ಕೆ.ಎನ್‌. ರಾಜಣ್ಣ ವಜಾ: ನಾಯಕರ ಸಂಘದ ಬೃಹತ್ ಪ್ರತಿಭಟನೆ

KannadaprabhaNewsNetwork |  
Published : Aug 15, 2025, 01:00 AM IST
51 | Kannada Prabha

ಸಾರಾಂಶ

ನಾಯಕ ಸಮುದಾಯದ ರಾಜಕಾರಣಿಗಳನ್ನು ರಾಜಕೀಯವಾಗಿ ಹತ್ತಿಕುವಂತಹ ಹುನ್ನಾರವನ್ನು ರಾಜ್ಯ ಸರ್ಕಾರ ನಡೆಸುತ್ತಿದೆ,

ಕನ್ನಡಪ್ರಭ ವಾರ್ತೆ ನಂಜನಗೂಡುಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟಿರುವ ಕ್ರಮವನ್ನು ಖಂಡಿಸಿ ತಾಲೂಕು ನಾಯಕರ ಸಂಘದ ವತಿಯಿಂದ ಶುಕ್ರವಾರ ಬೃಹತ್ ಪ್ರತಿಭಟಿಸಿದರು.ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಬಳಿ ಜಮಾವಣೆಗೊಂಡ ತಾಲೂಕು ನಾಯಕರ ಸಂಘದ ಪದಾಧಿಕಾರಿಗಳು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅವರು ಆಕ್ರೋಶ ವ್ಯಕ್ತಪಡಿಸಿದರು. ಜಿಪಂ ಮಾಜಿ ಸದಸ್ಯ ಸಿ. ಚಿಕ್ಕರಂಗನಾಯಕ ಮಾತನಾಡಿ, ನಾಯಕ ಸಮುದಾಯದ ರಾಜಕಾರಣಿಗಳನ್ನು ರಾಜಕೀಯವಾಗಿ ಹತ್ತಿಕುವಂತಹ ಹುನ್ನಾರವನ್ನು ರಾಜ್ಯ ಸರ್ಕಾರ ನಡೆಸುತ್ತಿದೆ, ವಾಲ್ಮೀಕಿ ನಿಗಮದ ಹಗರಣದ ಮೂಲಕ ನಮ್ಮ ಸಮುದಾಯದ ನಾಗೇಂದ್ರರವರನ್ನು ಜೈಲಿಗಟ್ಟಿದ್ದಲ್ಲದೆ, ಅದೇ ವಾಲ್ಮೀಕಿ ನಿಗಮದ ಹಣವನ್ನು ಬಳಕೆ ಮಾಡಿಕೊಂಡು ಶ್ರೀರಾಮುಲು ಅವರನ್ನು ಸೋಲಿಸಲಾಯಿತು, ಈಗ ಕೆ.ಎನ್. ರಾಜಣ್ಣ ಅವರು ಯಾವ ತಪ್ಪು ಮಾಡದಿದ್ದರೂ ಸಹ ಅವರ ತಪ್ಪು ಏನೆಂದು ತಿಳಿಸದೆ ಏಕಾಏಕಿ ಅವರನ್ನು ಸಚಿವ ಸಂಪುಟದಿಂದ ವಜಗೊಳಿಸಿರುವುದು ದುರದೃಷ್ಟಕರ, ಸತ್ಯ ಮಾತನಾಡುವುದೇ ತಪ್ಪು ಎಂದಾದರೆ ಹೇಗೆ? ಕೆ.ಎನ್. ರಾಜಣ್ಣ ಅವರು ಎಸ್ಸಿ, ಎಸ್ಟಿ ಕ್ಷೇತ್ರಗಳಲ್ಲಿ ಆಯ್ಕೆಯಾಗದೆ ಸಾಮಾನ್ಯ ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯದಿಂದ ಆಯ್ಕೆಯಾಗಿ ಬಂದವರು, ಅಂತಹ ಹಿರಿಯ ರಾಜಕಾರಣಿಯನ್ನು ಹೀಗೆ ಸಚಿವ ಸಂಪುಟದಿಂದ ಏಕಾಏಕಿ ಕೈಬಿಟ್ಟು ಅವಮಾನಸಿರುವ ಕ್ರಮ ಸರಿಯಲ್ಲ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಆಯ್ಕೆ ಮಾಡಿಕೊಳ್ಳಬೇಕು, ಇಲ್ಲವಾದಲ್ಲಿ ರಾಜ್ಯಯ ಸರ್ಕಾರಕ್ಕೆ ತಕ್ಕಕ ಪಾಠವನ್ನು ಕಲಿಸಲಾಗುವುದು ಎಂದು ಎಚ್ಚರಿಸಿದರು.ತಾಲೂಕು ನಾಯಕರ ಸಂಘದ ಅಧ್ಯಕ್ಷ ಕೆ. ನಾಗರಾಜು ಮಾತನಾಡಿ, ಕೆ.ಎನ್. ರಾಜಣ್ಣ ಅವರು 45ವರ್ಷಗಳ ಕಾಲ ದಕ್ಷ ಮತ್ತು ಪ್ರಾಮಾಣಿಕವಾಗಿ ರಾಜಕಾರಣ ಮಾಡಿದ್ದಾರೆ, ಅಲ್ಲದೆ ಅವರು ನೇರ ನುಡಿ ರಾಜಕಾರಣಿಯಾಗಿ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ. ಅಂತಹ ಮುಂಚೂಣಿಯ ನಾಯಕರನ್ನು ಸರ್ಕಾರ ಕಾರಣ ನೀಡದೆ ಏಕಾಏಕಿ ಸಚಿವ ಸಂಪುಟದಿಂದ ವಜಾಗೊಳಿಸಿ ನಾಯಕ ಸಮುದಾಯಕ್ಕೆ ಅನ್ಯಾಯವೆಸಗಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯವಾದದ್ದು ಹೇಳಿದರು.ಕಳಲೆ ಗ್ರಾಪಂ ಅಧ್ಯಕ್ಷ ಮಹೇಶ್, ತಾಲೂಕು ನಾಯಕರ ಸಂಘದ ಗೌರವಾಧ್ಯಕ್ಷ ಶಿವನಂಜನಾಯಕ, ನಾಯಕ ಸಮುದಾಯದ ಪ್ರಧಾನ ಕಾರ್ಯದರ್ಶಿ ಶ್ರೀಕಂಠಸ್ವಾಮಿ, ಖಜಾಂಚಿ ಸುಧೀಂದ್ರ ಕುಮಾರ್, ತಾಪಂ ಮಾಜಿ ಸದಸ್ಯ ಶಿವಣ್ಣ, ಮುಖಂಡರಾದ ನಾಗರಾಜು, ಕುಮಾರ್, ಲಕ್ಷ್ಮಣ, ಬಸವರಾಜು, ರಂಗಸ್ವಾಮಿ ಇದ್ದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ