ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಬ್ರಾಹ್ಮಣ ಸಭಾದಿಂದ ಶ್ರೀಗಾಯತ್ರಿ ಸಮುದಾಯಭವನ, ಗಾಯತ್ರಿ ವಿಪ್ರ ಮಹಿಳಾ ವಿದ್ಯಾರ್ಥಿನಿಲಯ, ಯೋಗ ಮಂದಿರ ನಿರ್ಮಾಣಕ್ಕೆ ಸಾಲ ಮತ್ತು ದೇಣಿಗೆ ರೂಪದಲ್ಲಿ ಹಣಸಂಗ್ರಹಿಸಿ ನಿರ್ಮಿಸಲಾಗಿದೆ. ೨೦೨೩-೨೪ಕ್ಕೆ ಎಲ್ಲಾ ಸಾಲದಿಂದ ಸಭಾ ಮುಕ್ತಗೊಂಡು ಸಭಾದ ಹಣಕಾಸಿನ ವ್ಯವಹಾರವೂ ಉತ್ತಮಗೊಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
೨೦೨೪-೨೫ರ ಆಡಳಿತ ಮಂಡಳಿಯಿಂದ ೬೦ ಲಕ್ಷ ರು. ಹಣ ದುರುಪಯೋಗವಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ವಾಚಾಮಗೋಚರ ನಿಂದಿಸಿದರು. ಆರು ಜನ ಹಿರಿಯ ಸದಸ್ಯರ ತಂಡವನ್ನು ರಚಿಸಿ ಲೆಕ್ಕ ಪರಿಶೋಧನಾ ಸಮಿತಿಯ ಪ್ರಕಾರ ವ್ಯತ್ಯಾಸ ಬಂದಿದ್ದ ೩ ಲಕ್ಷ ರು. ಹಣವನ್ನು ಬ್ಯಾಂಕಿಗೆ ಜಮೆ ಮಾಡಿಸಲಾಗಿದೆ. ೬೦ ಲಕ್ಷ ರು. ಹಣ ದುರುಪಯೋಗಕ್ಕೆ ಅಧಿಕೃತ ದಾಖಲೆಯನ್ನು ಯಾರೂ ನೀಡಲಿಲ್ಲ. ಮತ್ತೊಬ್ಬ ಲೆಕ್ಕ ಪರಿಶೋಧಕರ ಮಾಹಿತಿಯನ್ನೂ ನೀಡದೆ ಕೇವಲ ಪ್ರಚಾರಕ್ಕಾಗಿ ಮಾಡಿದ ಆರೋಪವಾಗಿತ್ತು ಎಂದು ದೂಷಿಸಿದರು.ಎರಡು ವಿಶೇಷ ಸರ್ವ ಸದಸ್ಯರ ಸಭೆಯನ್ನು ಮಾಡಿದ ಸಂದರ್ಭದಲ್ಲಿ ಕೇವಲ ಹತ್ತು ಜನರ ಕಿರುಚಾಟ, ಹಾರಾಟ ಬಿಟ್ಟರೆ ಬಾಕಿ ಸದಸ್ಯರಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಬೆಳ್ಳೂರು ಶಿವರಾಂ ಅವರು ಕಳೆದ ೧೫ ವರ್ಷಗಳಿಂದ ಆಡಳಿತ ಮಂಡಳಿಯಲ್ಲಿ ಮುಂದುವರೆಯುತ್ತಿರುವರೆಂಬ ಆರೋಪ ಹೊರತುಪಡಿಸಿ ಕಟ್ಟಡಗಳ ನಿರ್ಮಾಣ, ಸಭಾದ ಅಭಿವೃದ್ಧಿ ಚಟುವಟಿಕೆಗಳು ಎಷ್ಟಾಗಿದೆ ಎಂಬ ಬಗ್ಗೆ ಮಾತನಾಡುತ್ತಿಲ್ಲವೆಂದು ಆಪಾದಿಸಿದರು.
ಬ್ರಾಹ್ಮಣ ಸಭಾದ ಏಳಿಗೆ ಪ್ರಸ್ತುತದಲ್ಲಿ ಅಮೂಲ್ಯವಾಗಿದೆ. ಒಂದು ಸಮುದಾಯವನ್ನು ತುಳಿಯಲು ಬೇರೆಯವರು ನಿಂತಿರುವಾಗ ನಮ್ಮದೇ ಸಮುದಾಯದವರು ಪ್ರಚಾರಕ್ಕಾಗಿ ಹೀಯಾಳಿಸುವುದು, ನಿಂದಿಸುವುದನ್ನು ಯಾರೂ ಒಪ್ಪುವುದಿಲ್ಲ ಎಂದರು.
ಗೋಷ್ಠಿಯಲ್ಲಿ ಬೆಳ್ಳೂರು ಶಿವರಾಂ, ಮಧುಸೂಧನ್, ಎಸ್.ಎಲ್.ಗೋಪಾಲ್, ಉಮಾ ಇದ್ದರು.