ಕನ್ನಡ ಪುಸ್ತಕಗಳನ್ನು ಕೊಂಡು ಓದಿ

KannadaprabhaNewsNetwork |  
Published : Jul 17, 2024, 01:00 AM IST
31 | Kannada Prabha

ಸಾರಾಂಶ

ಓದುಗರು ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಮೂಲಕ ಸರಸ್ವತಿಯನ್ನು ಆರಾಧಿಸಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಓದುಗರು ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಮೂಲಕ ಸರಸ್ವತಿಯನ್ನು ಆರಾಧಿಸಬೇಕು ಎಂದು ಹೈಕೋರ್ಟ್‌ ನ್ಯಾಯವಾದಿ ರೇವಣ್ಣ ಬಳ್ಳಾರಿ ತಿಳಿಸಿದರು.

ನಗರದ ನಮನ ಕಲಾ ಮಂಟಪದಲ್ಲಿ ಅಭಿರುಚಿ ಬಳಗವು ಆಯೋಜಿಸಿದ್ದ ಇಂಧನ ಉಳಿತಾಯ, ಜನಸಂಖ್ಯಾ ಸಮಸ್ಯೆಯ ಜಾಗೃತಿ, ಯುವ ಕೌಶಲ್ಯ ಹಾಗೂ ಸಾಮಾಜಿಕ ಮಾಧ್ಯಮಗಳ ಅರಿವು ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಇದೇ ವೇಳೆ ಎನ್.ವಿ. ರಮೇಶ್ ಅವರ ಸಮಗ್ರ ಮಕ್ಕಳ ಸಾಹಿತ್ಯ ಪುಸ್ತಕವನ್ನು ಲೇಖಕ ಭದ್ರಾವತಿ ರಾಮಾಚಾರಿ ಬಿಡುಗಡೆಗೊಳಿಸಿದರು. ಈ ಪುಸ್ತಕದ ಬಗ್ಗೆ ಸುಜಾತ ರವೀಶ್ ಪರಿಚಯಿಸಿದರು.

ಈ ಸಂದರ್ಭದಲ್ಲಿ ನಾನೇನು ಮಾಡ್ಲಿ ಎಂಬ ಎನ್.ವಿ. ರಮೇಶ್ ಅವರು ಬರೆದು ನಿರ್ದೇಶಿಸಿದ ನಾಟಕದಲ್ಲಿ ಆರ್.ಎ. ಕುಮಾರ್, ಪ್ರಭಾ ಶಾಸ್ತ್ರಿ, ಲತಾ ಮೋಹನ್, ಮೋಹನ್, ಮಮತಾ ಸುಧೀಂದ್ರ, ಉಮಾ ರಮೇಶ್ ಅಭಿನಯಿಸಿದರು. ಕೆಂಪರಾಜು, ಸಿ.ಎನ್. ಭಾಗ್ಯಲಕ್ಷ್ಮಿ ನಾರಾಯಣ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ 25 ಪುಸ್ತಕಗಳ ಲೋಕಾರ್ಪಣೆ, ಬೆರಗು ಪ್ರಶಸ್ತಿ ಪ್ರದಾನ
ಯಶಸ್ಸು ನೆತ್ತಿಗೆರಬಾರದು