- ಆನ್ ಲೈನ್ ವಂಚಕರ ಹಣ ಬೇಡಿಕೆಗೆ ಕಿವಿಗೊಡದಂತೆ ಜನತೆಗೆ ಮನವಿ
- - -ಕನ್ನಡಪ್ರಭ ವಾರ್ತೆ, ದಾವಣಗೆರೆ
ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಹೆಸರಿನಲ್ಲಿ ಆನ್ ಲೈನ್ ವಂಚಕರು ನಕಲಿ ಫೇಸ್ ಬುಕ್ ಖಾತೆ ತೆರೆದು, ಸಾರ್ವಜನಿಕರಲ್ಲಿ ಹಣದ ಬೇಡಿಕೆ ಇಡುತ್ತಿರುವ ಘಟನೆ ವರದಿಯಾಗಿದೆ.ಡಾ.ಪ್ರಭಾ ಅವರು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರ ಮನೆಯ ಕಿರಿಯ ಸೊಸೆ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಪತ್ನಿ. ಇವರ ಹೆಸರಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್‌ನಲ್ಲಿ ಪ್ರಭಾ ಮಲ್ಲಿಕಾರ್ಜುನ (ಫಾರ್ ಎಂಪಿ) ಎಂದು ನಕಲಿ ಖಾತೆ ತೆರೆದಿದಿದ್ದಾರೆ. ಅಲ್ಲದೇ, ಸಾರ್ವಜನಿಕರು, ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಆನ್ ಲೈನ್ ವಂಚಕರು ಹಣದ ಬೇಡಿಕೆ ಇಡುತ್ತಿದ್ದಾರೆ. ₹7 ಸಾವಿರ, ₹15 ಸಾವಿರ, ₹25 ಸಾವಿರವನ್ನು ತುರ್ತಾಗಿ ಗೂಗಲ್ ಪೇ, ಫೋನ್ ಪೇ ಮಾಡುವಂತೆ ಕೇಳುತ್ತಿದ್ದಾರೆ. ಈ ಹಿನ್ನೆಲೆ ಆನ್ ಲೈನ್ ವಂಚಕರ ಮನವಿಗೆ ಕಿವಿಗೊಡದಂತೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ಕಚೇರಿಯು ಜನತೆಗೆ ಮನವಿ ಮಾಡಿದೆ.
ಡಾ.ಪ್ರಭಾ ಮಲ್ಲಿಕಾರ್ಜುನ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು, ಆನ್ ಲೈನ್ ವಂಚಕರು ಹಣ ಕಳಿಸುವಂತೆ ಮನವಿ ಮಾಡುತ್ತಿರುವ ವಿಚಾರ ಗೊತ್ತಾಗಿ, ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಭಾ ಅವರ ಗಮನಕ್ಕೆ ತಂದಿದ್ದಾರೆ. ಆನ್‌ಲೈನ್ ವಂಚಕರ ಇಂತಹ ಸಂದೇಶ, ಮನವಿಗಳಿಗೆ ಕಿವಿಗೊಡಬೇಡಿ ಎಂದು ಡಾ.ಪ್ರಭಾ ಮಲ್ಲಿಕಾರ್ಜುನರ ಆಪ್ತ ಸಹಾಯ ಕೆ.ಎಲ್.ಹರೀಶ ಬಸಾಪುರ ಸಹ ಮನವಿ ಮಾಡಿದ್ದಾರೆ.- - - -3ಕೆಡಿವಿಜಿ5:
ಡಾ.ಪ್ರಭಾ ಮಲ್ಲಿಕಾರ್ಜುನ ಹೆಸರಿನ ನಕಲಿ ಫೇಸ್ ಬುಕ್ ಖಾತೆ. -3ಕೆಡಿವಿಜಿ6:ದಾವಣಗೆರೆ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಹೆಸರಿನ ನಕಲಿ ಫೇಸ್ ಬುಕ್ ಖಾತೆ ಮೂಲಕ ಹಣಕ್ಕೆ ಬೇಡಿಕೆ ಇಡುತ್ತಿರುವುದು.