ಐದು ದಿನ ವಿಜೃಂಭಿಸಿದ ಕನಕೋತ್ಸವಕ್ಕೆ ಸಂಭ್ರಮದ ತೆರೆ

KannadaprabhaNewsNetwork |  
Published : Feb 02, 2026, 01:30 AM IST
ಕೆ ಕೆ ಪಿ ಸುದ್ದಿ 04: | Kannada Prabha

ಸಾರಾಂಶ

ಕನಕಪುರ: ಸತತ ಕಳೆದ ಐದು ದಿನಗಳಿಂದ ವಿಜೃಂಭಿಸಿದ ಕನಕೋತ್ಸವದ ಸಮಾರೋಪ ಸಮಾರಂಭದಲ್ಲಿ ತಾಲೂಕಿನ ಸಹಸ್ರಾರು ಜನ ಸಾಗರೋಪಾದಿಯಲ್ಲಿ ಆಗಮಿಸಿ ಮೆರಗು ತಂದರು

ಕನಕಪುರ: ಸತತ ಕಳೆದ ಐದು ದಿನಗಳಿಂದ ವಿಜೃಂಭಿಸಿದ ಕನಕೋತ್ಸವದ ಸಮಾರೋಪ ಸಮಾರಂಭದಲ್ಲಿ ತಾಲೂಕಿನ ಸಹಸ್ರಾರು ಜನ ಸಾಗರೋಪಾದಿಯಲ್ಲಿ ಆಗಮಿಸಿ ಮೆರಗು ತಂದರು. ತಾಲೂಕು ಕ್ರೀಡಾಂಗಣದಲ್ಲಿ ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಹಾಗೂ ವಿವಿಧ ಸಂಘ- ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನಕೋತ್ಸವದ ಕೊನೆ ದಿನ ಭಾನುವಾರ ನಗರ ವ್ಯಾಪ್ತಿಯ ಅಂತಿಮ ಹಂತದ ರಂಗೋಲಿ ಹಾಗೂ ಮೆಹಂದಿ ಸ್ಪರ್ಧೆಗಳು, ಬಾಲ್ ಬ್ಯಾಡ್ಮಿಂಟನ್ ಹಾಗೂ ನಂದಿನಿ ಉತ್ಪನ್ನಗಳ ಬಗ್ಗೆ ರೀಲ್ಸ್ ಸ್ಪರ್ಧೆ ನಡೆಯಿತು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಧರ್ಮಪತ್ನಿ ಉಷಾಶಿವಕುಮಾರ್ ಮೆಹಂದಿ ಸ್ಪರ್ಧೆ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ನಗರದ ಮಹಿಳೆಯರು ಬಿಡಿಸಿದ್ದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ರಂಗೋಲಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ರೈತರ ಭತ್ತದ ಕಣದ ರಂಗೋಲಿಗೆ ಪೂಜೆ ಸಲ್ಲಿಸಿದರು.

ಅಂತಿಮ ಹಂತದ ವಾಲಿಬಾಲ್, ಕಬಡ್ಡಿ, ಬಾಲ್‌ ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್ ಪಂದ್ಯಾವಳಿಯ ವೀಕ್ಷಣೆಗೆ ನೂರಾರು ಕ್ರೀಡಾಭಿಮಾನಿಗಳು ಆಗಮಿಸಿ ಪ್ರೋತ್ಸಾಹಿಸಿ ವಿಜೇತ ತಂಡಗಳಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್ ಬಹುಮಾನ ವಿತರಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಸಂಜೆ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ನವೀನ್ ಸಜ್ಜು, ಚಂದನ್ ಶೆಟ್ಟಿ, ವಾಸುಕಿ ವೈಭವ್ ಹಾಗೂ ತಂಡದವರ ರಸಮಯ ಗಾಯನದ ಮೂಲಕ ಅದ್ಧೂರಿ ಕನಕೋತ್ಸವಕ್ಕೆ ಭಾನುವಾರ ತೆರೆ ಬಿತ್ತು.

ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ರೂರಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಚ್.ಕೆ. ಶ್ರೀಕಂಠ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 04(1):

ಕನಕೋತ್ಸವದ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ಬಮುಲ್‌ ಅಧ್ಯಕ್ಷ ಡಿ.ಕೆ.ಸುರೇಶ್ ಬಹುಮಾನ ವಿತರಿಸಿದರು.

ಕೆ ಕೆ ಪಿ ಸುದ್ದಿ 04(2)

ಕನಕೋತ್ಸವದ ವಿಜ್ಞಾನ ಮೇಳದಲ್ಲಿ ಬ್ಲಾಸಮ್ ಶಾಲೆಯ ಬಾಲಕ ಭುವನ್ ಮಾದರಿ ಕನಕಪುರ ನಗರದ ಪ್ರದರ್ಶನಕ್ಕೆ ಪ್ರಥಮ ಬಹುಮಾನ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ
ರಾಜಕ್ಕೆ ಕೇಂದ್ರ ಬಜೆಟ್ಟಲ್ಲಿ ಚೊಂಬು : ಸಿಎಂ ಸಿಡಿಮಿಡಿ