ಆಧುನಿಕತೆ ನಡುವೆ ಕಳೆಗುಂದಿದ ಜಾತ್ರೆ, ಊರಹಬ್ಬ: ಗೋಪಾಲಗೌಡ

KannadaprabhaNewsNetwork |  
Published : Dec 11, 2025, 01:30 AM IST
ಫೋಟೋ : 10 ಹೆಚ್‌ಎಸ್‌ಕೆ 1 ಮತ್ತು 21: ಹೊಸಕೋಟೆ ತಾಲೂಕಿನ ಉಪ್ಪಾರಹಳ್ಳಿ ಶ್ರೀ ಮದ್ದೂರಮ್ಮ ದೇವಿ ಧನಗಳ ಜಾತ್ರೆಯಲ್ಲಿ ಉತ್ತಮ ರಾಸುಗಳಿಗೆ ಬಮುಲ್ ನಿರ್ಧೇಶಕ ಬಿವಿ ಸತೀಶ್ ಗೌಡ, ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಬಿಎನ್ ಗೋಪಾಲ್ ಗೌಡ ಬಹುಮಾನ ವಿತರಿಸಿದರು. | Kannada Prabha

ಸಾರಾಂಶ

ನಮ್ಮ ಪೂರ್ವಿಕರು ಊರ ಹಬ್ಬಗಳನ್ನು ಜಾತ್ರೆಗಳನ್ನು ಆಚರಣೆ ಮಾಡುವ ಸಂದರ್ಭದಲ್ಲಿ ಸಂಭ್ರಮ ಮನೆ ಮಾಡುತ್ತಿತ್ತು. ದೂರದ ಊರುಗಳಿಂದ ನೆಂಟರಿಷ್ಠರು ಬಂದು ಸಂಭ್ರಮಿಸುತ್ತಿದ್ದರು.

ಕನ್ನಡಪ್ರಭ ವಾರ್ತೆ ಹೊಸಕೋಟೆಬೆಳೆಯುತ್ತಿರುವ ತಂತ್ರಜ್ಞಾನ ಹಾಗೂ ಆಧುನಿಕತೆಯ ಪೆಡಂಭೂತ ಸಂಸ್ಕೃತಿ ಪರಂಪರೆ ಹಾಗೂ ಊರ ಹಬ್ಬ ಜಾತ್ರೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಜಾತ್ರೆಗಳು ಕಳೆಗುಂದುತ್ತಿವೆ ಎಂದು ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಬಿ.ಎನ್. ಗೋಪಾಲಗೌಡ ತಿಳಿಸಿದರು. ತಾಲೂಕಿನ ಉಪ್ಪಾರಹಳ್ಳಿ ಗ್ರಾಮದಲ್ಲಿ ನಡೆದ ಮದ್ದೂರಮ್ಮದೇವಿ, ಚೌಡೇಶ್ವರಮ್ಮ ದೇವಿಯ ದನಗಳ ಜಾತ್ರಾ ಮಹೋತ್ಸವದಲ್ಲಿ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.ನಮ್ಮ ಪೂರ್ವಿಕರು ಊರ ಹಬ್ಬಗಳನ್ನು ಜಾತ್ರೆಗಳನ್ನು ಆಚರಣೆ ಮಾಡುವ ಸಂದರ್ಭದಲ್ಲಿ ಸಂಭ್ರಮ ಮನೆ ಮಾಡುತ್ತಿತ್ತು. ದೂರದ ಊರುಗಳಿಂದ ನೆಂಟರಿಷ್ಠರು ಬಂದು ಸಂಭ್ರಮಿಸುತ್ತಿದ್ದರು. ದನಗಳ ಜಾತ್ರೆ ಅಂದರೆ ಒಂದು ವಾರಕ್ಕೂ ಮೊದಲೇ ವಿವಿಧ ಜಿಲ್ಲೆಗಳಿಂದ ಆಗಮಿಸಿ ದನಗಳ ಸಮೇತ ರೈತರು ಬೀಡು ಬಿಡುತ್ತಿದ್ದರು. ದನಗಳ ಮಾರಾಟ ಸಹ ಬಿರುಸಿನಿಂದ ಆಗುತ್ತಿತ್ತು. ಆದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಗ್ರಾಮೀಣರು ಕೃಷಿ ಹೈನುಗಾರಿಕೆಯಿಂದ ವಿಮುಖವಾಗುತ್ತಿದ್ದು ದನಗಳ ಜಾತ್ರೆ ಮೆರುಗನ್ನ ಕಳೆದುಕೊಳ್ಳುತ್ತಿದೆ. ಇನ್ನು ಕೃಷಿಯಲ್ಲಂತು ಮಿಶ್ರ ತಳಿ ಬೇಸಾಯವನ್ನು ಮಾಡುತ್ತಿದ್ದು ತಿನ್ನುವ ಆಹಾರದಲ್ಲೂ ಕೂಡ ಪೌಷ್ಟಿಕಾಂಶ ಇಲ್ಲದಂತಾಗಿದೆ. ಇದರ ನಡುವೆಯೂ ಧನಗಳ ಜಾತ್ರೆ ನಡೆಸುತ್ತಿರುವುದು ಪ್ರಶಂಸನೀಯ ಎಂದರು. ಮದ್ದೂರಮ್ಮ ದೇವಿ ಜಾತ್ರೆ ಆಚರಣೆ ಸಮಿತಿ ಧರ್ಮದರ್ಶಿ ಸಿ.ಮುನಿಯಪ್ಪ ಮಾತನಾಡಿ, ಉಪ್ಪಾರಹಳ್ಳಿ ಗ್ರಾಮದಲ್ಲಿ ತಲತಲಾಂತರಗಳಿಂದ ದನಗಳ ಜಾತ್ರೆಯನ್ನು ನಡೆಸಿಕೊಂಡು ಬರುತ್ತಿದ್ದು 1936 ರಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್‌ರವರು ಮದ್ದೂರಮ್ಮ ದೇವಿ ಹಾಗೂ ಚೌಡೇಶ್ವರಮ್ಮದೇವಿ ದೇವಾಲಯವನ್ನು ಉದ್ಘಾಟಿಸಿದ್ದರು. ನಂತರದ ದಿನಗಳಲ್ಲಿ ಗ್ರಾಮಕ್ಕೆ ಪ್ಲೇಗ್ ಬಂದ ಸಂಧರ್ಭದಲ್ಲಿ ರೋಗ ವಾಸಿಗಾಗಿ ದೇವರಲ್ಲಿ ಪ್ರಾರ್ಥಿಸಿ ಜಾತ್ರೆ ಪ್ರಾರಂಭಿಸಿ ಅಂದಿನಿಂದ ನಿರಂತರವಾಗಿ ಜಾತ್ರೆಯನ್ನ ನಡೆಸುವ ಮೂಲಕ ಸಂಸ್ಕೃತಿ ಪರಂಪರೆ ಹಾಗೂ ಆಚರಣೆಗಳಿಗೆ ಮಹತ್ವ ನೀಡಲಾಗಿದೆ. ಎಂದರು.ಇದೇ ಸಂದರ್ಭದಲ್ಲಿ ಉತ್ತಮ ರಾಸಗಳನ್ನು ಸಾಕಿರುವ ಎಂ.ಸತ್ಯವಾರ ಮುನಿರಾಜುಗೆ ಪ್ರಥಮ ಬಹುಮಾನವಾಗಿ 10 ಸಾವಿರ ನಗದು, ಕುರುಬರ ಪೇಟೆ ವೆಂಕಟೇಶ್‌ಗೆ ದ್ವಿತೀಯ ಬಹುಮಾನವಾಗಿ 7.5 ಸಾವಿರ ನಗದು, ಮೈಲಾಪುರ ನಾಗೇಶ್‌ಗೆ ತೃತೀಯ ಬಹುಮಾನವಾಗಿ 5 ಸಾವಿರ ನಗದು ಹಾಗೂ ಪ್ರಶಂಸನಾ ಪತ್ರವನ್ನು ಜಾತ್ರೆ ಆಚರಣೆ ಸಮಿತಿ ವತಿಯಿಂದ ವಿತರಿಸಲಾಯಿತು.ಬಮುಲ್ ನಿರ್ದೇಶಕ ಬಿ.ವಿ. ಸತೀಶ್‌ಗೌಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟೇಶ್, ಗ್ರಾಪಂ ಅಧ್ಯಕ್ಷೆ ಬಿಂದು ಅಶೋಕ್, ಟೌನ್ ಕಾಂಗ್ರೆಸ್ ಅಧ್ಯಕ್ಷ ಬಿವಿ. ಬೈರೇಗೌಡ, ಇಓ ಮುನಿಯಪ್ಪ, ಎಸ್‌ಎಫ್‌ಸಿಎಸ್ ಅಧ್ಯಕ್ಷ ಸತೀಶ್, ನಿರ್ದೇಶಕ ರಾಜ್‌ಗೋಪಾಲ್, ಪುರಸಭೆ ಮಾಜಿ ಅಧ್ಯಕ್ಷ ಶ್ರಿನಿವಾಸ್, ನಿವೃತ್ತ ಇಓ ನಾರಾಯಣಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಡಿಟಿ ವೆಂಕಟೇಶ್, ಕಮಿಟಿ ಕಾರ್ಯದರ್ಶಿ ಪಟೇಲ್ ಮಂಜುನಾಥ್ ಸೇರಿದಂತೆ ಸಮಿತಿಯ ಸದಸ್ಯರು ಹಾಜರಿದ್ದರು.ಫೋಟೋ : 10 ಹೆಚ್‌ಎಸ್‌ಕೆ 1 ಮತ್ತು 2

1: ಹೊಸಕೋಟೆ ತಾಲೂಕಿನ ಉಪ್ಪಾರಹಳ್ಳಿ ಶ್ರೀ ಮದ್ದೂರಮ್ಮ ದೇವಿ ದನಗಳ ಜಾತ್ರೆಯಲ್ಲಿ ಉತ್ತಮ ರಾಸುಗಳಿಗೆ ಬಮುಲ್ ನಿದೇಶಕ ಬಿವಿ ಸತೀಶ್ ಗೌಡ, ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಬಿ.ಎನ್. ಗೋಪಾಲ್ ಗೌಡ ಬಹುಮಾನ ವಿತರಿಸಿದರು.2. ದನನಗಳ ಜಾತ್ರೆಯಲ್ಲಿ ಉತ್ತಮ ರಾಸುಗಳನ್ನು ವೀಕ್ಷಿಸಿದ ಬಮುಲ್ ನಿರ್ದೇಶಕ ಬಿ.ವಿ.ಸತೀಶ್ ಗೌಡ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಹಿತಿ ಗ್ಯಾರಂಟಿ ರಾಮಣ್ಣನವರಿಗೆ ಅಧಿಕೃತ ಆಹ್ವಾನ
ಬ್ಯಾಂಕ್ ಅಧಿಕಾರಿ, ಸಿಬ್ಬಂದಿ ಕನ್ನಡದಲ್ಲಿಯೇ ವ್ಯವಹರಿಸಿ