ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಸ್ಥಳೀಯ ಕಲಾವಿದರಾದ ಮನು, ಗಣೇಶ, ಜ್ಯೂನಿಯರ್ ರವಿಚಂದ್ರನ್, ಮ್ಯೂಸಿಕ್ ಮೈಲಾರಿ, ಶಿವು, ಲಕ್ಷ್ಮಿ ಹಾಗೂ ಪಲ್ಲವಿ ತಮ್ಮ ಪ್ರತಿಭೆಯಿಂದ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು. ಸಂಜೆ 7ರಿಂದ ಮಧ್ಯರಾತ್ರಿ 1.30ರವರೆಗೆ ನಡೆದ ಕಾರ್ಯಕ್ರಮವನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು.
ದಾನಿಗಳಿಗೆ ಸನ್ಮಾನ: ಹಾಸ್ಯ ಸಂಜೆ ಮತ್ತು ಸಂಗೀತ ರಸಮಂಜರಿ ಕಾರ್ಯಕ್ರಮಕ್ಕೆ ಉದಾರ ದೇಣಿಗೆ ನೀಡಿದ ಸಮಾಜ ಸೇವಕ, ಮಾಜಿ ಸೈನಿಕ ಹಾಗೂ ಕಿರುತೆರೆ ಮತ್ತು ಚಲನಚಿತ್ರ ನಿರ್ಮಾಪಕ ಶ್ರೀಶೈಲ ಭಜಂತ್ರಿ, ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಜಿಲ್ಲಾ ಉಪಾಧ್ಯಕ್ಷ ಹಾಗೂ ರಬಕವಿ-ಬನಹಟ್ಟಿ ತಾಲೂಕು ಘಟಕದ ಅಧ್ಯಕ್ಷ ಚೆನ್ನಬಸಪ್ಪ ಹೊಸೂರ, ಉದ್ಯಮಿ ರಮೇಶ ಕೆಸರಗೊಪ್ಪ ಹಾಗೂ ಕನ್ನಡಪ್ರಭ–ಸುವರ್ಣ ವಾಹಿನಿಯ ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿ ಪುರಸ್ಕೃತ ಹುಚ್ಚೇಶ ವಡ್ಡರ ಸೇರಿದಂತೆ ದಾನಿಗಳನ್ನು ಸನ್ಮಾನಿಸಲಾಯಿತು.ಮುಂದಿನ ವರ್ಷದ ಜಾತ್ರೋತ್ಸವಕ್ಕೆ ಶ್ರೀಶೈಲ ಭಜಂತ್ರಿ ₹1 ಲಕ್ಷ, ಚೆನ್ನಬಸಪ್ಪ ಹೊಸೂರ ಹಾಗೂ ರಮೇಶ ಕೆಸರಗೊಪ್ಪ ತಲಾ ₹50 ಸಾವಿರ ದೇಣಿಗೆ ನೀಡುವುದಾಗಿ ವಾಗ್ದಾನ ಮಾಡಿದರು.ಗಣ್ಯರಿಗೆ ಗೌರವ: ಮಹಾಲಿಂಗೇಶ್ವರ ಮಠದ ಆಡಳಿತಾಧಿಕಾರಿ ಈಶ್ವರ ಮಠದ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾತ್ರಾ ಕಮಿಟಿ ಅಧ್ಯಕ್ಷ ರವಿಗೌಡ ಪಾಟೀಲ, ಉಪಾಧ್ಯಕ್ಷ ಬಸವರಾಜ ಪಾಶ್ಚಾಪುರ, ಮಾಜಿ ಅಧ್ಯಕ್ಷ ಲಕ್ಷ್ಮಣಗೌಡ ಪಾಟೀಲ, ಕಾಂಗ್ರೆಸ್ ನಾಯಕ ಸಿದ್ದು ಕೊಣ್ಣೂರ, ಪುರಸಭೆ ಮಾಜಿ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಬೆಳಗಲಿ ಪಪಂ ಅಧ್ಯಕ್ಷ ಸಿದ್ದುಗೌಡ ಪಾಟೀಲ, ವಿಜುಗೌಡ ಪಾಟೀಲ, ಸುನಿಲಗೌಡ ಪಾಟೀಲ, ಶಂಕರಗೌಡ ಪಾಟೀಲ, ಶಿವಕುಮಾರಗೌಡ ಪಾಟೀಲ, ಮಹಾಂತೇಶ ಚಿಂಚಲಿ, ವಿಶ್ವ ಹಿರೇಮಠ, ಮಹಾಲಿಂಗ ಪುರಾಣಿಕ, ಜಂಬಿಗಿ ಸೇರಿದಂತೆ ಗಣ್ಯರನ್ನು ಜಾತ್ರಾ ಕಮಿಟಿಯ ವ್ಯವಸ್ಥಾಪಕರಾದ ಕೃಷ್ಣಗೌಡ ಪಾಟೀಲ, ಮಹಾಲಿಂಗಪ್ಪ ತಟ್ಟಿಮನಿ, ಶಂಕರಗೌಡ ಪಾಟೀಲ, ವಿಠ್ಠಲ ಹಲಗಣಿ ಹಾಗೂ ಮಹಾಲಿಂಗ ಮಾಳಿ ನೇತೃತ್ವದಲ್ಲಿ ಸನ್ಮಾನಿಸಲಾಯಿತು.ಸುಪ್ರೀತಾ ವಜ್ರಮಟ್ಟಿ ಹಾಗೂ ಕಾವ್ಯ ಮಾಳಿ ಪ್ರಾರ್ಥಿಸಿದರು. ಪತ್ರಕರ್ತ ನಾರನಗೌಡ ಉತ್ತಂಗಿ ಕಾರ್ಯಕ್ರಮ ನಿರೂಪಿಸಿದರು.