ಬೆಂಬಿಡದ ಕೊಳೆ, ಎಲೆ ಚುಕ್ಕಿ,ಹಳದಿ ಎಲೆ ರೋಗ । ನಿರಂತರ ಮಳೆಗೆ ಕಾಫಿ ಕಾಳು ಮೆಣಸಿಗೂ ಹಬ್ಬಿದೆ ಕೊಳೆರೋಗ । ಔಷಧ ಸಿಂಪಡಿಸಿದರೂ ನಿಯಂತ್ರಣವಾಗದ ರೋಗದಿಂದ ಬೆಳೆಗಾರಿಗೆ ಸಂಕಷ್ಟ
ಕನ್ನಡಪ್ರಭ ವಾರ್ತೆ ಶೃಂಗೇರಿ
ಅಡಕೆ ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆ. ಮಲೆನಾಡಿನಲ್ಲಿ ರೈತರು ಹಿಂದಿನಿಂದಲೂ ಪಾರಂಪರಿಕವಾಗಿ ಅಡಕೆ ಬೆಳೆ ಬೆಳೆಯುತ್ತಾ ಬಂದಿದ್ದಾರೆ. ಆದರೆ ಕಳೆದ ಆರೇಳು ದಶಕಗಳಿಂದ ಅಡಕೆಗೆ ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗ ಹರಡಿ ಬಹುತೇಕ ಅಡಕೆ ಫಸಲು ನಾಶವಾಗಿ ಮರಗಳು ಒಣಗಿ ಹೋಗಿ ತೋಟಗಳೇ ನಾಶವಾಗುತ್ತಿವೆ. ಇದಕ್ಕೆ ಕೊಳೆ ರೋಗವೂ ಸೇರಿ ಅಡಕೆ ಬೆಳೆಯೇ ನೆಲಕಚ್ಚುವ ಸ್ಥಿತಿ ಎದುರಾಗಿದೆ.ಸುಮಾರು 60ರ ದಶಕದಲ್ಲಿ ಹಳದಿ ಎಲೆ ರೋಗ, 2020 ರಿಂದ ಕಾಣಿಸಿಕೊಂಡ ಎಲೆ ಚುಕ್ಕಿ ರೋಗ್ಕ ಮಲೆನಾಡಿನ ತೋಟಗಳಲ್ಲಿ ಹಂತ ಹಂತವಾಗಿ ವ್ಯಾಪಿಸತೊಡಗಿತು. . ಹಳದಿ ಎಲೆ ರೋಗ,ಎಲೆ ಚುಕ್ಕಿ ರೋಗಕ್ಕೆ ಫಸಲು ನಾಶ,ಇಳುವರಿ ಕುಸಿತ,ಅಡಕೆ ಮರಗಳು ತುಂಡಾಗಿ ಬೀಳತೊಡಗಿವೆ.
ಅಡಕೆ ಕೃಷಿ ಮಲೆನಾಡಿನ ರೈತರ ಜೀವನಾಧಾರ ಕಸುಬಾಗಿದೆ. ತಾಲೂಕಿನಲ್ಲಿ ಸುಮಾರು 3720 ಹೆಕ್ಟೆರ್ ನಲ್ಲಿ ಅಡಕೆ, 8000 ಹೆಕ್ಟೆರ್ ನಲ್ಲಿ ಕಾಳುಮೆಣಸು ಬೆಳೆ ಬೆಳೆಯಲಾಗುತ್ತಿತ್ತು. ಇಲ್ಲಿನ ಆರ್ಥಿಕತೆ, ವಾಣಿಜ್ಯ ಚಟುವಟಿಕೆಗಳು ಅಡಕೆ ಮೇಲೆ ಅವಲಂಬಿತವಾಗಿ ನಿಂತಿದೆ. ಆದರೆ ಕಳೆದ ಆರೇಳು ದಶಕಗಳಿಂದ ಹಳದಿ ಎಲೆ ರೋಗ, ಎಲೆಚುಕ್ಕಿ ರೋಗ, ಕೊಳೆರೋಗಗಳು ಇನ್ನಿಲ್ಲದಂತೆ ಕಾಡುತ್ತಿವೆ. ಎಷ್ಟು ಬಾರಿ ಔಷದಿ ಸಿಂಪಡಿಸಿದರೂ ರೋಗಭಾಧೆ ವ್ಯಾಪಕವಾಗತೊಡಗಿದೆ.
ಈ ನಡುವೆ ಅಡಕೆ ವಿಷಕಾರಿ ವಸ್ತು ಎಂಬ ಅಡಕೆ ನಿಷೇಧದ ತೂಗುಕತ್ತಿ ರೈತರನ್ನು ಕಂಗೆಡಿಸಿತ್ತು. ಅಡಕೆ ಬೆಳೆಗೆ ಉಂಟಾಗುತ್ತಿರುವ ರೋಗದಿಂದ ರೈತರು ಸಂಕಷ್ಟದಲ್ಲಿದ್ದರೂ ಅಡಕೆ ಸಂಶೋಧನಾ ಕೇಂದ್ರ ಹಾಗೂ ವಿಜ್ಞಾನಿಗಳ ತಂಡಗಳ ಅಧ್ಯಯನಕ್ಕೆ ಸರಿಯಾದ ಪಲಿತಾಂಶ ಸಿಗುತ್ತಿಲ್ಲ.
ಒಟ್ಟಾರೆ ಮಳೆ, ಬಿಸಿಲು, ಹವಾಮಾನ ವೈಪರೀತ್ಯ ಏನೆ ಇದ್ದರೂ ಎಲೆ ಚುಕ್ಕಿ ರೋಗ ಮಾತ್ರ ತನ್ನ ವ್ಯಾಪಕತೆ ಹೆಚ್ಚಿಸಿಕೊಳ್ಳುತ್ತಿದೆ. ಸರ್ಕಾರದ ಯಾವುದೇ ಕಾರ್ಯಕ್ರಮಗಳು ಪರಿಣಾಮ ಬೀರಿಲ್ಲ. ಇನ್ನಾದರೂ ಕೇಂದ್ರ, ರಾಜ್ಯ ಸರ್ಕಾರಗಳು ಈ ವಿಷಯದಲ್ಲಿ ರಾಜಕಾರಣ ಬಿಟ್ಟು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಂಡುಹಿಡಿಯಲು ಮುಂದಾಗಬೇಕಿದೆ.
- ಶ್ರೀಕೃಷ್ಣ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ.
ಸರ್ಕಾರಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಅಡಕೆ ಉಳಿಸುವ ಪ್ರಯತ್ನಕ್ಕೆ ಮುಂದಾಗಬೇಕು. ಕಳೆದೆರೆಡು ವರ್ಷಗಳಿಂದ ಅಡಕೆ ಬೆಳೆಗೆ ಬಂದಿರುವ ಸಂಕಷ್ಟವನ್ನು ಯಾವ ಸರ್ಕಾರವೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ .ಇನ್ನಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು.
28 ಶ್ರೀ ಚಿತ್ರ 1-ಶೃಂಗೇರಿ ತಾಲೂಕಿನಲ್ಲಿ ಎಲೆಚುಕ್ಕಿ ರೋಗ ಪೀಡಿತ ಅಡಕೆ ತೋಟ.
28 ಶ್ರೀ ಚಿತ್ರ 2-ಎಲೆ ಚುಕ್ಕಿ ರೋಗ ಪೀಡಿತ ಅಡಕೆ ಹೆಡಲು28 ಶ್ರೀ ಚಿತ್ರ 3-ಶ್ರೀ ಕೃಷ್ಣ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ
28 ಶ್ರೀ ಚಿತ್ರ 4-ರಾಜೇಶ್ ಕೃಷಿಕ.