ವಿಚ್ಛೇದಿತ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ಲಕ್ಷ ಲಕ್ಷ ಹಣ ಪಡೆದ ನಕಲಿ ಪೊಲೀಸ್‌

KannadaprabhaNewsNetwork | Updated : Jul 22 2024, 09:33 AM IST

ಸಾರಾಂಶ

ವಿಚ್ಛೇದಿತ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ನಕಲಿ ಪೊಲೀಸ್‌ ಓರ್ವ ಲಕ್ಷಾಂತರ ರು. ವಂಚಿಸಿರುವ ಘಟನೆ ನಡೆದಿದೆ.

 ಪೀಣ್ಯ ದಾಸರಹಳ್ಳಿ : ವಿಚ್ಛೇದಿತ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ನಕಲಿ ಪೊಲೀಸ್‌ ಓರ್ವ ಲಕ್ಷಾಂತರ ರು. ವಂಚಿಸಿರುವ ಘಟನೆ ಬೆಂಗಳೂರು ಉತ್ತರ ಸಮೀಪದ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಕಬಾಣಾವಾರ ವ್ಯಾಪ್ತಿಯ ಗಣಪತಿನಗರದ ನಿವಾಸಿ ವಿಶ್ವನಾಥ ಅಲಿಯಾಸ್​ ವಿಷ್ಣುಗೌಡ ಆರೋಪಿ.

ಆರೋಪಿಯು ಮದುವೆ ಆಗುವುದಾಗಿ ಮಹಿಳೆಗೆ ವಂಚಿಸಿ, ಲವ್, ಸೆಕ್ಸ್, ದೋಖಾ ಮಾಡಿ 40 ವರ್ಷದ ಮಹಿಳೆಯ ಬಳಿ 41 ಲಕ್ಷ ರು. ಹಣ ಮತ್ತು 5 ಲಕ್ಷ ರು. ಮೌಲ್ಯದ ಎಲ್‌ಐಸಿ ಬಾಂಡನ್ನು ಕಿತ್ತುಕೊಂಡು ಮೋಸ ಮಾಡಿದ್ದಾನೆ.

ಏನಿದು ಘಟನೆ?:

11 ವರ್ಷದ ಹಿಂದೆ ಮಹಿಳೆಗೆ ವಿಚ್ಛೇದನವಾಗಿದ್ದೂ ಬಳಿಕ ಇಬ್ಬರಿಗೂ ಪರಿಚಯವಾಗಿದೆ. ವಿಶ್ವನಾಥ ಅಲಿಯಾಸ್​ ವಿಷ್ಣುಗೌಡ ಪೊಲೀಸ್​ ವಸ್ತ್ರದಲ್ಲಿರುವ ಫೋಟೋ ಹಾಗೂ ಗನ್​ ಇರುವುದನ್ನು ನೋಡಿರುವ ಮಹಿಳೆ ಪೊಲೀಸ್​ ಹುದ್ದೆಯಲ್ಲಿರಬಹುದು ಎಂದು ನಂಬಿದ್ದಾರೆ. ವಿಷ್ಣುಗೌಡ ನಾನು ಪೋಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತೇನೆಂದು ಹೇಳಿ ಮಹಿಳೆಗೆ ನಂಬಿಸಿ ವಂಚಿಸಿದ್ದಾನೆ. ಆದರೆ ಆತ ನಕಲಿ ಪೊಲೀಸ್​ ಎಂಬುದು ನಂತರ ಗೊತ್ತಾಗಿದೆ.

ಮಹಿಳೆ ತಂಗಿಗೆ ಖಾಸಗಿ ಅಂಗ ತೋರಿಸಿ ವಿಕೃತಿ:

ಮನೆಗೆ ನುಗ್ಗಿ ಮಹಿಳೆಯ ತಂದೆ ತಾಯಿ ಮೇಲೆ ಹಲ್ಲೆ ಮಾಡಿದ್ದು, ಮಹಿಳೆಯ ತಂಗಿ ಮುಂದೆ ಪ್ಯಾಂಟ್ ಬಿಚ್ಚಿ ಖಾಸಗಿ ಅಂಗ ತೋರಿಸಿ ವಿಕೃತಿ ಮೇರೆದಿದ್ದಾನೆ. ಮಹಿಳೆಯ ಹತ್ತಿರ ಬಲವಂತವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚಿಕ್ಕಬಾಣಾವರ ಖಾತೆಯ ಚೆಕ್‌ಗಳಿಗೆ ಬಲವಂತವಾಗಿ ಸಹಿ ಮಾಡಿಸಿಕೊಂಡಿದ್ದಾನೆ.

ಕೆಲವು ತಿಂಗಳುಗಳ ಹಿಂದೆ ಗಾಡಿ ನಿಲ್ಲಿಸುವ ವಿಚಾರಕ್ಕೆ ಪಕ್ಕದ ಮನೆಯ ಮಹಿಳೆಯ ಜೊತೆಗೆ ಹಾಗೂ ಅವರ ಕುಟುಂಬದ ಜೊತೆಗೆ ಜಗಳವನ್ನು ಕೂಡ ಮಾಡಿದ್ದಾನೆ. ಆ ಮಹಿಳೆಗೆ ಮನಸ್ಸೋ ಇಚ್ಚೆ ಹಲ್ಲೆ ಮಾಡಿದ್ದಾನೆ ಈ ಘಟನೆಯೂ ಸೋಲದೇವನಹಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ BNS 2023 115(2), 316(2), 318(4), 324(4), 351(2), 352, 76, 79 ರೀತ್ಯಾ ಪ್ರಕರಣ ದಾಖಲಾಗಿದೆ.

Share this article