ಮಕ್ಕಳ ಸೃಜನಶೀಲತೆ ಬೆಳಕಿಗೆ ತರುವ ಪ್ರತಿಭಾ ಕಾರಂಜಿ: ಶಾಸಕ ಶಿವಲಿಂಗೇಗೌಡ

KannadaprabhaNewsNetwork |  
Published : Nov 26, 2025, 02:00 AM IST
ಪ್ರತಿಭಾ ಕಾರಂಜಿ ಕಲೋತ್ಸವ ಉದ್ಘಾಟನೆ ಬಾಲ ಪ್ರತಿಭೆಗಳು ನಾಡಿನ ಭವಿಷ್ಯ: ಶಾಸಕ ಶಿವಲಿಂಗೇಗೌಡ | Kannada Prabha

ಸಾರಾಂಶ

ಮಕ್ಕಳ ಪ್ರತಿಭೆ ಒಂದು ಜ್ಯೋತಿಯಂತಿದೆ, ಅದನ್ನು ಬೆಳೆಸಿದರೆ ಬೆಳಕನ್ನು ಹರಡುತ್ತದೆ. ಈ ಕಲೋತ್ಸವ ಕೇವಲ ಸ್ಪರ್ಧೆಯಾಗಿರದೆ, ಪರಸ್ಪರ ಕಲಿಕೆಯ, ಸ್ನೇಹದ, ಸಂಸ್ಕೃತಿಯ ಮತ್ತು ಶಿಸ್ತುಗುಣಗಳ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಪ್ರತಿಭಾ ಕಾರಂಜಿ ಎನ್ನುವುದು ಮಕ್ಕಳ ಸೃಜನಶೀಲತೆಯನ್ನು ಬೆಳಕಿಗೆ ತರುವುದು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.

ಶ್ರೀ ಆದಿಚುಂಚನಗಿರಿ ಆಂಗ್ಲ ಪ್ರೌಢಶಾಲೆಯ ಆವರಣದಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉದ್ಘಾಟನೆ ನಡೆಸಿ ಮಾತನಾಡಿದರು. ಪಠ್ಯ ಅಧ್ಯಯನದ ಹೊರತಾಗಿ ಕಲೆ, ಕ್ರೀಡೆ, ನಾಡ ಸಂಸ್ಕೃತಿ ಇವು ಮಕ್ಕಳ ಸಂಪೂರ್ಣ ವ್ಯಕ್ತಿತ್ವ ವಿಕಾಸಕ್ಕೆ ಅತ್ಯಂತ ಅಗತ್ಯ. ಇಂತಹ ವೇದಿಕೆಗಳು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಮತ್ತು ಭವಿಷ್ಯದ ನಾಯಕತ್ವಕ್ಕೆ ದಾರಿತೋರುತ್ತವೆ ಎಂದರು. ನಮ್ಮ ಮಕ್ಕಳಲ್ಲಿ ಇರುವ ನೈಜ ಪ್ರತಿಭೆಯನ್ನು ಗುರುತಿಸಿ ಉತ್ತೇಜಿಸಲು ಶಿಕ್ಷಕರು ಮತ್ತು ಪೋಷಕರು ನಿರಂತರ ಸಹಕಾರ ನೀಡಬೇಕು. ಸರ್ಕಾರವೂ ವಿದ್ಯಾರ್ಥಿಗಳ ಸೃಜನಶೀಲತೆ ಬೆಳೆಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ನಮ್ಮ ಊರಿನ ವಿದ್ಯಾರ್ಥಿಗಳು ರಾಜ್ಯ ಮಟ್ಟ, ರಾಷ್ಟ್ರ ಮಟ್ಟ, ಅಂತಾರಾಷ್ಟ್ರೀಯ ಮಟ್ಟಕ್ಕೂ ತಲುಪುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು.

ಮಕ್ಕಳ ಪ್ರತಿಭೆ ಒಂದು ಜ್ಯೋತಿಯಂತಿದೆ, ಅದನ್ನು ಬೆಳೆಸಿದರೆ ಬೆಳಕನ್ನು ಹರಡುತ್ತದೆ. ಈ ಕಲೋತ್ಸವ ಕೇವಲ ಸ್ಪರ್ಧೆಯಾಗಿರದೆ, ಪರಸ್ಪರ ಕಲಿಕೆಯ, ಸ್ನೇಹದ, ಸಂಸ್ಕೃತಿಯ ಮತ್ತು ಶಿಸ್ತುಗುಣಗಳ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಣ ಇಲಾಖೆ ಬಿಇಒ ಮೋಹನ್‌ ಕುಮಾರ್, ಪ್ರತಿಭಾ ಕಾರಂಜಿ ಮಕ್ಕಳ ಪ್ರತಿಭೆಯನ್ನು ಗುರುತಿಸುವ ಅತ್ಯಂತ ಪ್ರಮುಖ ವೇದಿಕೆ. ಪಾಠ ಪುಸ್ತಕಗಳ ಜ್ಞಾನ ಮಾತ್ರ ಸಾಕಾಗುವುದಿಲ್ಲ, ಕಲೆ, ಸಂಸ್ಕೃತಿ, ನೃತ್ಯ, ಸಂಗೀತ, ರಂಗಭೂಮಿ ಇವುಗಳೂ ಮಕ್ಕಳ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ ಸಮಾನವಾಗಿ ಅಗತ್ಯ. ಈ ವೇದಿಕೆಯ ಮೂಲಕ ವಿದ್ಯಾರ್ಥಿಗಳು ತಮ್ಮಲ್ಲಿರುವ ಆತ್ಮವಿಶ್ವಾಸ, ವೈಯಕ್ತಿಕ ಒಡ್ಡುಪಣೆ ಹಾಗೂ ತಂಡದ ಮನೋಭಾವವನ್ನು ಬೆಳೆಸಿಕೊಳ್ಳುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಪ್ರಾಂಶುಪಾಲರಾದ ಲಿಂಗರಾಜು, ಕ್ಷೇತ್ರ ಸಮನ್ವಯಾಧಿಕಾರಿ ಶಂಕರ್‌, ವಿವಿಧ ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಿಕ್ಷಣ ಸುಧಾರಣ ಸಮಿತಿ ಸದಸ್ಯರಾದ ಮಾಡಾಳು ಸ್ವಾಮಿ, ದೇವರಾಜ್‌ ಇನ್ನು ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

ವಾಟರ್‌ ಬಾಟಲ್‌ ತಯಾರಿಸಲು ಬೆಂಗಳೂರು ಜಲಮಂಡಳಿ ಸಿದ್ಧತೆ: ಶೀಘ್ರ ಮಾರುಕಟ್ಟೆಗೆ ಲಭ್ಯ
ತಾಯಿಯಿಂದಲೇ 3 ದಿನದ ಶಿಶು ಉಸಿರುಗಟ್ಟಿಸಿ ಕೊಲೆ