ಕನ್ನಡಪ್ರಭ ವಾರ್ತೆ ಕೋಟ
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಉಡುಪಿ ಎಪಿಎಂಸಿ ಮಾಜಿ ಉಪಾಧ್ಯಕ್ಷ ಕೋಡಿ ಕೃಷ್ಣ ಪೂಜಾರಿ ಅವರು, ಸದಾಶಿವ ಐತಾಳರು ಅಪರೂಪದ ಸಿಗಡಿ ಕೃಷಿ ಮೂಲಕ ಯಶಸ್ವಿ ರೈತರೆನಿಸಿಕೊಂಡಿದ್ದಾರೆ. ಜೊತೆಗೆ ಅವರಲ್ಲಿ ಇತರ ಕೃಷಿಯ ಜ್ಞಾನವೂ ಅಪಾರವಾಗಿದ್ದು, ಓರ್ವ ಕೃಷಿ ವಿಜ್ಞಾನಿಗೆ ಇರಬೇಕಾದ ಪಾಂಡಿತ್ಯ ಅವರಲ್ಲಿದೆ ಎಂದು ಕೊಂಡಾಡಿದರು.
ಸನ್ಮಾನಕ್ಕೆ ಅಭಾರ ಸಲ್ಲಿಸಿದ ಸದಾಶಿವ ಐತಾಳರು, ರೈತನಿಗೆ ತಾಳ್ಮೆ, ಆವಿಷ್ಕಾರಿ ಮನೋಭಾವ, ಸವಾಲುಗಳನ್ನು ಸ್ವೀಕರಿಸುವ ಗುಣ ಅಗತ್ಯ. ಇವೆಲ್ಲವೂ ಇದ್ದರೆ ಹೊಸತನ ಅಳವಡಿಸಿ ಯಶಸ್ವಿಯಾಗಬಹುದು ಎಂದರು.ಕೋಟ ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಜಿತ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕೋಡಿ ಗ್ರಾ.ಪಂ. ಅಧ್ಯಕ್ಷೆ ಗೀತಾ ಖಾರ್ವಿ, ರೋಟರಿ ಕ್ಲಬ್ ಕಾರ್ಯದರ್ಶಿ ಜಿ.ತಿಮ್ಮ ಪೂಜಾರಿ, ಕರ್ಣಾಟಕ ಬ್ಯಾಂಕ್ ನಿವೃತ್ತ ಉದ್ಯೋಗಿ ಕೋಡಿ ಚಂದ್ರಶೇಖರ ನಾವಡ, ಕೋಡಿ ಗ್ರಾ.ಪಂ. ಸದಸ್ಯ ಪ್ರಭಾಕರ ಮೆಂಡನ್, ಅಂಥೋನಿ ಡಿಸೋಜ, ಹಂದಾಡಿ ಗ್ರಾ.ಪಂ. ಕಾರ್ಯದರ್ಶಿ ಪೂರ್ಣಿಮಾ ಅಧಿಕಾರಿ, ರೈತಧ್ವನಿ ಅಧ್ಯಕ್ಷ ಜಯರಾಮ್ ಶೆಟ್ಟಿ, ಕಾರ್ಕಡ ಗೆಳೆಯರ ಬಳಗದ ಜಗದೀಶ್ ಆಚಾರ್ಯ, ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ, ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ ಉಪಸ್ಥಿತರಿದ್ದರು.
ಮಹಿಳಾ ಮಂಡಲ ಸ್ಥಾಪಕಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ಪ್ರಾಸ್ತಾವಿಸಿದರು. ಸದಸ್ಯ ಕಾರ್ತಿಕ ಎನ್. ಗಾಣಿಗ ಸನ್ಮಾನಿತರನ್ನು ಪರಿಚಯಿಸಿದರು. ಮಹಿಳಾ ಮಂಡಲದ ಸಂಚಾಲಕಿ ಸುಜಾತಾ ಎಂ. ಬಾಯರಿ ನಿರೂಪಿಸಿದರು. ಮಹಿಳಾ ಮಂಡಲದ ಕಾರ್ಯದರ್ಶಿ ವಸಂತಿ ಹಂದಟ್ಟು ವಂದಿಸಿದರು.