ಹೊನ್ನಾವರ: ಈಶ್ವರ ಖಂಡ್ರೆ ಅವರು ಸಚಿವರಾಗಿ ಮೂರು ವರ್ಷ ಆಗಿದೆ. ಆದರೂ ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಆದರೂ ನಾವು ಸರ್ಕಾರದ ಆದೇಶಕ್ಕೆ ಹೆದರುವುದಿಲ್ಲ. ಆದೇಶದ ವಿರುದ್ಧ ಸ್ವಾಭಿಮಾನದಿಂದ ಹೋರಾಟ ಮಾಡುತ್ತೇವೆ ಎಂದು ಮಾಜಿ ಶಾಸಕ ಸುನೀಲ್ ನಾಯ್ಕ ಹೇಳಿದರು.
ಜಿಲ್ಲೆಯ ಜನ ಮುಗ್ಧರು ಎಂದು ಸರ್ಕಾರ ಭಾವಿಸಿದೆ. ಜಿಲ್ಲೆಯವರು ಸ್ವಾಬಿಮಾನಿಗಳಾಗಿದ್ದು, ನಾವು ಹೋರಾಟ ನಡೆಸಿಯೇ ಮೂರ್ಖ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.ಮಾಜಿ ಸಚಿವ ಶಿವಾನಂದ ನಾಯ್ಕ ಮಾತನಾಡಿ, ಸರ್ಕಾರದ ಆದೇಶದ ವಿರುದ್ಧ ಪಂಚಾಯಿತಿ ಮಟ್ಟದಲ್ಲಿ ಹೋರಾಟ ಮಾಡಿದ್ದೇವೆ. ಆದೇಶ ಹಿಂಪಡೆಯದೇ ಇದ್ದರೆ ಮುಂದಿನ ದಿನದಲ್ಲಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.ಬಿಜೆಪಿ ಪ್ರಮುಖರಾದ ಗೋವಿಂದ ನಾಯ್ಕ, ಈಶ್ವರ ನಾಯ್ಕ, ಮಂಕಿ ಬಿಜೆಪಿ ಮಂಡಲಾಧ್ಯಕ್ಷ ಮಂಜುನಾಥ ನಾಯ್ಕ, ಗಣಪತಿ ಬಿ.ಟಿ. ಸರ್ಕಾರದ ನಿರ್ಣಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮನವಿಯನ್ನು ಮೋಹನ ನಾಯ್ಕ ವಾಚಿಸಿದರು. ವಿಶ್ವೇಶ್ವರ ಹೆಗಡೆ ಸ್ವಾಗತಿಸಿ, ನಾಗೇಶ ನಾಯ್ಕ ವಂದಿಸಿದರು. ಚಿಕ್ಕನಕೋಡ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಣ್ಣಪ್ಪ ಎಂ. ಮನವಿ ಸ್ವೀಕರಿಸಿದರು. ಕೆರೆಯಲ್ಲಿ ಮುಳುಗಿ ಪೇಂಟಿಂಗ್ ಕಾರ್ಮಿಕ ಸಾವು
ಕಾರವಾರ: ಕೆರೆಯಲ್ಲಿ ಮುಳುಗಿ ಪೇಂಟಿಂಗ್ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಕಾರವಾರ ತಾಲೂಕಿನ ಚೆಂಡಿಯಾದ ಕೋಸ್ಟಲ್ ನರ್ಸರಿ ಸಮೀಪ ನಡೆದಿದೆ. ಮೃತರನ್ನು ಐಸ್ ಫ್ಯಾಕ್ಟರಿ ಚೆಂಡಿಯಾ ನಿವಾಸಿ ಅನೀಲ ಪುಂಡ್ಲೀಕ್ ತಳೇಕರ(48) ಎಂದು ಗುರುತಿಸಲಾಗಿದೆ.ಸೋಮವಾರ ಮಧ್ಯಾಹ್ನ ಸುಮಾರು 12.30ರ ವೇಳೆಗೆ ಅನೀಲ ಅವರು ಮನೆಯಲ್ಲಿ ಸಾಕಿದ್ದ ಎಮ್ಮೆ ಹಾಗೂ ಕೋಣವನ್ನು ಮೇಯಿಸಲು ಮನೆಯಿಂದ ಹೊರಗೆ ತೆರಳಿದ್ದರು. ಸಂಜೆ ಕಳೆದರೂ ಮನೆಗೆ ಮರಳಿರಲಿಲ್ಲ ಎನ್ನಲಾಗಿದೆ.ಮಂಗಳವಾರ ಬೆಳಗ್ಗೆ ಸುಮಾರು 9 ಗಂಟೆಗೆ ಅನೀಲ ಅವರ ಪತ್ನಿ ಅನಿತಾ ತಳೇಕರ ಅವರು ಕೋಸ್ಟಲ್ ನರ್ಸರಿ ಸಮೀಪದ ಕೆರೆಯ ಬಳಿ ತೆರಳಿದಾಗ, ನೀರಿನಲ್ಲಿ ಅನೀಲ ಅವರ ಮೃತದೇಹ ತೇಲುತ್ತಿರುವುದು ಕಂಡುಬಂದಿದೆ. ಬಳಿಕ ಅವರು ಈ ವಿಷಯವನ್ನು ಪತಿ ಪ್ರಕಾಶ್ ತಳೇಕರ ಹಾಗೂ ಸಂಬಂಧಿಕರಿಗೆ ತಿಳಿಸಿದ್ದಾರೆ.