ದಾಬಸ್‍ಪೇಟೆ: ಶಿಕ್ಷಣ, ಆರೋಗ್ಯ, ಸುರಕ್ಷತೆ, ಸ್ವಾವಲಂಬನೆ, ಮೂಲ ಹಕ್ಕುಗಳನ್ನು ಒದಗಿಸಿಕೊಟ್ಟು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹಾಗೂ ದೇಶದ ಏಳಿಗಾಗಿ ತನ್ನ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುವ ಮೂಲಕ ಸಂಭ್ರಮಿಸಿದ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ಎಂದು ಎಸ್ ಡಿಎಂಸಿ ಸದಸ್ಯ ಲೋಕೇಶ್ ತಿಳಿಸಿದರು

ದಾಬಸ್‍ಪೇಟೆ: ಶಿಕ್ಷಣ, ಆರೋಗ್ಯ, ಸುರಕ್ಷತೆ, ಸ್ವಾವಲಂಬನೆ, ಮೂಲ ಹಕ್ಕುಗಳನ್ನು ಒದಗಿಸಿಕೊಟ್ಟು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹಾಗೂ ದೇಶದ ಏಳಿಗಾಗಿ ತನ್ನ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುವ ಮೂಲಕ ಸಂಭ್ರಮಿಸಿದ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ಎಂದು ಎಸ್ ಡಿಎಂಸಿ ಸದಸ್ಯ ಲೋಕೇಶ್ ತಿಳಿಸಿದರು.

ಸೋಂಪುರ ಹೋಬಳಿಯ ಗೋವಿಂದಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳೇ ದೇಶದ ಅಮೂಲ್ಯ ಆಸ್ತಿ, ದೇಶವನ್ನು ಕಟ್ಟುವ ಕಟ್ಟಾಳುಗಳು, ಭವಿಷ್ಯವನ್ನು ಬರೆಯುವ ಶಿಲ್ಪಿಗಳಾಗಿದ್ದು, ಪ್ರತಿ ಮಗುವಿನ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವ ಛಲವನ್ನು ಬೆಳೆಸಬೇಕು ಎಂದರು.

ಮುಖ್ಯಶಿಕ್ಷಕಿ ಶೈಲಜಾ ಮಾತನಾಡಿ, ನೆಹರು ಮಕ್ಕಳ ಬಗ್ಗೆ ಅಗಾಧ ಒಲವು ಹೊಂದಿದ್ದರು ಎಂದರು.ಶಾಲಾ ಆವರಣದಲ್ಲಿ ಸಿದ್ಧಪಡಿಸಿದ ಪೋಟೋ ಸೆಲ್ಫಿ ಕಾರ್ನರ್‌ನಲ್ಲಿ ಪೋಷಕರು ಹಾಗೂ ಅವರ ಮಕ್ಕಳ ಪೋಟೋವನ್ನು ತೆಗೆಸಿಕೊಂಡು ಸಂಭ್ರಮಿಸಿದರು.ಕಾರ್ಯಕ್ರಮದಲ್ಲಿ ಶಿಕ್ಷಕರಾದ ಕೆಂಪರಾಜು, ಚನ್ನಬಸವರಾಜು, ಪ್ರೀಯಾಂಕ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಪೋಷಕರು, ಶಿಕ್ಷಕರು ಭಾಗವಹಿಸಿದ್ದರು.