿಸಿಕೊಳುವುದು ಕಂಡುಬಂದರೆ ಈ ಕಾಯ್ದೆ ಉಲ್ಲಂಘಿಸಿದವರಿಗೆ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ವಿವರಿಸಿದರು.

ಬೆಂಗಳೂರಿನ ಐಜೆಎಂ ಸಂಸ್ಥೆ ಸಿಬ್ಬಂದಿ ಯೇಸುಪಾಥಮ್ ಮಾತನಾಡಿ ಜೀತದಿಂದ ಮುಕ್ತರಾದ ಕಾರ್ಮಿಕರ ಪುರ್ನವಸತಿ ಮತ್ತು ಅಭಿವೃದ್ಧಿ ಕುರಿತು ಅದರ ವಿವಿಧ ಆಯಾಮಗಳನ್ನು ವಿವರಿಸಿ ಮಾತನಾಡಿ ಜೀತಪದ್ಧತಿ ಒಂದು ಸಾಮಾಜಿಕ ಪಿಡುಗು ಇದನ್ನು ಹೋಗಲಾಡಿಸಲು ತಕ್ಕ ಬುನಾದಿ ಹಾಕಬೇಕೆಂದು ತಿಳಿಸಿದರು.

ಬೆಂಗಳೂರಿನ ಐಜೆಎಂ ಸಂಸ್ಥೆ ಮತ್ತೋರ್ವ ಸಿಬ್ಬಂದಿ ಜೇಸುದಾಸ್ ಮಾತನಾಡಿ ಸರ್ಕಾರದ ಮಟ್ಟದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು, ಉಪ ವಿಭಾಗಾಧಿಕಾರಿ, ತಾಲೂಕು ದಂಡಾಧಿಕಾರಿ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ ಇವರ ಸಹಕಾರದೊಂದಿಗೆ ಜೀತ ಕಾರ್ಮಿಕರ ಬಿಡುಗಡಗೆ ಸರ್ಕಾರವು ನೇಮಕ ಮಾಡಿರುತ್ತಾರೆ, ಜೀತ ವಿಮುಕ್ತಿ ಆದ ಕಾರ್ಮಿಕರಿಗೆ 30,000 ರು.ಮತ್ತು ಪ್ರತಿ ತಿಂಗಳು ಪಿಂಚಣಿ ಹಣವಾಗಿ 2000 ರು.ಗಳನ್ನು ಇಲಾಖೆ ಕೊಡುತ್ತದೆ

ಎಂದು ಅವರು ಹೇಳಿದರು..ವಕೀಲರಾದ ವಿಬಾ ವರ್ಗೀಸ್ ಅವರು ಮಾತನಾಡಿ ಜಿಲ್ಲಾ ಮತ್ತು ಪ್ರಾದೇಶಿಕ ವಲಯದಲ್ಲಿ ಒಂದು ಒಕ್ಕೂಟ ರಚನೆಯನ್ನು ಮಾಡಬೇಕು, ಇದರಿಂದ ಜೀತವಿಮುಕ್ತ ಕಾರ್ಮಿಕರಿಗೆ ಸರ್ಕಾರದಿಂದ ಇರುವ ಯೋಜನೆಗಳೇನು, ಅದನ್ನು ಹೇಗೆ ಪಡೆದುಕೊಳ್ಳಬೇಕು ಮತ್ತು ಅವುಗಳಿಗೋಸ್ಕರ ಹೋರಾಟ ಮಾಡುವುದು ದೌರ್ಜನ್ಯ ಎಸುಗುತ್ತಿರುವ ಮಾಲೀಕರ ವಿರುದ್ಧ ದ್ವನಿ ಏತ್ತಬೇಕು. ಈ ಎಲ್ಲಾ ಮಾಹಿತಿಗಳು ಇಂತಹ ತರಬೇತಿಗಳಲ್ಲಿ ಭಾಗವಹಿಸುವುದರಿಂದ ಸಹಾಯವಾಗುತ್ತದೆ ಎಂದು ಅವರು ವಿವರಿಸಿದರು.. ವಿಕಸನ ಸಂಸ್ಥೆ ಸಂಯೋಜಕರಾದ ನವೀನ್, ಚೆನ್ನಬಸವೇಶ್ವರ, ಉದಯೋನ್ಮುಖ ಒಕ್ಕೂಟದ ಕಾರ್ಯದರ್ಶಿ ಮೂರ್ತಿ ಮತ್ತಿತರರು ಕಾರ್ಯಕ್ರಮದಲ್ಲಿ

ಭಾಗವಹಿಸಿದ್ದರು.----------------ಫೋಟೋ ಇದೆಃ6ಕೆಟಿಆರ್.ಕೆ.10ಃ ತರೀಕೆರೆಯಲ್ಲಿ ವಿಕಸನ ಸಂಸ್ಥೆ ವತಿಯಿಂದ ಜಿಲ್ಲಾ ಮಟ್ಚದಲ್ಲಿ ಜೀತ ವಿಮುಕ್ತಿ ಹೊಂದಿದವರ ಒಕ್ಕೂಟ ಪ್ರಾರಂಬಿಸಲು ಪೂರ್ವ ತರಬೇತಿ ಕಾರ್ಯಕ್ರಮ

ಏರ್ಪಡಿಸಲಾಗಿತ್ತು. ವಿಕಸನ ಸಂಸ್ಥೆ ಮುಖ್ಯಸ್ಥರಾದ ಎ.ಎಂ.ವರ್ಗೀಸ್ ಕ್ಲೀಟಸ್ ಮತ್ತಿತರರು ಇದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರ ಕಡಿದು ಮಹಿಳಾ ಕಾಲೇಜು ಕಟ್ಟಲು ಅವಕಾಶ ಕೊಡಲ್ಲ
ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವುದಕ್ಕೆ ಹೆಮ್ಮೆಪಡಿ