ಕನ್ನಡಪ್ರಭ ವಾರ್ತೆ, ದಾವಣಗೆರೆ
ನ್ಯಾಮತಿ ತಾಲೂಕಿನ ಸೋಗಿಲು ಗ್ರಾಮದ ಗಿರೀಶ ನಾಯ್ಕ, ಹರೀಶ ನಾಯ್ಕ ಎಂಬುವರ ಮೇಲೆ ಕಲ್ಲು, ದೊಣ್ಣೆಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಗಾಯಾಳುಗಳ ಸಂಬಂಧಿಗಳಾದ ಶ್ರೀಧರ ನಾಯ್ಕ, ಚಿನ್ನ ನಾಯ್ಕ, ಶೈನಾ ನಾಯ್ಕ ಹಲ್ಲೆ ಮಾಡಿದ್ದಾರೆಂದು ದೂರಲಾಗಿದೆ.
ಅಣ್ಣ-ತಮ್ಮಂದಿರ ಮಕ್ಕಳಾದ ಹಲ್ಲೆ ಮಾಡಿದವರು, ಹಲ್ಲೆಗೊಳಗಾದವರ ಮಧ್ಯೆ ಜಮೀನಿನ ಬದುವಿನ ವಿಚಾರಕ್ಕೆ ಜಗಳ ಶುರುವಾಗಿದೆ. ಪರಸ್ಪರರ ಮಧ್ಯೆ ಮಾತಿಗೆ ಮಾತು ಬೆಳೆದು, ಅದು ತೀವ್ರ ಸ್ವರೂಪ ಪಡೆದಿದ್ದೆ. ಕಲ್ಲು, ದೊಣ್ಣೆಗಳಿಂದ ಗಿರೀಶ ನಾಯ್ಕ, ಹರೀಶ ನಾಯ್ಕನ ಮೇಲೆ ಶ್ರೀಧರ ನಾಯ್ಕ, ಚಿನ್ನನಾಯ್ಕ, ಶೈನಾ ನಾಯ್ಕ ಹಲ್ಲೆ ಮಾಡಿದ್ದಾರೆಂದು ಹೇಳಲಾಗಿದೆ.ಗಿರೀಶ ನಾಯ್ಕ, ಹರೀಶ ನಾಯ್ಕರನ್ನು ಹಿಡಿದುಕೊಂಡು, ಗುಂಪಿನಲ್ಲಿದ್ದವರು ಚೆನ್ನಾಗಿ ಥಳಿಸಿದ್ದಾರೆ. ಜಗಳ ವಿಕೋಪಕ್ಕೆ ಹೋಗಿದ್ದರಿಂದ ಕಲ್ಲು, ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ. ಈ ಎಲ್ಲಾ ಘಟನೆಯನ್ನು ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ದಾಯಾದಿ ಕಲಹವು ಕಲ್ಲು, ದೊಣ್ಣೆ ಹಿಡಿದು ಹೊಡೆದಾಡಿದ್ದನ್ನು ಕಂಡು ಗ್ರಾಮಸ್ಥರು ತೀವ್ರ ಗಾಬರಿ ಗೊಂಡಿದ್ದಾರೆ. ಘಟನೆಯಲ್ಲಿ ಗಿರೀಶ ನಾಯ್ಕರ ಟ್ರ್ಯಾಕ್ಟರ್ ಸಹ ಧ್ವಂಸಗೊಳಿಸಲಾಗಿದೆ.
ವೀಡಿಯೋವನ್ನು ಪರಿಶೀಲಿಸಿದಾಗ ಅದು ಹರಿಹರದ ಕಾಳಿದಾಸ ನಗರದ ಮೊಹಮ್ಮದ್ ಅಲಿ ಅಲಿಯಾಸ್ ಮೊಹಮ್ಮದ್ ಅಜ್ಗರ್ ಮೇಲೆ ಹಲ್ಲೆ ಮಾಡಿದ್ದ ಹರಿಹರದ ವಾಸಿಗಳಾದ ಆಸೀಫ್ (25 ವರ್ಷ), ಗೌಸ್, ತೌಫೀಕ್, ಸೈಯದ್, ದಾದು, ಚೋಟು, ಫೈರೋಜ್ ಹಾಗೂ ಇತರರು ಕೈ-ಕಾಲುಗಳಿಂದ ತೀವ್ರ ಹಲ್ಲೆ ಮಾಡಿದ್ದರು. ಈ ಬಗ್ಗೆ ಮೊಹ್ಮದ್ ಅಲಿ ನೀಡಿದ ದೂರಿನ ಮೇರೆಗೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಉಳಿದವರಿಗೆ ಶೋಧ ನಡೆಸಿದ್ದಾರೆ.
ಆರೋಪಿಗಳ ಪತ್ತೆಗಾಗಿ ಹರಿಹರ ನಗರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಎಸ್.ದೇವಾನಂದ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತಂಡವು ಜೂ.8ರಂದು ಮೊಹಮ್ಮದ್ ಅಲಿ ಅಲಿಯಾಸ್ ಮೊಹಮ್ಮದ್ ಅಜ್ಗರ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋ ಆಧರಿಸಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಉಳಿದ ಆರೋಪಿಗಳಿಗೆ ಶೋಧ ಕೈಗೊಂಡಿದ್ದಾರೆ.