ಕನ್ನಡಪ್ರಭ ವಾರ್ತೆ ಕಾಗವಾಡ
ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದ ಶ್ರೀ ಸಿದ್ದೇಶ್ವರ ಜಾತ್ರೆ, ಕೃಷಿ ಪ್ರದರ್ಶನದ ನಿಮಿತ್ತ ಮಂಗಳವಾರ ಶ್ವಾನ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಭಾರತೀಯ ಸೇನೆ ಹಾಗೂ ಪೊಲೀಸ್ ಇಲಾಖೆಯಲ್ಲಿ ಶ್ವಾನಗಳು ಮಾಡುವ ಕಾರ್ಯ ಶ್ಲಾಘನೀಯ ಎಂದರು.
ಈ ವೇಳೆ ಜೈನ ಸಮಾಜದ ಅಧ್ಯಕ್ಷ ಸುನೀಲ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪಪಂ ಸದಸ್ಯ ಪ್ರವೀಣ ಗಾಣಿಗೇರ, ಸಂಜು ಬಿರಡಿ, ಸಂಜಯ ಕುಚನೂರೆ, ಅರುಣ ಗಾಣಿಗೇರ,ಮುಖಂಡರಾದ ಕುಮಾರ ಅಪರಾಜ, ಗೋಪಾಲ ಮಾನಗಾಂವೆ, ಪ್ರಕಾಶ ಚಿನಗಿ, ಅಶೋಕ ಗಾಣಿಗೇರ, ಸುನೀಲ ಪಾಟೀಲ, ಪ್ರಕಾಶ ಕೋರ್ಬು, ಸುಜಲ ಗಾಣಿಗೇರ, ಈಶ್ವರ ಕಾಂಬಳೆ, ರಾಜು ಖವಟಗೊಪ್ಪ, ಅಶೋಕ ಅಪರಾಜ, ಸುನೀಲ ಅವಟಿ, ಅರವಿಂದ ಕಾರ್ಚಿ ಸಿದರಾಯ ಗಾಡಿವಡ್ಡರ, ಸುಭಾಷ ಪಾಟೀಲ, ಉಪಾಧ್ಯಕ್ಷ ರಾಜುಗೌಡ ಪಾಟೀಲ, ಕಾರ್ಯದರ್ಶಿ ಅಮಗೌಡ ವಡೆಯರ ಅನೇಕರು ಇದ್ದರು.ಕಾರ್ಯಕ್ರಮದಲ್ಲಿ ಅತಿಥಿ ಹಾಗೂ ನಿರ್ಣಾಯಕರಾಗಿ ಪಶು ವೈದ್ಯಾಧಿಕಾರಿ ಡಾ.ಮಹೇಶ ದಳವಿ, ಡಾ.ಸಚೀನ ಸೌಂದಲಗಿ, ಡಾ.ಅಭಿನಂದನ ಪಾಟೀಲ, ಡಾ.ವಿಜಯ ಢೋಕೆ ಮಾತನಾಡಿದರು.
ಸರ್ವಶ್ರೇಷ್ಟ ಶಾವನಗಳ ಆಯ್ಕೆ: 300 ಶ್ವಾನಗಳಲ್ಲಿ ಸರ್ವಶ್ರೇಷ್ಠ ಮುರೂ ಶ್ವಾನಗಳನ್ನು ಆಯ್ಕೆ ಮಾಡಿ ಆಯ್ಕೆಮಾಡಿ ಬಹುಮಾನ ವಿತರಿಸಿದರು.