ಚುನಾವಣೆಯ ಗೆಲುವಿಗಾಗಿ ಬಿಜೆಪಿಯಿಂದ 4 ಸಾವಿರ ಕಾರ್ಯಕರ್ತರ ಮುಂಚೂಣಿಯಲ್ಲಿ ರಚನಾತ್ಮಕವಾದ ಕಾರ್ಯತಂತ್ರಗಳನ್ನ ಸಿದ್ಧಪಡಿಸಿ ಅದರ ಅದಕ್ಕೆ ತಕ್ಕಂತೆ ಶ್ರಮವಹಿಸಿದ ಪರಿಣಾಮ ಸಂಕನೂರ ಅವರು ಅಭೂತಪೂರ್ವ ಗೆಲುವು ಸಾಧಿಸಲು ಸಾಧ್ಯವಾಗಿದೆ.
ಶಿರಸಿ: ಎನ್ಡಿಎ ಕಾರ್ಯಕರ್ತರ ಸಂಘಟನಾತ್ಮಕ ಚತುರತೆ ಮತ್ತು ನಿರಂತರ ಶ್ರಮದಿಂದ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ. ಸಂಕನೂರ ಅವರು ಅಭೂತಪೂರ್ವ ಗೆಲುವು ಸಾಧಿಸಲು ಸಾಧ್ಯವಾಗಿದೆ. ಇದು ಮುಂಬರುವ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕರ್ತರಿಗೆ ಕರೆ ನೀಡಿದರು.
ಶುಕ್ರವಾರ ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಸ್.ವಿ. ಸಂಕನೂರ ಅವರ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರು ಮತ್ತು ಮತದಾರರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ರಾವಣನನ್ನು ಸಂಹಾರ ಮಾಡಲು ಶ್ರೀರಾಮನಿಗೆ ವಾನರ ಸೈನ್ಯ ಯಾವ ರೀತಿ ಸಹಾಯ ಮಾಡಲಾಯಿತೋ ಅದೇ ರೀತಿ ನಮ್ಮ ಬಿಜೆಪಿಯ ಮಹಾ ಘಟಬಂಧನ ಈ ಚುನಾವಣೆಯಲ್ಲಿ ವಿವಿಧ ಕಾರ್ಯತಂತ್ರಗಳನ್ನು ರೂಪಿಸುವ ಮೂಲಕ ಚುನಾವಣೆಯಲ್ಲಿ ಶ್ರಮಿಸಿದೆ ಎಂದರು.ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಮಾತನಾಡಿ, ಚುನಾವಣೆಯ ಗೆಲವಿಗಾಗಿ ಬಿಜೆಪಿಯಿಂದ 4 ಸಾವಿರ ಕಾರ್ಯಕರ್ತರ ಮುಂಚೂಣಿಯಲ್ಲಿ ರಚನಾತ್ಮಕವಾದ ಕಾರ್ಯತಂತ್ರಗಳನ್ನ ಸಿದ್ಧಪಡಿಸಿ ಅದರ ಅದಕ್ಕೆ ತಕ್ಕಂತೆ ಶ್ರಮವಹಿಸಿದ ಪರಿಣಾಮ ಸಂಕನೂರ ಅವರು ಅಭೂತಪೂರ್ವ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದರು.ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ಮೊದಮೊದಲು ಸಂಕನೂರ ಅವರ ಬಗ್ಗೆ ಸ್ವಲ್ಪ ಭಿನ್ನಾಭಿಪ್ರಾಯಗಳು ಇದ್ದರೂ ಬಿಜೆಪಿ ಸೂಕ್ತವಾದ ಅಭ್ಯರ್ಥಿಯನ್ನು ಸೂಕ್ತವಾದ ಸಮಯಕ್ಕೆ ಆಯ್ಕೆ ಮಾಡಿರುವುದರಿಂದ ಮೊದಲ ಪ್ರಾಶಸ್ತ್ಯದ ಮತವನ್ನು ಪಡೆಯುವ ಮೂಲಕ ಭರ್ಜರಿ ಗೆಲವು ಬಂದಿರುವುದು ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದರು.ಶಾಸಕ ದಿನಕರ್ ಶೆಟ್ಟಿ ಮಾತನಾಡಿ, ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಜಯಭೇರಿ ಗಳಿಸಿದ ಎಸ್.ವಿ. ಸಂಕನೂರ್ ಅವರು ಸತತ 3 ಬಾರಿ ಗೆಲುವು ಸಾಧಿಸಲು ನಮ್ಮ ಸಂಘಟಿತ ಸಂಘಟನೆಯೇ ಕಾರಣ ಎಂದು ಅಭಿಪ್ರಾಯಪಟ್ಟರು.ವಿಧಾನಪರಿಷತ್ ಮಾಜಿ ಸದಸ್ಯ ಶಾಂತಾರಾಮ್ ಸಿದ್ದಿ ಮಾತನಾಡಿ, ಸದನದಲ್ಲಿ ಗಟ್ಟಿಯಾಗಿ ಮಾತನಾಡುವ ಹಲರವಲ್ಲಿ ಸಂಕನೂರ ಅವರು ಒಬ್ಬರು ಎಂದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್. ಹೆಗಡೆ, ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಜೆಡಿಎಸ್ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ್ ಸೋನಿ ಮಾತನಾಡಿದರು.ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಆನಂದ ಸಾಲೆರ, ಉಪೇಂದ್ರ ಪೈ, ರೇಖಾ ಹೆಗಡೆ, ಸಂತೋಷ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗುರುಪ್ರಸಾದ್ ಹೆಗಡೆ, ಶಿವಾಜಿ ನರಸಾನಿ, ಪ್ರೇಮ್ ಕುಮಾರ್ ನಾಯ್ಕ್, ಹೆಗಡೆ, ಶರ್ಮಿಳಾ ಮಗನಗೇರಿ, ದೀಪಾ ತಳವಾರ್, ನಿರ್ಮಲಾ ಶೆಟ್ಟಿ ಸೇರಿದಂತೆ ಅನೇಕರು ಇದ್ದರು.