ಮೃಗಾಲಯದಲ್ಲಿ ಹೆಣ್ಣಾನೆ ಪದ್ಮಾವತಿ ಸಾವು

KannadaprabhaNewsNetwork |  
Published : Aug 15, 2025, 01:00 AM IST
43 | Kannada Prabha

ಸಾರಾಂಶ

ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಇತ್ತೀಚೆಗಷ್ಟೇ ಸಿಂಹಿಣಿ ಮರಣ ಹೊಂದಿದ್ದ ಬೆನ್ನಲೆ ಇದೀಗ ಸುಮಾರು 71 ವರ್ಷ ವಯಸ್ಸಿನ ಪದ್ಮಾವತಿ ಎಂಬ ಹೆಣ್ಣಾನೆ ಮರಣ

 ಮೈಸೂರು : ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಇತ್ತೀಚೆಗಷ್ಟೇ ಸಿಂಹಿಣಿ ಮರಣ ಹೊಂದಿದ್ದ ಬೆನ್ನಲೆ ಇದೀಗ ಸುಮಾರು 71 ವರ್ಷ ವಯಸ್ಸಿನ ಪದ್ಮಾವತಿ ಎಂಬ ಹೆಣ್ಣಾನೆಯು ಗುರುವಾರ ಸಂಜೆ ಮರಣ ಹೊಂದಿದೆ. 

ಈ ಹೆಣ್ಣು ಆನೆಯು ಕಳೆದ ಐದು ದಶಕಗಳಿಗೂ ಹೆಚ್ಚು ಕಾಲ ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದ ಅವಿಭಾಜ್ಯ ಅಂಗವಾಗಿತ್ತು. 1973 ವರ್ಷದಲ್ಲಿ ಖೆಡ್ಡಾ ಕಾರ್ಯಾಚರಣೆಯ ಸಮಯದಲ್ಲಿ (1953-54ನೇ ವರ್ಷದಲ್ಲಿ ಅಂದಾಜು ಜನನ) ರಕ್ಷಿಸಲ್ಪಟ್ಟ ಪದ್ಮಾವತಿ ಆನೆಯು ಮೃಗಾಲಯದ ಇತಿಹಾಸದಲ್ಲಿ ಅತ್ಯಂತ ಹಿರಿಯ ಆನೆಯಾಗಿದ್ದು, ಸುಮಾರು 53 ವರ್ಷಗಳ ಕಾಲ ಮೈಸೂರು ಮೃಗಾಲಯದ ಆರೈಕೆಯಲ್ಲಿತ್ತು.  

ಪದ್ಮಾವತಿ ಆನೆಯು ಈ ಕೆಳಕಂಡ ಮೂರು ಮಕ್ಕಳ ತಾಯಿಯಾಗಿದ್ದಳು.1979ರಲ್ಲಿ ಜನಿಸಿದ ಗಜಲಕ್ಷ್ಮಿ- ಪ್ರಸ್ತುತ ಮೈಸೂರು ಮೃಗಾಲಯದಲ್ಲಿದೆ.1996ರಲ್ಲಿ ಜನಿಸಿದ ಕೋಮಲ, 2004ರಲ್ಲಿ ಜನಿಸಿದ ಅಭಿಮನ್ಯು.ವೃದ್ಧಳಾಗಿದ್ದ ಪದ್ಮಾವತಿ ಆನೆಗೆ ಶಾಂತಿಯ ವಾತಾವರಣವನ್ನು ಒದಗಿಸಲು ನಾಲ್ಕು ವರ್ಷಗಳ ಹಿಂದೆ ಅದನ್ನು ಮೈಸೂರು ಮೃಗಾಲಯದ ಶ್ರೀ ಚಾಮುಂಡಿ ವನ್ಯಜೀವಿ ಸಂರಕ್ಷಣೆ, ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಇಲ್ಲಿ ಆನೆಯು ಮೃಗಾಲಯ ವೀಕ್ಷಕರಿಂದ ದೂರವಿದ್ದು, ವಿಶಾಲವಾದ ನೈಸರ್ಗಿಕ ವಾತಾವರಣದಲ್ಲಿ ಆನಂದವಾಗಿತ್ತು.ಬುಧವಾರದವರೆಗೂ ಪದ್ಮಾವತಿ ಆನೆಯ ಆರೋಗ್ಯವು ಸ್ಥಿರವಾಗಿದ್ದು, ವಯೋವೃದ್ಧತೆಗೆ ಸಂಬಂಧಿತ ಲಕ್ಷಣಗಳನ್ನು ತೋರಿಸುತ್ತಿತ್ತು.

 ಇಂದು ಬೆಳಗ್ಗೆಯಿಂದ ಆಕೆ ಮೇಲೇಳಲು ಸಾಧ್ಯವಾಗದೆ. ಮಲಗಿದ ಸ್ಥಿತಿಯಲ್ಲೇ ಇತ್ತು. ಮೈಸೂರು ಮೃಗಾಲಯದ ಪಶುವೈದ್ಯ ತಂಡವು ತಕ್ಷಣವೇ ತೀವ್ರ ವೈದ್ಯಕೀಯ ಪರೀಕ್ಷೆಗಳು ಮತ್ತು ಸಹಾಯಕ ಚಿಕಿತ್ಸೆ ಸೇರಿದಂತೆ ವೈದ್ಯಕೀಯ ಆರೈಕೆಯನ್ನು ಪ್ರಾರಂಭಿಸಿತು. ಎಲ್ಲ ಸಂಭಾವ್ಯ ಪ್ರಯತ್ನಗಳ ನಡುವೆ ಪದ್ಮಾವತಿಯು ಚಿಕಿತ್ಸೆಗೆ ಪ್ರತಿಕ್ರಿಯಿಸದೇ ಗುರುವಾರ ಸಂಜೆ ಕೂರ್ಗಳ್ಳಿ ಕೇಂದ್ರದಲ್ಲಿ ಮೃತಪಟ್ಟಿದೆ. 

ಸಾವಿನ ನಿಖರವಾದ ಕಾರಣವನ್ನು ತಿಳಿಯಲು ಸದ್ಯದಲ್ಲೇ ಮರಣೋತ್ತರ ಪರೀಕ್ಷೆ ನಡೆಲಾಗುವುದು.ಕಳೆದ ಹಲವು ದಶಕಗಳಿಂದ ಮೃಗಾಲಯದ ವೀಕ್ಷಕರು, ವನ್ಯಜೀವಿ ಉತ್ಸಾಹಿಗಳು. ಮೃಗಾಲಯ ಸಿಬ್ಬಂದಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ತನ್ನು ಹೊಂದಿದ್ದ ಈ ಅಪ್ರತಿಮ ಆನೆಯ ಸಾವಿಗೆ ಮೈಸೂರು ಮೃಗಾಲಯವು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!