ದರ ಕುಸಿತಕ್ಕೆ ಬೇಸತ್ತು ಈರುಳ್ಳಿ ಹರಗಿದ ಲಕ್ಕುಂಡಿ ಗ್ರಾಮದ ರೈತ!

KannadaprabhaNewsNetwork |  
Published : Oct 15, 2025, 02:07 AM IST
ಕಿತ್ತು ಹಾಕಿರುವ ಈರಳ್ಳಿಯನ್ನು ಕುರಿಗಳು ಮೇಯಿತ್ತಿರುವುದು. | Kannada Prabha

ಸಾರಾಂಶ

ಉಳುಮೆ, ಬೀಜ, ಗೊಬ್ಬರ, ಔಷಧಿ, ಆಳು ಸೇರಿದಂತೆ ₹75 ಸಾವಿರ ಖರ್ಚು ಮಾಡಿರುವ ರೈತ ದರ ಕುಸಿತದಿಂದ ಬೆಳೆದ ಫಸಲನ್ನು ಹರಗಿದ್ದಾರೆ. ಮಾರುಕಟ್ಟೆಯಲ್ಲಿ ಸದ್ಯ ಈರುಳ್ಳಿ ಬೆಲೆ ಕ್ವಿಂಟಲ್‌ಗೆ ₹200- ₹300 ಮಾತ್ರ ಇದ್ದು, ದರ ಕುಸಿತದಿಂದ ಈರುಳ್ಳಿ ಬೆಳೆದ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ.

ಗದಗ: ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕುಸಿತ ಕಂಡಿದ್ದರಿಂದ ಜಮೀನಿನಲ್ಲಿ ಕಳೆದ ಒಂದು ತಿಂಗಳಿಂದ ಕಿತ್ತು ಹಾಕಿದ್ದ ಈರುಳ್ಳಿ ಫಸಲನ್ನು ರೈತನೊಬ್ಬ ಹರಗಿ ನೋವನ್ನು ತೋಡಿಕೊಂಡಿದ್ದಾರೆ.ತಾಲೂಕಿನ ಲಕ್ಕುಂಡಿ ಗ್ರಾಮದ ರೈತ ಕರಿಯಪ್ಪ ತಿಮ್ಮಾಪೂರ ಅವರು ತಮ್ಮ ಪಾಪನಾಶಿ ರಸ್ತೆಗೆ ಹೊಂದಿರುವ ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದರು. ದರ ಕುಸಿತದಿಂದ ಕಂಗೆಟ್ಟು ಟ್ರ್ಯಾಕ್ಟರ್‌ ಮೂಲಕ ಹರಗಿ ಜಮೀನಿನಲ್ಲಿ ಗೊಬ್ಬರವಾಗಲು ಬಿಟ್ಟಿದ್ದಾರೆ. ಹೊಲ ಹರಗುವ ಮುನ್ನ ಕಿತ್ತು ಹಾಕಿರುವ ಈರುಳ್ಳಿಯನ್ನು ಕುರಿ ಮೇಯಲು ಬಿಟ್ಟಿದ್ದರು. ಅದನ್ನು ನೋಡಿ ರೈತರಿಗೆ ಆಗಿರುವ ನಷ್ಟ ಕಂಡು ರಸ್ತೆಯಲ್ಲಿ ಹೋಗುವವರು ಮಮ್ಮಲ ಮರುಗಿದ್ದರು.

ಪರಿಹಾರಕ್ಕೆ ಆಗ್ರಹ: ಉಳುಮೆ, ಬೀಜ, ಗೊಬ್ಬರ, ಔಷಧಿ, ಆಳು ಸೇರಿದಂತೆ ₹75 ಸಾವಿರ ಖರ್ಚು ಮಾಡಿರುವ ರೈತ ದರ ಕುಸಿತದಿಂದ ಬೆಳೆದ ಫಸಲನ್ನು ಹರಗಿದ್ದಾರೆ. ಮಾರುಕಟ್ಟೆಯಲ್ಲಿ ಸದ್ಯ ಈರುಳ್ಳಿ ಬೆಲೆ ಕ್ವಿಂಟಲ್‌ಗೆ ₹200- ₹300 ಮಾತ್ರ ಇದ್ದು, ದರ ಕುಸಿತದಿಂದ ಈರುಳ್ಳಿ ಬೆಳೆದ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ.

ಪರಿಹಾರಕ್ಕೆ ಒತ್ತಾಯ: ಅತಿವೃಷ್ಟಿಯಿಂದ ರೈತರು ಬೆಳೆದ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಜತೆಗೆ ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಇಲ್ಲದೆ ರೈತರು ಬೆಳೆದ ಬೆಳೆಗಳನ್ನು ಜಮೀನಿನಲ್ಲಿ ಹಾಗೇ ಬಿಟ್ಟು ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಈಡಾಗಿದ್ದಾರೆ. ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸಿ ಪರಿಹಾರ ತಕ್ಷಣವೇ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.ಜಮೀನಿನಲ್ಲಿ ಕಿತ್ತು ಹಾಕಿರುವ ಈರುಳ್ಳಿಯನ್ನು ರಾಶಿ ಮಾಡಿ ಚೀಲ ತುಂಬಿ ಮಾರುಕಟ್ಟೆಗೆ ಹೋದರೆ ನಷ್ಟವೇ ಅಧಿಕವಾಗುತ್ತದೆ ಎಂಬುದನ್ನು ಅರಿತು ಜಮೀನಿನಲ್ಲಿಯೇ ಗೊಬ್ಬರವನ್ನಾಗಿ ಮಾಡಲು ಹರಗಿದ್ದೇನೆ. ಸರ್ಕಾರ ರೈತರ ಸಂಕಷ್ಟ ಅರಿತು ಆದಷ್ಟು ಬೇಗನೆ ಪರಿಹಾರ ನೀಡಬೇಕು ಎಂದು ರೈತರಾದ ಕರಿಯಪ್ಪ ತಿಮ್ಮಾಪೂರ, ಸುರೇಶ ಅಬ್ಬಿಗೇರಿ ತಿಳಿಸಿದರು.

PREV

Recommended Stories

ಮರಳು ದಂಧೆ ತಡೆದ ಎಎಸ್‌ಐಗೆ ಹಲ್ಲೆ: ರಾಜೂಗೌಡ
ನಟ ದರ್ಶನ್‌ ಸೆಲ್‌ ಪರಿಶೀಲನೆ ನಡೆಸಿದ ಕಾನೂನು ಪ್ರಾಧಿಕಾರ