- ಕೊಡೇಕಲ್ ಬಸವೇಶ್ವರ, ಛಾಯಾ ಭಗವತಿ ದೇವಸ್ಥಾನಗಳಿಗೆ ಕೊಕ್!। ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತದ ವಿರುದ್ಧ ಅಸಮಾಧಾನ
------ಅನೀಲ್ ಬಿರಾದಾರ್
ಕನ್ನಡಪ್ರಭ ವಾರ್ತೆ ಕೊಡೇಕಲ್ಜಿಲ್ಲಾ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೊಡೇಕಲ್ ಕಾಲಜ್ಞಾನಿ ಬಸವೇಶ್ವರ ಹಾಗೂ ಕೊಡೇಕಲ್ ಸಮೀಪದ ಛಾಯಾ ಭಗವತಿ ದೇವಸ್ಥಾನ ಕೈಬಿಟ್ಟಿದ್ದು ಜನಾಕ್ರೋಶಕ್ಕೆ ಕಾರಣವಾಗಿದ್ದು, ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರವಾಸಿಗರಿಂದಲೇ ವೋಟ್ ಮಾಡಿಸಿ, ಅಧಿಕ ವೋಟ್ ಪಡೆಯುವ ಪ್ರವಾಸಿ ತಾಣಕ್ಕೆ ಹೆಚ್ಚಿನ ಅನುದಾನ ನೀಡಲು ಕೇಂದ್ರ ಪ್ರವಾಸೋದ್ಯಮ ಇಲಾಖೆ ಮುಂದಾಗಿದ್ದು, ಪ್ರಮುಖ ಪ್ರವಾಸಿ ಸ್ಥಳಗಳ ಮೂಲಸೌಕರ್ಯ ಅಭಿವೃದ್ದಿಗಾಗಿ ಕೇಂದ್ರ ಪ್ರವಾಸೋದ್ಯಮ ಇಲಾಖೆಯು “ದೇಖೋ ಅಪ್ನಾ ದೇಶ್ - ಪೀಪಲ್ ಚಾಯ್ಸ್” ಎಂಬ ಯೋಜನೆಯಡಿ ಜಿಲ್ಲಾಡಳಿತ ಹೊರಡಿಸಿರುವ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೊಡೇಕಲ್ ಬಸವೇಶ್ವರ ದೇವಸ್ಥಾನ ಹಾಗೂ ನಾರಾಯಣಪುರ ಸಮೀಪದ ಛಾಯಾ ಭಗವತಿ ದೇವಸ್ಥಾನಗಳನ್ನು ಕೈ ಬಿಟ್ಟಿರುವ ಬಗ್ಗೆ ಭಕ್ತರೂ ಸೇರಿದಂತೆ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.* ಕೊಡೇಕಲ್ ಬಸವೇಶ್ವರ ದೇವಸ್ಥಾನ ವಿಶೇಷತೆ: 15ನೇ ಶತಮಾನದಲ್ಲಿ ಕಾಲಜ್ಞಾನಿ ಕೊಡೇಕಲ್ ಬಸವಣ್ಣನವರು ಕಾಲಜ್ಞಾನ ವಚನಗಳನ್ನು ಬರೆದಿರುವ ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ಹಾಗೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ಕೊಡೇಕಲ್ ಬಸವೇಶ್ವರ ದೇವಸ್ಥಾನವು ವರ್ಷಕ್ಕೆ 2 ಬಾರಿ ದವನಹುಣ್ಣಿಮೆ ಹಾಗೂ ಗೌರಿಹುಣ್ಣಿಮೆಯಂದು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜೋಡುಪಲ್ಲಕ್ಕಿ ಉತ್ಸವ ನಡೆಯುವುದು. ತನ್ನದೇ ಆದಂತಹ ಐತಿಹ್ಯಹೊಂದಿದೆ. ಶಿವರಾತ್ರಿಯಂದು ಬಸವಣ್ಣನವರು ಬರೆದ ವಚನ ಇಲ್ಲಿ ಓದಲಿದ್ದು, ಅದು ವರುಷದ ಕಾಲಭವಿಷ್ಯವಾಗಿರುತ್ತದೆ ‘ಶಿವರಾತ್ರಿನುಡಿ’ ಕೇಳಲು ಜಿಲ್ಲೆಯ ಜನರು ಇಲ್ಲಿಗೆ ಬರುವುದು ದೇವಸ್ಥಾನದ ಮತ್ತೊಂದು ವಿಶೇಷವಾಗಿದೆ.
* ಛಾಯಾ ಭಗವತಿ ದೇವಸ್ಥಾನ ವಿಶೇಷತೆ: ಗಿರಿಜಿಲ್ಲೆಯ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಕೊಡೇಕಲ್ ಸಮೀಪದ ನಾರಾಯಣಪುರದ ಇತಿಹಾಸ ಪ್ರಸಿದ್ಧ ಛಾಯಾ ಭಗವತಿ ದೇವಸ್ಥಾನಕ್ಕೆ ಹಿಂದೊಮ್ಮೆ ಅಕ್ಷಯ ತೃತೀಯ ದಿನ ಕ್ಷೇತ್ರಕ್ಕೆ ಸೀತೆಯೊಂದಿಗೆ ಶ್ರೀರಾಮ ದೇವರ ಆಗಮನವಾಗಿತ್ತು. ಅಂದು ಕ್ಷೇತ್ರದಲ್ಲಿ ರಾಮಗಯಾ ತೀರ್ಥದಲ್ಲಿ ಮರದ ಬಾಗಿನ ನೀಡಿದ್ದ ಕುರುಹು ಎಂಬಂತೆ ಈಗಲೂ ಇಲ್ಲೊಂದು ಶಿಲೆಯಾಕಾರದ ಮರವಿದೆ. ಆದ್ದರಿಂದ ಅಕ್ಷಯ ತೃತೀಯ ದಿನ ಇಲ್ಲಿ ಸ್ನಾನ ಮಾಡಿದರೆ ವಿಶೇಷ ಫಲ ದೊರೆಯಲಿದೆ ಎಂಬ ನಂಬಿಕೆ ಭಕ್ತರಲ್ಲಿದ್ದು, ಅಕ್ಷಯ ತೃತೀಯ ದಿನ ಸಂಭ್ರಮದ ಉತ್ಸವ ಇಲ್ಲಿ ಜರುಗಲಿದೆ.* ಕ್ಷೇತ್ರದಲ್ಲಿವೆ 18 ಪವಿತ್ರ ತೀರ್ಥ ಕುಂಡಗಳು: ಛಾಯಾ ಭಗವತಿ ಕ್ಷೇತ್ರದಲ್ಲಿ ಉತ್ತರ-ವಾಹಿನಿ, ಶಂಖ-ಚಕ್ರ, ಬ್ರಹ್ಮವೇಣಿ, ವಿಷ್ಣುವೇಣಿ, ರುದ್ರವೇಣಿ, ಗೋಮುಖ, ವಿಶ್ವಾಮಿತ್ರ, ವಶಿಷ್ಟ, ನರಕ, ಸ್ವರ್ಗ, ಗಧಾ, ಪದ್ಮ, ರಾಮಗಯಾ, ಕಪಿಲತೀರ್ಥ, ಧನುಷ್ಕೋಟಿ, ಕನ್ಯಾಹೃದಯ ಎಂಬ ಒಟ್ಟು 18 ತೀರ್ಥ ಕುಂಡಗಳಿದ್ದು, ಅಕ್ಷಯ ತೃತೀಯ ದಿನ ಭಕ್ತರು ಉತ್ತರವಾಹಿನಿಯಿಂದ ಆರಂಭಿಸಿ, ಕನ್ಯಾ ಹೃದಯದವರೆಗೆ ಎಲ್ಲಾ ಕುಂಡಗಳಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ. ಜೊತೆಗೆ ಕೃಷ್ಣಾ ನದಿಯ ದಂಡೆಯಲ್ಲಿರುವ ದೇವಸ್ಥಾನಕ್ಕೆ ಜಿಲ್ಲೆಯ ಮತ್ತೊಂದು ಪ್ರವಾಸಿ ತಾಣವಾದ ಬಸವಸಾಗರ ಜಲಾಶಯದಿಂದ ನದಿಗೆ ನೀರು ಬಿಟ್ಟಾಗ ದಟ್ಟ ಕಾನನದ ನಡುವೆ ನಿಸರ್ಗದ ಮಡಿಲಿನಲ್ಲಿ ಕೃಷ್ಣೆ ಹರಿಯುವ ದೃಶ್ಯ ಸೊಬಗನ್ನು ನೋಡಲು ಪ್ರತಿ ವರ್ಷ ದೇವಸ್ಥಾನಕ್ಕೆ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.
ಇಷ್ಟೆಲ್ಲಾ ವಿಶೇಷತೆಗಳನ್ನೊಗಂಡ ಇತಿಹಾಸ ಪ್ರಸಿದ್ಧ ದೇವಸ್ಥಾನ ಕೊಡೇಕಲ್ ಬಸವೇಶ್ವರ, ಛಾಯಾ ಭಗವತಿ ದೇಗುಲಗಳನ್ನು ಪ್ರವಾಸೋದ್ಯಮ ಇಲಾಖೆಯು ಜಿಲ್ಲಾ ಪ್ರವಾಸಿ ತಾಣದಿಂದ ಕೈಬಿಟ್ಟಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಎರಡು ದೇವಸ್ಥಾನಗಳನ್ನು ಪ್ರವಾಸೋದ್ಯಮ ಇಲಾಖೆಯು ಜಾಲತಾಣದಲ್ಲಿ ಸೇರಿಸಬೇಕೆಂಬುದು ಭಕ್ತರ ಆಶಯವಾಗಿದೆ.-
----ಕೋಟ್ -----1 ಕೊಡೇಕಲ್ ಬಸವೇಶ್ವರ ದೇವಸ್ಥಾನವು ಕಲ್ಯಾಣ ಭಾಗದ ಬಹುದೊಡ್ಡ ಧಾರ್ಮಿಕ ಕೇಂದ್ರಗಳಲ್ಲೊಂದು. ಈ ನಿಟ್ಟಿನಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ದೇವಸ್ಥಾನವನ್ನು ಸಹ ಸೇರಿಸಿ ದೇವಸ್ಥಾನದ ಅಭಿವೃದ್ಧಿಗೆ ಶ್ರಮಸಿಬೇಕು.:- ವೃಷಭೇಂದ್ರ ಅಪ್ಪನವರು, ಮಹಲಿನಮಠ ಕೊಡೇಕಲ್.-----
---ಕೋಟ್- 2---: ಕೊಡೇಕಲ್ ಬಸವಣ್ಣ ಹಾಗೂ ಛಾಯಾ ಭಗವತಿ ದೇವಸ್ಥಾನಗಳು ಐತಿಹಾಸಿಕ ಧಾರ್ಮಿಕ ಕೇಂದ್ರಗಳಾಗಿವೆ. ಅಭಿವೃದ್ಧಿಯ ದಿಸೆಯಲ್ಲಿ ಇವೆರಡೂ ದೇಗುಲಗಳ ಬಗ್ಗೆ ಜಿಲ್ಲಾಡಳಿತವು ವಿಶೇಷ ಗಮನಹರಿಸಬೇಕು.:- ಶ್ಯಾಮಸುಂದರ ಜೋಶಿ, ಕ್ಷೇತ್ರ ಪುರೋಹಿತರು ಕೊಡೇಕಲ್.
--------ಕೋಟ್ -3---
ಜಿಲ್ಲೆಯ 17 ಪ್ರವಾಸಿ ತಾಣಗಳಲ್ಲಿ ಕೊಡೇಕಲ್ ಬಸವೇಶ್ವರ ದೇವಸ್ಥಾನದ ಇಲ್ಲದಿರುವುದು ವಿಷಾದನೀಯ. ಕೂಡಲೇ ಪ್ರವಾಸೋದ್ಯಮ ಇಲಾಖೆ ಬಸವೇಶ್ವರ ದೇಗುಲವನ್ನು ಪರಿಗಣಿಸಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು.:- ವೀರಸಂಗಪ್ಪ ಹಾವೇರಿ, ಜಿಲ್ಲಾ ನೇಕಾರ ಸಮುದಾಯ ಸಂಘದ ಅಧ್ಯಕ್ಷರು.---
---ಕೋಟ್-4 ---ಜನದಟ್ಟಣೆ ಕಾಣುತ್ತಿಲ್ಲ. ಗ್ರಾಮಸ್ಥರು ಮನವಿ ಸಲ್ಲಿಸಿದರೆ ಮುಂದಿನ ಹಂತದಲ್ಲಿ ಜಿಲ್ಲಾ ಪ್ರವಾಸೋದ್ಯಮ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸೇರಿಸಲಾಗುವುದು. ರಾಮಚಂದ್ರ ಕಟ್ಟೀಮನಿ, ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಯಾದಗಿರಿ.
-------
20ವೈಡಿಆರ್12: ಕೊಡೇಕಲ್ ಸಮೀಪದ ಛಾಯಾಭಗವತಿ ದೇವಸ್ಥಾನ.20ವೈಡಿಆರ್13: ಕೊಡೇಕಲ್ ಗ್ರಾಮದ ಕಾಲಜ್ಞಾನಿ ಬಸವೇಶ್ವರ ದೇವಸ್ಥಾನ.
20ವೈಡಿಆರ್14: ವೃಷಬೇಂದ್ರ ಅಪ್ಪನವರು.-20ವೈಡಿಆರ್15: ಶ್ಯಾಮಸುಂದರ ಜೋಶಿ.
-20ವೈಡಿಆರ್16: ವೀರಸಂಗಪ್ಪ ಹಾವೇರಿ.