ಓಲಾ-ಉಬರ್ ಸೇರಿ ಎಲ್ಲ ಮಾದರಿಯ ಟ್ಯಾಕ್ಸಿಗಳಲ್ಲಿ ಆಟೋ ರಿಕ್ಷಾ ಮಾದರಿಯಲ್ಲಿ ಪ್ರಯಾಣ ದರ ಮೀಟರ್ ಅಳವಡಿಕೆ ಕಡ್ಡಾಯ ಮಾಡಲಾಗುತ್ತಿದ್ದು, ಅದಕ್ಕಾಗಿ ನಿಯಮ ರೂಪಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದರು.
ಬೆಂಗಳೂರು : ಓಲಾ-ಉಬರ್ ಸೇರಿ ಎಲ್ಲ ಮಾದರಿಯ ಟ್ಯಾಕ್ಸಿಗಳಲ್ಲಿ ಆಟೋ ರಿಕ್ಷಾ ಮಾದರಿಯಲ್ಲಿ ಪ್ರಯಾಣ ದರ ಮೀಟರ್ ಅಳವಡಿಕೆ ಕಡ್ಡಾಯ ಮಾಡಲಾಗುತ್ತಿದ್ದು, ಅದಕ್ಕಾಗಿ ನಿಯಮ ರೂಪಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೈರತಿ ಸುರೇಶ್, ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳಲ್ಲೂ ಪ್ರಯಾಣ ದರ ಮೀಟರ್ ಅಳವಡಿಸುವಂತೆ ಒತ್ತಡವಿದೆ. ಅದಕ್ಕೆ ಪೂರಕವಾಗಿ ಸರ್ಕಾರ ಓಲಾ-ಉಬರ್ ಸೇರಿ ಎಲ್ಲ ಮಾದರಿಯ ಟ್ಯಾಕ್ಸಿಗಳು ಆಟೋ ರಿಕ್ಷಾ ಮಾದರಿಯಲ್ಲಿ ಪ್ರಯಾಣ ದರ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿ ನಿಯಮ ರೂಪಿಸಲಾಗುತ್ತಿದೆ. ಇನ್ನು, ಸರ್ಕಾರವೇ ಪ್ರಯಾಣ ದರ ನಿಗದಿ ಮಾಡಿ ಆದೇಶಿಸಲಿದೆ. ಅದರಂತೆಯೇ ಪ್ರಯಾಣಿಕರಿಂದ ಪ್ರಯಾಣ ದರ ವಸೂಲಿ ಮಾಡಬೇಕು. ಒಂದು ವೇಳೆ ಸರ್ಕಾರದ ನೀತಿ ಉಲ್ಲಂಘಿಸಿ ಸಂಚರಿಸುವ ಟ್ಯಾಕ್ಸಿಗಳನ್ನು ಜಪ್ತಿ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ರೂಪುರೇಷೆ ಮತ್ತು ಕಾನೂನು ಸಿದ್ಧಪಡಿಸಲಾಗುತ್ತಿದೆ
ಟ್ಯಾಕ್ಸಿಗಳಿಗೆ ಮೀಟರ್ ಅಳವಡಿಕೆ ಕಡ್ಡಾಯಗೊಳಿಸುವ ಕುರಿತು ರೂಪುರೇಷೆ ಮತ್ತು ಕಾನೂನು ಸಿದ್ಧಪಡಿಸಲಾಗುತ್ತಿದೆ. ಸದ್ಯದಲ್ಲೇ ಕಾನೂನು ಜಾರಿಗೊಳಿಸಲಾಗುತ್ತದೆ. ವಾಹನ ಮಾಲೀಕರು ಮತ್ತು ಚಾಲಕರಿಗೆ ಟ್ಯಾಕ್ಸಿ ಆ್ಯಪ್ ಕಂಪೆನಿಗಳಿಂದ ಆಗುತ್ತಿರುವ ಶೋಷಣೆ ತಪ್ಪಿಸಲು ಈ ಕಾನೂನು ಜಾರಿಗೊಳಿಸಲಾಗುತ್ತಿದೆ. ಒಮ್ಮೆ ನಿಯಮ ರೂಪಿಸಿ, ಜಾರಿಗೊಳಿಸಿದ ನಂತರ ಸಾರಿಗೆ ಇಲಾಖೆಯಿಂದ ನಿರಂತರವಾಗಿ ತಪಾಸಣೆ ನಡೆಸಲಾಗುವುದು. ಅದರಲ್ಲೂ ವಿಮಾನ ನಿಲ್ದಾಣ ಮಾರ್ಗವಾಗಿ ಸೇವೆ ಸಲ್ಲಿಸುವ ಟ್ಯಾಕ್ಸಿಗಳ ಮೇಲೆ ಹೆಚ್ಚಿನ ನಿಗಾವಹಿಸಲಾಗುತ್ತದೆ ಎಂದು ವಿವರಿಸಿದರು.
ಆಟೋ ರೀತಿ ಕ್ಯಾಬ್‌ಗಳಿಗೂ ಮೀಟರ್ ಅಳವಡಿಕೆಗೆ ಒತ್ತಡ
ಈ ಹಿನ್ನೆಲೆಯಲ್ಲಿ ಕ್ಯಾಬ್‌ಗಳಿಗೆ ಇನ್ನು ದರ ಮೀಟರ್ ಕಡ್ಡಾಯ
ಕ್ಯಾಬ್‌ಗಳಿಗೆ ಸರ್ಕಾರದಿಂದ ದರ ನಿಗದಿ ಮಾಡಲು ನಿರ್ಧಾರ
ಈ ಸಂಬಂಧ ಸರ್ಕಾರದಿಂದ ಅಗತ್ಯ ನಿಯಮಾವಳಿ ರೂಪು
ಬಳಿಕ ಕ್ಯಾಬ್‌ಗಳಿಗೆ ಅನ್ವಯ. ನಿಯಮ ಉಲ್ಲಂಘಿಸಿದ್ರೆ ಕ್ರಮ
