ಗಜೇಂದ್ರಗಡ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು ಡಿಪಿಆರ್ ಆಗಿದೆ; ಅಶೋಕ

KannadaprabhaNewsNetwork |  
Published : Nov 03, 2026, 02:30 AM IST
ಗಜೇಂದ್ರಗಡ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಸಭೆ | Kannada Prabha

ಸಾರಾಂಶ

ಕೃಷ್ಣಾ ಬಿ ಸ್ಕೀಂ ೩ನೇ ಹಂತದ ಯೋಜನೆ ಅಡಿ ತಾಲೂಕಿನ ೧೯ ಕೆರೆಗಳಿಗೆ ನೀರು ತುಂಬಿಸಿಲು ಈಗಗಾಲೇ ಡಿಪಿಆರ್ ಆಗಿದ್ದು, ಅಂದಾಜು ₹೯೯.೪೫ ಕೋಟಿ ವೆಚ್ಚದಲ್ಲಿ ಮುಂದಿನ ದಿನಗಳಲ್ಲಿ ಕೆರೆಗಳಿಗೆ ನೀರು ಬರಲಿದೆ.

ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ಕೃಷ್ಣಾ ಬಿ ಸ್ಕೀಂ ೩ನೇ ಹಂತದ ಯೋಜನೆ ಅಡಿ ತಾಲೂಕಿನ ೧೯ ಕೆರೆಗಳಿಗೆ ನೀರು ತುಂಬಿಸಿಲು ಈಗಗಾಲೇ ಡಿಪಿಆರ್ ಆಗಿದ್ದು, ಅಂದಾಜು ₹೯೯.೪೫ ಕೋಟಿ ವೆಚ್ಚದಲ್ಲಿ ಮುಂದಿನ ದಿನಗಳಲ್ಲಿ ಕೆರೆಗಳಿಗೆ ನೀರು ಬರಲಿದೆ ಎಂದು ಇಲಕಲ್ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ಸಹಾಯಕ ಅಭಿಯಂತರ ಅಶೋಕ ನಾಯಕ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಕರ್ನಾಟಕ ಪ್ರಾಂತ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ಗಜೇಂದ್ರಗಡ ತಾಲೂಕಿನ ೧೯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ೩ ಕೆರೆಗಳನ್ನು ಕೊಪ್ಪಳ ಏತ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ ಒಳಪಡಿಸಲಾಗಿದ್ದು, ಉಳಿದ ೧೬ ಕೆರೆಗಳಿಗೆ ಯೋಜನೆಯ ಎರಡನೇ ಹಂತದ ಪ್ಯಾಕೇಜ್ ೧ರ ಅಡಿ, ನೀರು ತುಂಬಿಸುವ ಪ್ರಸ್ತಾವನೆಯಿದೆ ಎಂದ ಅವರು, ಯೋಜನೆಯಡಿ ೬ ಎಂಐ ಕೆರೆಗಳು ಹಾಗೂ ೧೩ ಜಿಪಂ ವ್ಯಾಪ್ತಿಯ ಕೆರೆಗಳಿಗೆ ಸುಮಾರು ೦.೧೫೩ ಟಿಎಂಸಿ ನೀರು ಹರಿಸುವ ಗುರಿ ಹೊಂದಲಾಗಿದೆ. ಇದರಿಂದ ಒಟ್ಟು ೧೫೩.೯೮ ಎಂಸಿಎಫ್‌ಟಿ ನೀರು ಸಂಗ್ರಹ ಸಾಮರ್ಥ್ಯ ಕಲ್ಪಿಸುವ ಉದ್ದೇಶವಿದೆ. ಅಲ್ಲದೆ ಕೆರೆಗಳಿಗೆ ನೀರು ಪೂರೈಸಲು ಪಂಪ್‌ಹೌಸ್ ನಿರ್ಮಾಣ, ಎಂಎಸ್ ಮತ್ತು ಎಚ್ ಡಿಪಿಇ ಪೈಪ್‌ಲೈನ್ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಯೋಜಿಸಲಾಗಿದೆ. ಒಟ್ಟು ೩೪.೭೩೫ ಕಿಮೀ ಎಂಎಸ್ ಹಾಗೂ ೫೮.೮೦ ಕಿಮೀ ಎಚ್‌ಡಿಪಿಇ ಪೈಪ್‌ಲೈನ್ ಮೂಲಕ ನೀರು ಪೂರೈಸುವ ಪ್ರಸ್ತಾವನೆಯಿದೆ ಎಂದರು.

ತಾಲೂಕಿನ ಗಜೇಂದ್ರಗಡ, ಬೆಣಚಮಟ್ಟಿ, ಜಿಗೇರಿ, ನಾಗರಸಿಕೊಪ್ಪ, ಹಾಳಕೇರೆ, ಮ್ಯಾಕಲಜರಿ, ವದೇಗೋಳ, ಕಾಗಿಕೊಳ್ಳ ಟ್ಯಾಂಕ್, ಸರ್ಜಾಪೂರ, ಕಳಕಾಪುರ, ಗೋಗೇರಿ, ಕಲ್ಲಿಗನೂರು, ನಿಡಗುಂದಿ, ಕುಂಟೋಜಿ, ಲಕ್ಕಲಕಟ್ಟಿ ಸೇರಿದಂತೆ ಒಟ್ಟು ೧೯ ಕೆರೆಗಳನ್ನು ಯೋಜನೆಗೆ ಪರಿಗಣಿಸಲಾಗಿದೆ. ೨೦೨೬ರ ಅ. ೧೬ರಂದು ನಡೆದ ೯೧ನೇ ಅಂದಾಜು ಪರಿಶೀಲನಾ ಸಮಿತಿ ಸಭೆಯಲ್ಲಿ ₹೯೯.೪೫ ಕೋಟಿ ವೆಚ್ಚದ ಯೋಜನೆಯ ಡಿಪಿಆರ್ ಮಂಡಿಸಲಾಗಿದೆ. ೨೦೨೬-೨೭ನೇ ಸಾಲಿನ ದಟ್ಟಿ ಆಧರಿಸಿ ಯೋಜನೆ ರೂಪಿಸಲಾಗಿದ್ದು, ಸರ್ಕಾರದ ಆಡಳಿತಾತ್ಮಕ ಅನುಮೋದನೆ ದೊರೆತ ಬಳಿಕ ಮುಂದಿನ ಹಂತದ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ ಎಂದರು.

ಕೃಷ್ಣಾ ಬಿ ಸ್ಕೀಂ ೩ನೇ ಹಂತದ ಯೋಜನೆ ಅಡಿ ತಾಲೂಕಿನ ೧೯ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಕರ್ನಾಟಕ ಪ್ರಾಂತ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಕೈಗೊಂಡಿದ್ದ ಹೋರಾಟದ ಸಂದರ್ಭ ನ.೨ರಂದು ಪಟ್ಟಣಕ್ಕೆ ಆಗಮಿಸಿ ಯೋಜನೆಯ ಮಾಹಿತಿ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಅದರಂತೆ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಹೋರಾಟಗಾರರಿಗೆ ಅಧಿಕಾರಿಗಳು ಮಾಹಿತಿ ನೀಡಿದರು.

ಈ ವೇಳೆ ಮುಖಂಡರಾದ ಎಂ.ಎಸ್. ಹಡಪದ, ಬಾಲು ರಾಠೋಡ, ಪೀರು ರಾಠೋಡ, ಮೈಬುಸಾಬ ಹವಾಲ್ದಾರ, ರೂಪ್ಲೇಶ ಮಾಳೋತ್ತರ, ಚನ್ನಪ್ಪ ಮಾಳೋತ್ತರ, ನಜೀರ ಮಾಲ್ದಾರ್ ಸೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭುಗಿಲೆದ್ದ ಸರ್ಕಾರ ವರ್ಸಸ್‌ ಕುಮಾರಸ್ವಾಮಿ ಸ್ಟಿಂಗ್‌ ಫೈಟ್‌ - ಈಗ ಎಚ್‌ಡಿಕೆ ಚಾರ್ಜ್‌ಶೀಟ್‌
ಅರಬ್ಬಿ ಸಮುದ್ರದಲ್ಲಿ ಚಂಡಮಾರುತ - ಇನ್ನೂ 3 ದಿನ ರಾಜ್ಯದೆಲ್ಲೆಡೆ ಮಳೆ