ನಿವೃತ್ತ ಅಡುಗೆ ತಯಾರಕರಿಗೆ ಆತ್ಮೀಯ ಬೀಳ್ಕೊಡುಗೆ

KannadaprabhaNewsNetwork |  
Published : Jan 19, 2026, 12:30 AM IST
17ಕೆಎಂಎನ್‌ಡಿ-7ಶ್ರೀರಂಗಪಟ್ಟಣದ ಜೂನಿಯರ್ ಕಾಲೇಜು ಸಭಾಂಗಣದಲ್ಲಿ ನಡೆದ ಅಡುಗೆ ತಯಾರಕರು ಹಾಗೂ ಸಹಾಯಕರಿಗೆ ತರಬೇತಿ ಕಾರ್ಯಗಾರದಲ್ಲಿ ನಿವೃತ್ತ ಅಡುಗೆ ತಯಾರಕರನ್ನು ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಗೌರವಿಸಿದರು.  | Kannada Prabha

ಸಾರಾಂಶ

ಶ್ರೀರಂಗಪಟ್ಟಣ ತಾಲೂಕಿನಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಸುಮಾರು 253 ಮಂದಿ ಅಡುಗೆ ತಯಾರಕರು ಹಾಗೂ ಸಹಾಯಕರಿದ್ದು, ರಾಜ್ಯ ಸರ್ಕಾರ ಅವರಿಗೆ ನಿವೃತ್ತಿಯಾಗುವ ವೇಳೆ ತಲಾ 40 ಸಾವಿರ ರು. ಹಣ ನೀಡಲು ತೀರ್ಮಾನಿಸಿತ್ತು.

ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ

ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಸಿ ಉಣ ಬಡಿಸಿದ ನೀವುಗಳು ನಿವೃತ್ತಿಯಿಂದ ಬಂದ ಸ್ವಲ್ಪ ಹಣವನ್ನು ತಮ್ಮ ಜೀವನದ ಕಾಲದಲ್ಲಿ ಸದುಪಯೋಗಪಡಿಸಿಕೊಳ್ಳಿ ಎಂದು ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಸಲಹೆ ನೀಡಿದರು.

ಪಟ್ಟಣದ ಜೂನಿಯರ್ ಕಾಲೇಜು ಸಭಾಂಗಣದಲ್ಲಿ ಪಿಎಂ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಡಿ ಆಯೋಜಿಸಿದ್ದ ಅಡುಗೆ ತಯಾರಕರು ಹಾಗೂ ಸಹಾಯಕರಿಗೆ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ತಾಲೂಕಿನಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಸುಮಾರು 253 ಮಂದಿ ಅಡುಗೆ ತಯಾರಕರು ಹಾಗೂ ಸಹಾಯಕರಿದ್ದು, ರಾಜ್ಯ ಸರ್ಕಾರ ಅವರಿಗೆ ನಿವೃತ್ತಿಯಾಗುವ ವೇಳೆ ತಲಾ 40 ಸಾವಿರ ರು. ಹಣ ನೀಡಲು ತೀರ್ಮಾನಿಸಿತ್ತು. ಅದರಂತೆ ಈ ಬಾರಿ 2025 ನೇ ಸಾಲಿನಲ್ಲಿ ತಾಲೂಕಿನ ಸುಮಾರು 13 ಮಂದಿ ಅಡುಗೆ ತಯಾರಕರು ನಿವೃತ್ತಿಯಾಗಿದ್ದು ಅವರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ. ತಮ್ಮ ನಿವೃತ್ತಿ ವಯಸ್ಸಿನಲ್ಲಿ ಬಂದ ಈ ಹಣವನ್ನು ಜೀವನಕ್ಕೆ ನೆರವಾಗುವಂತೆ ಉಪಯೋಗಿಸಿಕೊಳ್ಳುವಂತೆ ತಿಳಿಸಿದರು.

ಅಡುಗೆ ತರಬೇತಿ ಕಾರ್ಯುಗಾರದಲ್ಲಿ ಭಾಗವಹಿಸಿ ತಯಾರಿಕಾ ಸಿದ್ಧತೆಗಳ ಮಾಹಿತಿ ಪಡೆದುಕೊಳ್ಳಲು ಈ ಕಾರ್ಯಕ್ರಮವನ್ನು ಅಡುಗೆ ತಯಾರಕ ಸಿಬ್ಬಂದಿಗೆ ಆಯೋಜನೆ ಮಾಡಿದ್ದು, ಈ ಕಾರ್ಯಾಗಾರದ ಪ್ರಯೋಜನ ಪಡೆದು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಹೇಳಿದರು.

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ನಂದೀಶ್, ಕ್ಷೇತ್ರ ಸಮನ್ವಯಧಿಕಾರಿ ಪ್ರಭಾ ನಂಜಪ್ಪ, ಜಿಲ್ಲಾ ಪಂಚಾಯ್ತಿ ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ರವಿಕುಮಾರ್‌ ಸೇರಿದಂತೆ ಇತರ ಸಿಬ್ಬಂದಿ ಉಪಸ್ಥಿತರಿದ್ದರು.ಲೋಕಾಯುಕ್ತರಿಗೆ ಸಾರ್ವಜನಿಕರಿಂದ 26 ದೂರುಗಳು ದಾಖಲು

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಸರ್ಕಾರಿ ಅಧಿಕಾರಿಗಳಿಂದ ಕೆಲಸ ವಿಳಂಭ, ಜಾಗ ಒತ್ತುವರಿ, ಗುತ್ತಿಗೆದಾರರಿಂದ ಕಾಮಗಾರಿ ವಿಳಂಬ ಸೇರಿದಂತೆ ಒಟ್ಟು 26 ದೂರುಗಳನ್ನು ವಿವಿಧ ಗ್ರಾಮಗಳಿಂದ ಬಂದ ಸಾರ್ವಜನಿಕರು ಲೋಕಾಯುಕ್ತರಿಗೆ ದೂರು ನೀಡಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಡ್ಯ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ನೇತೃತ್ವದಲ್ಲಿ ನಡೆದ ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರಿಂದ ಅಧಿಕಾರಿಗಳು ಅರ್ಜಿಗಳ ವಿಳಂಬ ಮಾಡಿ, ವಿಲೇ ಮಾಡುತ್ತಿರುವ ಬಗ್ಗೆ ಹೆಚ್ಚಾಗಿ ದೂರುಗಳು ಕೇಳಿ ಬಂದವು.

ಶಾಲಾ ಜಾಗ ರಸ್ತೆಗೆ ಒತ್ತುವರಿ ಬಗ್ಗೆ ಪಾಲಹಳ್ಳಿ ಗ್ರಾಪಂ ಅಧಿಕಾರಿಗಳ ವಿರುದ್ದ ದೂರು, ಇದರ ಜೊತೆ ರಾಂಪುರ ಗ್ರಾಮ ಠಾಣಾ ಜಾಗದಲ್ಲಿ ಸ್ಥಳಿಯ ಬಡವರಿಗೆ ನಿವೇಶನ ನೀಡವ ಕುರಿತಾಗಿ ತಹಸೀಲ್ದಾರ್ ಕಚೇರಿಯಲ್ಲಿ ವಿಲೆಯಾಗಿರುವ ಬಗ್ಗೆ ಗ್ರಾಪಂ ಮಾಜಿ ಅಧ್ಯಕ್ಷ ಮುರುಳಿ ದೂರು ನೀಡಿದರು.

ಪಶ್ಚಿಮವಾಹಿನಿಯಿಂದ ಪಾಲಹಳ್ಳಿ ಗ್ರಾಪಂ ವ್ಯಾಪ್ತಿಗೆ ನೀರು ಸರಬರಾಜು ಮಾಡುವ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಗುತ್ತಿಗೆದಾರ ಕಾಮಗಾರಿ ವಿಳಂಬ, ಕ್ರಮಕ್ಕೆ ಆಗ್ರಹಿಸಿ ಪೀಕಾರ್ಡ್ ಬ್ಯಾಂಕ್ ನಿರ್ದೇಶಕ ದೇವರಾಜು ದೂರು ನೀಡಿ ಒತ್ತಾಯಿಸಿದರು.

ಜನರು ಸಮಸ್ಯೆಗಳ ಕುರಿತುನೀಡಿದ ದೂರನ್ನು ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸಿ ಕ್ರಮಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ತಹಸೀಲ್ದಾರ್ ಚೇತನಾ ಯಾದವ್, ತಾ.ಪಂ ಇಒ ವೇಣು, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ಸೇರಿದಂತೆ ಇತರ ಇಲಾಖೆ ಅಧಿಕಾರಿ ವರ್ಗ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜಮುಖಿ ಸೇವೆ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಿ: ಮೋಹನ್ ದಾಸ್
ಬಿಜಿಎಸ್ ಶಾಲೆಯಲ್ಲಿ ಶ್ರೀಬಾಲಗಂಗಾಧರನಾಥ ಸ್ವಾಮೀಜಿಗಳ ರಥೋತ್ಸವ