ದೊಡ್ಡಬಳ್ಳಾಪುರ: ನಗರದ ವಿವಿಧ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಬುಧವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕ್ರೈಸ್ತ ಬಾಂಧವರು ವಿಶೇಷ ಪ್ರಾಥ೯ನೆಗಳಲ್ಲಿ ಪಾಲ್ಗೊಂಡು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೖಶ್ಯ ಎಲ್ಲೆಡೆ ಸಾಮಾನ್ಯವಾಗಿ ಕಂಡು ಬಂತು.
ಕೊಂಗಾಡಿಯಪ್ಪ ಮುಖ್ಯರಸ್ತೆ ಕ್ರಾಸ್‌ನಲ್ಲಿರುವ ಚರ್ಚ್, ಪಾಲನಜೋಗಿಹಳ್ಳಿ, ಪಾಲ್‌ಫಾಲ್ ದಿನ್ನೆ, ಮಧುರೆ ಮೇರಿ ಚಚ್೯ ಸೇರಿದಂತೆ ಪ್ರಮುಖ ಹೋಬಳಿ ಕೇಂದ್ರಗಳಾದ ತೂಬಗೆರೆ, ದೊಡ್ಡಬೆಳವಂಗಲ, ಸಾಸಲು, ಕನಸವಾಡಿಗಳ ವಿವಿದೆಡೆ ಸಹ ಕ್ರಿಸ್ಮಸ್ ಹಬ್ಬವನ್ನು ಸಡಗರದಿಂದ ಆಚರಿಸಲಾಗಿದೆ. ಕ್ರೈಸ್ತ ಧಮೀ೯ಯರು ಬಂಧು-ಬಾಂಧವರೊಂದಿಗೆ ಹಬ್ಬದ ಸಡಗರದಲ್ಲಿ ಪಾಲ್ಗೊಂಡಿದ್ದರು. ಸಿಹಿ ಹಂಚಿ, ಪರಸ್ಪರ ಉಡುಗೊರೆಗಳನ್ನು ನೀಡಿ ಸಂಭ್ರಮಿಸಿದರು.
ನಕ್ಷತ್ರ ಜ್ಯೋತಿ:ಹಲವೆಡೆ ಕ್ರಿಸ್ತನ ಹುಟ್ಟಿನ ಧ್ಯೋತಕವಾಗಿ ನಕ್ಷತ್ರಗಳನ್ನು ಬೆಳಗಿಸಿ ಸಂಭ್ರಮಿಸಲಾಯಿತು. ಅದೇ ರೀತಿ ಕೊಟ್ಟಿಗೆಯ ರೂಪಕಗಳನ್ನು ಸೖಷ್ಠಿಸಿ ಕ್ರಿಸ್ತನ ಜನನದ ಶುಭ ಸಂದೇಶವನ್ನು ಮಾದರಿಗಳ ಮೂಲಕ ಪ್ರದಶಿ೯ಸಲಾಗಿದ್ದದ್ದು ವಿಶೇಷವಾಗಿತ್ತು. ಕೆಲವರು ಮನೆಗಳಲ್ಲಿ ಸಹ ವಿಶೇಷ ಪ್ರಾಥ೯ನೆ, ಕ್ರಿಸ್ತ ಜನನದ ಸಂದೇಶ ಸಾರುವ ರೂಪಕ ಮಾದರಿಗಳನ್ನು ಮಾಡಿ ಗಮನ ಸಳೆದರು.
(ಮಿಡಲ್ ಪಕ್ಕದ ಜಾಗಕ್ಕೆ ಚೆಂದದ ಒಂದು ಫೋಟೋ ಬಳಸಿ)25ಕೆಡಿಬಿಪಿ1-
ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರ ವೃತ್ತದಲ್ಲಿರುವ ಸೇಂಟ್ ತೆರೇಸಾ ಚಚ್೯ನಲ್ಲಿ ಕ್ರಿಸ್‌ಮಸ್ ಅಂಗವಾಗಿ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು.--
25ಕೆಡಿಬಿಪಿ2-ದೊಡ್ಡಬಳ್ಳಾಪುರದ ಚಚ್೯ ಆವರಣದಲ್ಲಿ ಕ್ರಿಸ್‌ಮಸ್ ಅಂಗವಾಗಿ ಕ್ರಿಸ್ತನ ಜನನವಾದ ಕೊಟ್ಟಿಗೆಯ ಮಾದರಿ, ಜೀವನ ವೃತ್ತಾಂತ ಮಾದರಿ ತಯಾರಿಸಿ ಸಂಭ್ರಮಿಸಲಾಯಿತು.
--25ಕೆಡಿಬಿಪಿ3-
ದೊಡ್ಡಬಳ್ಳಾಪುರದ ಚರ್ಚ್‌ನಲ್ಲಿ ಕ್ರಿಸ್‌ಮಸ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ನಡೆಯಿತು.