ಸನಾತನ ಧರ್ಮ ಟೀಕಿಸೋರಿಗೆ ತಕ್ಕ ಉತ್ತರ ಕೊಡಬೇಕಿದೆ: ಯತ್ನಾಳ

KannadaprabhaNewsNetwork |  
Published : Oct 20, 2026, 02:15 AM IST
ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ | Kannada Prabha

ಸಾರಾಂಶ

ಸನಾತನ ಧರ್ಮ, ಪಂಚಪೀಠಗಳು ಹಾಗೂ ಬಸವಣ್ಣನವರ ಕುರಿತು ಹಗುರವಾಗಿ ಮಾತನಾಡುವವರ ವಿರುದ್ಧ ರಾಜಕೀಯ ನಾಯಕರು ಧ್ವನಿ ಎತ್ತಬೇಕು. ಧರ್ಮದ ವಿಚಾರ ಬಂದಾಗ ರಾಜಕೀಯ ಲೆಕ್ಕಾಚಾರ ಬದಿಗಿಟ್ಟು ಧರ್ಮದ ಪರಂಪರೆ ಮತ್ತು ಸಂಸ್ಕೃತಿಯ ರಕ್ಷಣೆಗೆ ಎಲ್ಲರೂ ಒಗ್ಗಟ್ಟಿನಿಂದ ನಿಲ್ಲಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಸನಾತನ ಧರ್ಮ, ಪಂಚಪೀಠಗಳು ಹಾಗೂ ಬಸವಣ್ಣನವರ ಕುರಿತು ಹಗುರವಾಗಿ ಮಾತನಾಡುವವರ ವಿರುದ್ಧ ರಾಜಕೀಯ ನಾಯಕರು ಧ್ವನಿ ಎತ್ತಬೇಕು. ಧರ್ಮದ ವಿಚಾರ ಬಂದಾಗ ರಾಜಕೀಯ ಲೆಕ್ಕಾಚಾರ ಬದಿಗಿಟ್ಟು ಧರ್ಮದ ಪರಂಪರೆ ಮತ್ತು ಸಂಸ್ಕೃತಿಯ ರಕ್ಷಣೆಗೆ ಎಲ್ಲರೂ ಒಗ್ಗಟ್ಟಿನಿಂದ ನಿಲ್ಲಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಸೋಮವಾರ ನಗರದ ಕಡಪಟ್ಟಿ ದೇವಸ್ಥಾನ ಆವರಣದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಮಾತನಾಡಿದರು, ಸನಾತನ ಧರ್ಮದ ಕುರಿತು ಟೀಕೆ ಮಾಡುವವರು ಮೊದಲು ಧರ್ಮದ ಇತಿಹಾಸ ಮತ್ತು ಅದರ ಮಹತ್ವವನ್ನು ಅರಿತುಕೊಳ್ಳಬೇಕು. ಧಾರ್ಮಿಕ ವಿಚಾರಗಳಲ್ಲಿ ತಪ್ಪು ಅಭಿಪ್ರಾಯ ವ್ಯಕ್ತಪಡಿಸಿದಾಗ ಅವುಗಳಿಗೆ ಸೂಕ್ತ ಉತ್ತರ ನೀಡುವ ಜವಾಬ್ದಾರಿ ಸಮಾಜದ ಮುಖಂಡರು ಮತ್ತು ರಾಜಕೀಯ ನಾಯಕರ ಮೇಲಿದೆ ಎಂದರು.

ಧರ್ಮದ ವಿಚಾರದಲ್ಲಿ ರಾಜಕೀಯ ಮೌನ ಸಲ್ಲದು:

ಕೆಲವರು ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಧರ್ಮದ ವಿಚಾರಗಳ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಆದರೆ ಧರ್ಮದ ಮೇಲೆ ಆಕ್ಷೇಪಗಳು ಬಂದಾಗ ಮೌನವಾಗಿರುವುದು ಸರಿಯಲ್ಲ. ರಾಜಕೀಯದಲ್ಲಿ ಗೆಲುವು-ಸೋಲು ಸಹಜ. ಆದರೆ ಅಧಿಕಾರಕ್ಕಾಗಿ ಧಾರ್ಮಿಕ ಮೌಲ್ಯಗಳನ್ನು ಕಡೆಗಣಿಸಬಾರದು. ಜನರ ವಿಶ್ವಾಸಗಳಿಸುವುದು ಕೇವಲ ಭಾಷಣಗಳಿಂದ ಸಾಧ್ಯವಿಲ್ಲ. ಧರ್ಮ, ಸಮಾಜ ಮತ್ತು ಜನರ ಹಿತಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಮಾತ್ರ ಜನರ ಹೃದಯದಲ್ಲಿ ಸ್ಥಾನ ಪಡೆಯಲು ಸಾಧ್ಯ ಎಂದರು.

ಶ್ರೀಗಳು ಸಮಾಜಕ್ಕೆ ಮಾರ್ಗದರ್ಶನ ನೀಡಿದರೆ, ರಾಜಕೀಯ ನಾಯಕರು ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಗೆ ಬೆಂಬಲವಾಗಿ ನಿಲ್ಲಬೇಕು ಎಂದು ಹೇಳಿದರು.

ಧರ್ಮ ಮತ್ತು ರಾಷ್ಟ್ರದ ವಿಚಾರದಲ್ಲಿ ಒಗ್ಗಟ್ಟು ಅಗತ್ಯ:ಭಾರತ ಸಂತರು, ಶರಣರು ಹಾಗೂ ಆಧ್ಯಾತ್ಮಿಕ ಚಿಂತಕರ ನಾಡಾಗಿದೆ. ಆದಿಶಂಕರಾಚಾರ್ಯರು ದೇಶದ ಏಕತೆಗಾಗಿ ಮಹತ್ವದ ಕೊಡುಗೆ ನೀಡಿದ್ದಾರೆ. ಧರ್ಮ ಮತ್ತು ರಾಷ್ಟ್ರದ ಹಿತಕ್ಕೆ ಧಕ್ಕೆ ಉಂಟುಮಾಡುವ ಚಟುವಟಿಕೆಗಳ ವಿರುದ್ಧ ಸಮಾಜ ಜಾಗೃತವಾಗಿರಬೇಕು. ಧಾರ್ಮಿಕ ಪರಂಪರೆ ಮತ್ತು ರಾಷ್ಟ್ರೀಯ ಏಕತೆಯನ್ನು ಕಾಪಾಡುವಲ್ಲಿ ರಾಜಕೀಯ ನಾಯಕರು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ಯತ್ನಾಳ ಕರೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದುರಾಲೋಚನೆಯ ಸಂಹಾರವೇ ನವರಾತ್ರಿ ಸಂದೇಶ: ಜಗದೀಶ ಶೆಟ್ಟರ
ಇಡೀ ಸಮಾಜದ ಪ್ರಗತಿ, ಸೃಜನಶೀಲತೆಯ ಶಕ್ತಿ: ಉಮಾಶ್ರೀ