ಬಿಹಾರ ಜನರಿಂದ ಕಾಂಗ್ರೆಸ್‌ಗೆ ತಕ್ಕ ಉತ್ತರ: ಜಿ.ಐ. ಹೆಗಡೆ

KannadaprabhaNewsNetwork |  
Published : Nov 15, 2025, 02:15 AM IST
ಫೋಟೋ : ೧೪ಕೆಎಂಟಿ_ಎನ್‌ಒವಿ_ಕೆಪಿ೨ : ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಗೆಲುವಿನ ಕಾರಣದಿಂದ ಗಿಬ್ ವೃತ್ತದಲ್ಲಿ ಬಿಜೆಪಿಗರು ವಿಜಯೋತ್ಸವ ಆಚರಿಸಿದರು. ಶಾಸಕ ದಿನಕರ ಶೆಟ್ಟಿ, ಜಿ.ಐ.ಹೆಗಡೆ, ಜಯಾ ಶೇಟ, ಎಂ.ಎಂ.ಹೆಗಡೆ, ಪ್ರಶಾಂತ ನಾಯ್ಕ, ಸಂತೋಷ ನಾಯ್ಕ, ಚೇತೇಶ ಶಾನಭಾಗ, ಹೇಮಂತಕುಮಾರ ಇತರರು ಇದ್ದರು. | Kannada Prabha

ಸಾರಾಂಶ

ಬಿಹಾರ ರಾಜ್ಯದ ಚುನಾವಣೆಯಲ್ಲಿ ಎನ್‌ಡಿಎ ಗೆಲುವಿನ ಕಾರಣದಿಂದ ಶುಕ್ರವಾರ ಗಿಬ್ ವೃತ್ತದಲ್ಲಿ ಬಿಜೆಪಿಗರು ವಿಜಯೋತ್ಸವ ಆಚರಿಸಿದರು. ಜಯಘೋಷದೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಕುಮಟಾ: ಬಿಹಾರ ರಾಜ್ಯದ ಚುನಾವಣೆಯಲ್ಲಿ ಎನ್‌ಡಿಎ ಗೆಲುವಿನ ಕಾರಣದಿಂದ ಶುಕ್ರವಾರ ಗಿಬ್ ವೃತ್ತದಲ್ಲಿ ಬಿಜೆಪಿಗರು ವಿಜಯೋತ್ಸವ ಆಚರಿಸಿದರು. ಜಯಘೋಷದೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಂಡಲಾಧ್ಯಕ್ಷ ಜಿ.ಐ. ಹೆಗಡೆ, ಬಿಜೆಪಿಗರು ವೋಟ್ ಚೋರಿ ಮಾಡಿ ಗೆದ್ದರೆಂದು ಕಾಂಗ್ರೆಸ್ ದೇಶಾದ್ಯಂತ ಸುಳ್ಳು ಆರೋಪ ಮಾಡುತ್ತಿದೆ. ಆದರೆ ಬಿಹಾರದ ಜನತೆ ಎನ್‌ಡಿಎಗೆ ಬಹುಮತ ನೀಡಿ ಕಾಂಗ್ರೆಸಿಗರಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಎನ್‌ಡಿಎ ಒಕ್ಕೂಟಕ್ಕೆ ಅಭೂತಪೂರ್ವ ವಿಜಯವನ್ನು ಬಿಹಾರದ ಜನತೆ ನೀಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಉತ್ತಮ ಆಡಳಿತ ನೀಡಿದ ಜತೆಗೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇನ್ನಿತರರು ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಪಾಲ್ಗೊಂಡು, ಸರಿಯಾದ ತಿಳಿವಳಿಕೆ ನೀಡಿದ್ದರಿಂದ ವಿಜಯ ಸಾಧ್ಯವಾಗಿದೆ. ಈಗ ಗೆದ್ದವರ ಜವಾಬ್ದಾರಿಯೂ ಹೆಚ್ಚಿದೆ. ಎನ್‌ಡಿಎ ಮೈತ್ರಿಕೂಟ ಬಿಹಾರಕ್ಕೆ ಅಂಟಿದ ಕಳಂಕವನ್ನು ದೂರ ಮಾಡಿ, ಉತ್ತಮ ಕೆಲಸ ಮಾಡಿ ತೋರಿಸುತ್ತಾ ಬಂದಿದೆ. ಆಮಿಷಗಳಿಗೆ ಒಳಗಾಗದೇ ಎನ್‌ಡಿಎಗೆ ಒಲವು ತೋರಿದ್ದಾರೆ ಎಂದು ಹೇಳಿದರು.

ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಾ ಶೇಟ, ಎಂ.ಎಂ. ಹೆಗಡೆ, ಪ್ರಶಾಂತ ನಾಯ್ಕ, ಸಂತೋಷ ನಾಯ್ಕ, ಚೇತೇಶ ಶಾನಭಾಗ, ಹೇಮಂತಕುಮಾರ, ಸೂರ್ಯಕಾಂತ ಗೌಡ, ಮಂಜು ಪಟಗಾರ, ಹರಿಹರ ನಾಯ್ಕ ಇತರರು ಇದ್ದರು.

ಭಟ್ಕಳದಲ್ಲಿ ಬಿಜೆಪಿಯಿಂದ ವಿಜಯೋತ್ಸವ:

ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಡ ಅಭೂತಪೂರ್ವ ಜಯಗಳಿಸಿದ ಹಿನ್ನೆಲೆಯಲ್ಲಿ ಭಟ್ಕಳ ಪಟ್ಟಣ ವೃತ್ತದಲ್ಲಿ ಬಿಜೆಪಿ ಮಂಡಲದ ವತಿಯಿಂದ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಡಿಗ, ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ಭರ್ಜರಿ ಜಯ ಗಳಿಸಿ ವಿರೋಧ ಪಕ್ಷ ಮಣಿಸಿದೆ. ಬಿಜೆಪಿ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಕಾಂಗ್ರೆಸಿಗೆ ಮುಖಭಂಗವಾಗಿದೆ. ರಾಜ್ಯದಲ್ಲೂ ಮುಂದಿನ ದಿನಗಳಲ್ಲಿ ಇದೇ ರೀತಿಯ ಅಭೂತಪೂರ್ವ ಜಯ ಗಳಿಸಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಮಾತನಾಡಿ, ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ಪ್ರಚಂಡ ಜಯ ಗಳಿಸಿ ಬಹುಮತ ಪಡೆದು ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಹೇಳುತ್ತಿದ್ದ ಮಹಾಘಠಬಂಧನ ಮುಖಭಂಗ ಅನುಭವಿಸಿದೆ ಎಂದರು.

ಪ್ರಮುಖರಾದ ದಿನೇಶ ನಾಯ್ಕ, ರಾಜೇಶ ನಾಯ್ಕ, ಭಾಸ್ಕರ ದೈಮನೆ, ರವಿ ನಾಯ್ಕ, ವೆಂಕಟೇಶ ನಾಯ್ಕ, ಶ್ರೀನಿವಾಸ ನಾಯ್ಕ ಇದ್ದರು.

PREV

Recommended Stories

ಎರಡನೇ ಬೆಳೆಗಿಲ್ಲ ತುಂಗಭದ್ರಾ ನೀರು
ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿ ವಹಿಸಿ