ಮಳೆ, ಗಾಳಿಗೆ ಸಂಪೂರ್ಣ ನೆಲಕಚ್ಚಿದ ಡ್ರಾಗನ್‌ ಗಿಡ

KannadaprabhaNewsNetwork |  
Published : May 27, 2026, 03:30 AM IST
೨೫ತಾಂಬಾ೩ | Kannada Prabha

ಸಾರಾಂಶ

ಇತ್ತೀಚೆಗೆ ತಾಂಬಾದಲ್ಲಿ ರಭಸದಿಂದ ಬೀಸಿದ ಗಾಳಿ, ಮಳೆಗೆ 2 ಎಕರೆ ಜಮೀನಿನಲ್ಲಿ ರೈತ ಬೆಳೆದ ಡ್ರಾಗನ್‌ ಗಿಡಗಳು ಸಂಪೂರ್ಣ ನೆಲಕಚ್ಚಿವೆ. ಹತ್ತು ವರ್ಷಗಳಿಂದ ಅವುಗಳನ್ನು ಜೋಪಾನ ಮಾಡಿಕೊಂಡು ಬಂದಿದ್ದ ರೈತ ಮಹಿಳೆ ರೈತ ಮಹಿಳೆ ಕಸ್ತೂರಿಬಾಯಿ ಈರಣ್ಣ ತೆಗ್ಗೆಳ್ಳಿ(ಪಾಟೀಲ) ಎಂಬುವವರಿಗೆ ದಿಕ್ಕು ತೋಚದಂತಾಗಿದೆ.

ಕನ್ನಡಪ್ರಭ ವಾರ್ತೆ ತಾಂಬಾ

ಇತ್ತೀಚೆಗೆ ತಾಂಬಾದಲ್ಲಿ ರಭಸದಿಂದ ಬೀಸಿದ ಗಾಳಿ, ಮಳೆಗೆ 2 ಎಕರೆ ಜಮೀನಿನಲ್ಲಿ ರೈತ ಬೆಳೆದ ಡ್ರಾಗನ್‌ ಗಿಡಗಳು ಸಂಪೂರ್ಣ ನೆಲಕಚ್ಚಿವೆ. ಹತ್ತು ವರ್ಷಗಳಿಂದ ಅವುಗಳನ್ನು ಜೋಪಾನ ಮಾಡಿಕೊಂಡು ಬಂದಿದ್ದ ರೈತ ಮಹಿಳೆ ರೈತ ಮಹಿಳೆ ಕಸ್ತೂರಿಬಾಯಿ ಈರಣ್ಣ ತೆಗ್ಗೆಳ್ಳಿ(ಪಾಟೀಲ) ಎಂಬುವವರಿಗೆ ದಿಕ್ಕು ತೋಚದಂತಾಗಿದೆ.

ತಾಂಬಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಬಹುತೇಕ ಪರಿಸ್ಥಿತಿ ಇದೇ ಆಗಿದೆ. ವರ್ಷಗಳ ಕಾಲ ಸಾಲ ಮಾಡಿ ಬೆಳೆ ಬೆಳೆದ ರೈತರ ಹಣೆಬರಹ ಇದೆ ಆಗಿದೆ. ನಂತರ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ತಾಪಂ ಮಾಜಿ ಸದಸ್ಯ ಪ್ರಕಾಶ ಮುಂಜಿ, ಗ್ರಾಪಂ ಮಾಜಿ ಅಧ್ಯಕ್ಷ ರಜಾಕ ಚಿಕ್ಕಗಸಿ, ಹಾಲಿ ಸದಸ್ಯ ಪರಸು ಬೀಸನಾಳ ಸ್ಥಳಕ್ಕೆ ಭೇಟಿ ನೀಡಿ ರೈತ ಮಹಿಳೆಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೇ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಪ್ರಕೃತಿ ವಿಕೋಪದಡಿ ಹಾನಿಯಾದ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ. ಗಾಳಿ, ಮಳೆ ರಭಸಕ್ಕೆ ಧನಗಳಿಗೆ ನಿರ್ಮಿಸಿದ ಸೆಡ್‌, ಪತ್ರಾಸ್‌ ಗಳು ಹಾರಿ ಹೋಗಿ ವಿದ್ಯುತ್‌ ಕಂಬದ ತಂತಿಗಳ ಮೇಲೆ ಬಿದ್ದು, ತಂತಿ ಹರಿದು ಹೋಗಿವೆ. ರಾಷ್ಟ್ರ-ಅಂತಾರಾಷ್ಟ್ರ ಮಟ್ಟದಲ್ಲಿ ಭಾರಿ ಬೇಡಿಕೆ ಇರುವ ಡ್ರಾಗನ್‌ ಪ್ರೋಟ್ಸ್ ಹೆಚ್ಚಾಗಿ ಶುಗರ್‌ ಇರುವವರು ಸೇವಿಸುತ್ತಾರೆ. ಈ ಹಣ್ಣಿನಿಂದಲ್ಲೇ ಬದುಕು ಕಟ್ಟಿಕೊಂಡ ರೈತ ಮಹಿಳೆ ದಿಕ್ಕು ತೋಚದಂತಾಗಿದ್ದಾಳೆ. ಸಂಬಂಧಪಟ್ಟ ಇಲಾಖೆಯವರು ಮಹಿಳೆಗೆ ಸೂಕ್ತ ಪರಿಹಾರ ನೀಡಬೇಕು.

-ಪ್ರಕಾಶ ಮುಂಜಿ, ತಾಪಂ ಮಾಜಿ ಸದಸ್ಯರು.ಅಕಾಲಿಕ ಮಳೆಗೆ ರೈತರು ಬೆಳೆದ ತೋಟಗಾರಿಕೆ ಬೆಳೆಗಳು ಸಂಪೂರ್ಣ ಹಾಳಾಗಿವೆ. ರೈತರ ಕಷ್ಟ ನೋಡಲಾಗುತ್ತಿಲ್ಲ. ಸರಕಾರ ನಿರ್ಲಕ್ಷ್ಯ ಮಾಡದೆ ಕೂಡಲೇ ಹೆಚ್ಚಿನ ಪರಿಹಾರ ವಿತರಣೆಗೆ ಕ್ರಮ ವಹಿಸಬೇಕು.

-ರಮೇಶ ಭೂಸನೂರ,

ಮಾಜಿ ಶಾಸಕ ಸಿಂದಗಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಸೇಲ್ ಕೊರತೆ: ಬಂಕ್‌ಗಳಲ್ಲಿ ವಾಹನಗಳ ದಟ್ಟಣೆ
ಸಮುದಾಯ ಆಸ್ಪತ್ರೆ ಅವ್ಯವಹಾರ ಆರೋಪ