ರಾಜ್ಯದ ಆರು ಪೆಟ್ರೋಲಿಯಂ ಟರ್ಮಿನಲ್ಗಳಲ್ಲಿ ಶೇ.30ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣವಾಗುತ್ತಿದೆ. ಈ ಬಗ್ಗೆ ತಾಂತ್ರಿಕ ವರದಿ, ಪ್ರಯೋಗಾಲಯ ವರದಿಯನ್ನೂ ಸೇರಿಸಿ ಕೇಂದ್ರ ಸರ್ಕಾರಕ್ಕೆ ಮಂಗಳವಾರ ವರದಿ ಸಲ್ಲಿಸುತ್ತಿರುವುದಾಗಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ಮೈಸೂರು : ರಾಜ್ಯದ ಆರು ಪೆಟ್ರೋಲಿಯಂ ಟರ್ಮಿನಲ್ಗಳಲ್ಲಿ ಶೇ.30ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣವಾಗುತ್ತಿದೆ. ಈ ಬಗ್ಗೆ ತಾಂತ್ರಿಕ ವರದಿ, ಪ್ರಯೋಗಾಲಯ ವರದಿಯನ್ನೂ ಸೇರಿಸಿ ಕೇಂದ್ರ ಸರ್ಕಾರಕ್ಕೆ ಮಂಗಳವಾರ ವರದಿ ಸಲ್ಲಿಸುತ್ತಿರುವುದಾಗಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ವರದಿ ಮೇಲೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದ ವರದಿ ಮೇಲೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ನಾವು ನಮ್ಮ ವ್ಯಾಪ್ತಿಯಲ್ಲೇ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇದು ಪೆಟ್ರೋಲ್ ಬಂಕ್ನವರ ಸಮಸ್ಯೆಯಲ್ಲ
ಇದು ಪೆಟ್ರೋಲ್ ಬಂಕ್ನವರ ಸಮಸ್ಯೆಯಲ್ಲ. ಪೆಟ್ರೋಲ್ ಬಂಕ್ ಮಾಲೀಕರು ಎಥೆನಾಲ್ ಮಿಶ್ರಣ ಮಾಡಲು ಬರುವುದಿಲ್ಲ. ಇದು ಪೆಟ್ರೋಲ್ ಬಂಕ್ಗೆ ಇಂಧನ ಪೂರೈಸುವ ಪೆಟ್ರೋಲ್ ಟರ್ಮಿನಲ್ಗಳ ಸಮಸ್ಯೆ. ಅಧಿಕ ಎಥೆನಾಲ್ ಮಿಶ್ರಣದಿಂದ ಜನ ಸಾಮಾನ್ಯರಿಗೆ ಮಾತ್ರ ಅಲ್ಲ ಪೆಟ್ರೋಲ್ ಬಂಕ್ಗಳಿಗೂ ಸಮಸ್ಯೆ ಆಗುತ್ತಿದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಅವರು ಹೇಳಿದರು.
ಬೆಲೆ ಏರಿಕೆಗೂ ಎಥೆನಾಲ್ಗೂ ಸಂಬಂಧ ಇಲ್ಲ. ಹಾಲು, ಬಸ್ ದರ ಏರಿಕೆಗಿಂತ ಒಂದು ತಿಂಗಳ ಮುಂಚೆಯೇ ನಾನು ಇದರ ಎಲ್ಲಾ ವರದಿ ತರಿಸಿಕೊಂಡಿದ್ದೇನೆ. ಇದರ ಸತ್ಯಾಸತ್ಯತೆ ಗೊತ್ತಾದ ಮೇಲೆ ಬಹಿರಂಗಪಡಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
