ವಿಘ್ನನಿವಾರಕನಿಗೂ ಫ್ಲೈಓವರ್‌ ವಿಘ್ನ!

KannadaprabhaNewsNetwork |  
Published : Sep 27, 2026, 02:00 AM IST
ಮೇಲ್ಸೇತುವೆಗೆ ತಾಗಿಗೊಂಡಿದ್ದ ಹುಬ್ಬಳ್ಳಿ ಚಾ ಮಹಾರಾಜ ಗಣೇಶ ಮೂರ್ತಿಯನ್ನು ಬೃಹತ್‌ ಕ್ರೇನ್‌ ಮೂಲಕ ಸರಿಸಲಾಯಿತು. | Kannada Prabha

ಸಾರಾಂಶ

ಮರಾಠಾ ಗಲ್ಲಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ 25 ಅಡಿ ಎತ್ತರದ ಹುಬ್ಬಳ್ಳಿ ಚಾ ಮಹಾರಾಜಾ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಮೇಲ್ಸೇತುವೆ (ಫ್ಲೈ ಓವರ್‌)ಗೆ ತಾಗಿ ಕೆಲಕಾಲ ಸಿಲುಕಿಕೊಂಡ ಘಟನೆ ನಡೆಯಿತು.

ಹುಬ್ಬಳ್ಳಿ:

ನಗರದ ಮರಾಠಾ ಗಲ್ಲಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ 25 ಅಡಿ ಎತ್ತರದ ಹುಬ್ಬಳ್ಳಿ ಚಾ ಮಹಾರಾಜಾ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಮೇಲ್ಸೇತುವೆ (ಫ್ಲೈ ಓವರ್‌)ಗೆ ತಾಗಿ ಕೆಲಕಾಲ ಸಿಲುಕಿಕೊಂಡ ಘಟನೆ ಶನಿವಾರ ಬೆಳಗ್ಗೆ ನಗರದ ಹೊಸೂರು ಕೆನರಾ ಹೋಟೆಲ್‌ ಮುಂಭಾಗದಲ್ಲಿ ನಡೆಯಿತು.

ಶುಕ್ರವಾರ ಮಧ್ಯಾಹ್ನ ಆರಂಭಗೊಂಡಿದ್ದ ವಿಸರ್ಜನಾ ಮೆರವಣಿಗೆ ಭಕ್ತರು ಹಾಗೂ ಸಾರ್ವಜನಿಕರ ಹೆಚ್ಚಿನ ಪಾಲ್ಗೊಳ್ಳುವಿಕೆಯಿಂದ ನಿಧಾನವಾಗಿ ಸಾಗುತ್ತಿತ್ತು. ಶನಿವಾರ ಬೆಳಗ್ಗೆ ಸುಮಾರು 9 ಗಂಟೆಗೆ ಹೊಸೂರು ಕೆನರಾ ಹೋಟೆಲ್‌ ಮುಂಭಾಗದ ಮೇಲ್ಸೇತುವೆ ಕೆಳಗೆ ಮೂರ್ತಿಯನ್ನು ಸಾಗಿಸುವಾಗ ಅದರ ಎತ್ತರದಿಂದಾಗಿ ಹಿಂಭಾಗದ ಪ್ರಭಾವಳಿ ಮೇಲ್ಸೇತುವೆಗೆ ತಾಗಿಕೊಂಡಿತು. ಇದರಿಂದ ಮೂರ್ತಿ ಮುಂದಕ್ಕೆ ಸಾಗಲಾಗದೆ ಕೆಲಕಾಲ ಅಲ್ಲೇ ನಿಂತಿತು.

ಮೂರ್ತಿಗೆ ಹಾನಿಯಾಗದಂತೆ ಸುರಕ್ಷಿತವಾಗಿ ಸಾಗಿಸಲು ಆಯೋಜಕರು ಹರಸಾಹಸ ಪಟ್ಟರು. ಬಳಿಕ ಬೃಹತ್ ಕ್ರೇನ್‌ ತರಿಸಿ ಮೂರ್ತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಮೇಲ್ಸೇತುವೆಗೆ ತಾಗಿಕೊಂಡಿದ್ದ ಪ್ರಭಾವಳಿಯ ಕೆಲಭಾಗವನ್ನು ಕತ್ತರಿಸಲಾಯಿತು. ನಂತರ ಮೆರವಣಿಗೆ ಮುಂದುವರಿಯಿತು.

ಮೂರ್ತಿ ಮೇಲ್ಸೇತುವೆಗೆ ಸಿಲುಕಿಕೊಂಡಿದ್ದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೆ, ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು. ಮೆರವಣಿಗೆ ವಿಳಂಬವಾದ ಪರಿಣಾಮ ವಿಸರ್ಜನೆಯೂ ತಡವಾಯಿತು.

ಶುಕ್ರವಾರ ಆರಂಭಗೊಂಡಿದ್ದ ಮೆರವಣಿಗೆ ಶನಿವಾರ ಬೆಳಗ್ಗೆಯ ವರೆಗೂ ಮುಂದುವರಿದಿದ್ದು, ಮಾರ್ಗದುದ್ದಕ್ಕೂ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಅಂತಿಮವಾಗಿ ಬೆಳಗ್ಗೆ 11.45ರ ವೇಳೆಗೆ ಹೊಸೂರು ಬಾವಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೀಟ, ರೋಗ, ಕಳೆ ನಿಯಂತ್ರಣಕ್ಕೆ ಆರ್ಕಿವೋ ಅಸ್ತ್ರ!
ಕಲೆ, ಸಂಸ್ಕೃತಿ, ಪರಂಪರೆಗೆ ಹವ್ಯಕರ ಕೊಡುಗೆ ಅಪಾರ