ಕನ್ನಡಪ್ರಭ ವಾರ್ತೆ ಆಳಂದ
ತಾಲೂಕಿನ ನಿಂಬರಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಕಳ್ಳತನ ಪ್ರಕರಣಗಳನ್ನು ಪೊಲೀಸರು ಕಾರ್ಯಾಚರಣೆ ಮೂಲಕ ಮಟ್ಟಹಾಕಿದ್ದಾರೆ. ಅಲ್ಲದೆ, ರೈತರ ಹೊಲಗಳಲ್ಲಿ ನಡೆದ ಕೃಷಿ ಸಾಮಗ್ರಿ ಬೈಕ್ ಸೇರಿ ಮಾಲು ಸಮೇತ ಕಳ್ಳರನ್ನು ಪತ್ತೆ ಹಚ್ಚಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.ಮೂರು ವರ್ಷಗಳಿಂದ ನಿಂಬರಗಾ ಠಾಣೆ ವ್ಯಾಪ್ತಿಯ ರೈತರ ಹೊಲದಲ್ಲಿನ ಪಂಪ್‍ಸೆಟ್, ಟ್ರ್ಯಾಕ್ಟರ್, ಬೈಕ್‌ಗಳು ಕಳವು ಮಾಡಿ ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿರುವ ಭೂಸನೂರ ಗ್ರಾಮದ ಕಳ್ಳರ ಗ್ಯಾಂಗನ್ನು ನಿಂಬರ್ಗಾ ಪೊಲೀಸರು ಪತ್ತೆ ಹಚ್ಚಿ ಆರೋಪಿಗಳನ್ನು ಮಾಲು ಸಮೇತ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಭೂಸನೂರ ಗ್ರಾಮದ ಪೃಥ್ವಿ ಅಲಿಯಾಸ್ ಪೃಥ್ವಿರಾಜ ಕೃಷ್ಣಪ್ಪ ಬೀಳಗಿ, ಮೈಬೂಬ ನಬೀಸಾಬ ಭಾಗವಾನ, ರಾಹುಲ ಅಶೋಕ ಕ್ಷೇತ್ರಿ , ಮುನ್ನಾ ಅಲಿಯಾಜ ಮೊಹ್ಮದ ರಫೀ ಜೈನೋದ್ದಿನ ಭಾಗವಾನ, ಕರೀಂ ಇಬ್ರಾಂಹಿಸಾಬ ಭಾಗವಾನ, ಅನೀಲ ನನೂಸಾಬ ಭಾಗವಾನ ನಿಂಬರ್ಗಾ ಠಾಣೆಯ ಸರಹದ್ದಿನಲ್ಲಿ ಕಳ್ಳತನವಾದ ಬೈಕ 30 ಸಾವಿರ ರು., ಕೆಂಪು ಬಣ್ಣದ ಅರ್ಜುನ ಟ್ರ್ಯಾಕ್ಟರ್ 4.25 ಲಕ್ಷ ರು., ನೀಲಿ ಬಣ್ಣದ ಸ್ವರಾಜ 744 ಟ್ರ್ಯಾಕ್ಟರ್ 4.65 ಲಕ್ಷ ರು., ವಾರಸುದಾರರ ಇಲ್ಲದ 09 ಮೋಟಾರ ಸೈಕಲಗಳು 3.80 ಲಕ್ಷ ರು. ಹಾಗೂ ಟ್ರ್ಯಾಕ್ಟರ್ ಟ್ರಾಲಿಗಳೂ 1 ಲಕ್ಷ ರು., ಒಟ್ಟು 09 ಮೋಟಾರು ಸೈಕಲಗಳು, ಎರಡು ಟ್ರ್ಯಾಕ್ಟರ್, ಮೂರು ಟ್ರಾಲಿಗಳೂ ಒಟ್ಟು ಅಂದಾಜು 14 ಲಕ್ಷ ರು. ಮೌಲ್ಯದ ಉಪಕರಣಗಳು ಹಾಗೂ ವಾಹನಗಳನ್ನು ಕಳವು ಈ ಆರೋಪಿಗಳನ್ನು ಕಳವು ಮಾಡಿರುವುದನ್ನು ಒಪ್ಪಿಕೊಂಡಿರುವ ಹಿನ್ನಲೆಯಲ್ಲಿ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಕ್ಕೆ ನಿಂಬರ್ಗಾ ಪೊಲೀಸರ ಕಾರ್ಯಾಚರಣೆ ಬಗ್ಗೆ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.