ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಹಿಂದಿ ಅಧ್ಯಯನ ವಿಭಾಗದ ವತಿಯಿಂದ ಹಿಂದಿ ದಿನಾಚರಣೆ ಹಾಗೂ ಹಿಂದಿ ಭಾಷೆ ಸಾಹಿತ್ಯದ ವಿವಿಧ ಆಯಾಮಗಳು ವಿಷಯದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿ ಭಾಷೆಯಲ್ಲಿ ರಚನೆಯಾಗಿರುವ ಉತ್ತಮ ಸಾಹಿತ್ಯವನ್ನು ಎಲ್ಲರೂ ಓದಿ, ಅರ್ಥೈಸಿಕೊಳ್ಳುವ ಮೂಲಕ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಸಹಕರಿಸಬೇಕು. ಹಿಂದಿ ಭಾಷೆ ದೇಶದ ಪ್ರಮುಖ ಸಂಪರ್ಕ ಭಾಷೆಯಾಗಿದ್ದು, ಭಾಷೆಯ ಬೆಳವಣಿಗೆಗೆ ಶ್ರಮಿಸುತ್ತಿರುವ ಎಲ್ಲ ಹಿಂದಿ ಪ್ರೇಮಿಗಳನ್ನು ಅಭಿನಂದಿಸಬೇಕು ಎಂದರು.
ಕುಲಸಚಿವ ಡಾ.ವಿಜಯಕುಮಾರ ಅಜೂರ ಮಾತನಾಡಿ, ಹಿಂದಿ ಭಾಷೆಯ ಮಹತ್ವ, ಅದರ ಹುಟ್ಟು ಮತ್ತು ಬೆಳವಣಿಗೆಯ ಕುರಿತು ವಿವರಿಸಿದರು. ಪ್ರಾಧ್ಯಾಪಕ ಪ್ರೊ.ಹಾಶಿಂಬೇಗ್ ಮಿರ್ಜಾ ಮಾತನಾಡಿ, ಹಿಂದಿ ಸಾಹಿತ್ಯದ ವಿವಿಧ ಆಯಾಮಗಳ ಕುರಿತು ಸಮಗ್ರ ಚಿಂತನೆ ನಡೆಯಬೇಕು ಎಂದರು.ಕಲಾ ನಿಕಾಯದ ಡೀನ್ ಪ್ರೊ.ರಾಜು ಬಾಗಲಕೋಟ, ಪ್ರೊ.ಶಾಂತಾದೇವಿ.ಟಿ, ಡಾ.ಗುಲಾಬ ರಾಠೋಡ, ರಾಜ್ಯದ ವಿವಿಧ ಕಾಲೇಜುಗಳ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ.ಅಮರನಾಥ ಪ್ರಜಾಪತಿ ವಂದಿಸಿದರು. ಪದ್ಮಶ್ರೀ ಚೌಗಲೆ ನಿರೂಪಿಸಿದರು.