ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ತಾಲೂಕಿನ ಹೂವಿನಹಿಪ್ಪರಗಿಯ ಆಶೀರ್ವಾದ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮದ ಆಶೀರ್ವಾದ ಪಬ್ಲಿಕ್ ಸ್ಕೂಲ್ ಮತ್ತು ಕನ್ನಡ ಮಾಧ್ಯಮದ ಪರಿವರ್ತನ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿ ಆಶೀರ್ವಾದ ಸಜ್ಜನ್ಸ ಜೀನಿಯಸ್ ಪರೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟ ಶಿಕ್ಷಣ, ಉತ್ತಮ ಸಂಸ್ಕಾರ ಸಿಗಬೇಕೆಂಬ ಉದ್ದೇಶ ಆಶೀರ್ವಾದ ಸಂಸ್ಥೆ ಹೊಂದಿದೆ. ಪ್ರತಿ ವರ್ಷ ನಡೆಯುವ ಶಾಲಾ ವಾರ್ಷಿಕೋತ್ಸವ ಸಮಾರಂಭವು ಬಹುವೈಶಿಷ್ಟ್ಯ ಪೂರ್ಣವಾಗಿ ನಡೆಯುತ್ತದೆ. ಈ ಭಾಗದಲ್ಲಿ ಇದೊಂದು ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಯುತ್ತಿರುವುದು ಸಂತಸದಾಯಕ ಸಂಗತಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಶಶಿಕಾಂತ ರೂಗಿ, ಸಿದ್ದನಗೌಡ ಗೆಣ್ಣೂರ, ಮಾಂತಗೌಡ ಬಿರಾದಾರ, ದಾವಲಸಾಬ ಕರಡಿ, ಕಾಂತು ಬಡಿಗೇರ, ಹಣಮಂತ್ರಾಯ ಸೌದಿ, ರವಿ ಧರ್ಮಗಿರಿ, ಪರಶುರಾಮ ನಾಟೀಕಾರ, ಶಿವಾನಂದ ಬೇಲಾಳ ಇತರರು ಇದ್ದರು. ಜಿ.ಎಸ್.ಚಟ್ಟೇರ ಪ್ರಾರ್ಥಿಸಿದರು. ಎಚ್.ಪಿ.ಹೊಸೂರ ಸ್ವಾಗತಿಸಿದರು. ಬಿ.ಡಿ.ದೊಡಮನಿ ನಿರೂಪಿಸಿದರು. ಆರ್.ಸಿ.ಬಡಿಗೇರ ವಂದಿಸಿದರು.₹3 ಲಕ್ಷ ಬಹುಮಾನ ಮೊತ್ತ
ಆಶೀರ್ವಾದ ಸಜ್ಜನ್ಸ ಜೀನಿಯಸ್ ಪರೀಕ್ಷೆಗೆ ತಾಲೂಕು ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ 201 ವಿದ್ಯಾರ್ಥಿಗಳು ಹಾಜರಾಗಿದ್ದರು.ನಾಲ್ಕನೇ, ಐದನೇ ತರಗತಿ ವಿಭಾಗ, ಆರನೇ, ಏಳನೇ ತರಗತಿ ವಿಭಾಗ, ಎಂಟನೇ ತರಗತಿಯಿಂದ ಹತ್ತನೇ ತರಗತಿ ವಿಭಾಗ ಸೇರಿ ಮೂರು ವಿಭಾಗದಲ್ಲಿ ಈ ಪರೀಕ್ಷೆ ನಡೆಯುತ್ತದೆ. ಪ್ರತಿ ವಿಭಾಗದಲ್ಲಿ ಪ್ರಥಮ ಬಹುಮಾನ ₹50,000 ಇದರಲ್ಲಿ ₹5 ಸಾವಿರ ನಗದು, ₹45 ಸಾವಿರ ಶಿಷ್ಯ ವೇತನ, ದ್ವಿತೀಯ ಬಹುಮಾನ ₹30,000 ಇದರಲ್ಲಿ ₹4 ಸಾವಿರ ನಗದು, ₹26 ಸಾವಿರ ಶಿಷ್ಯ ವೇತನ, ತೃತೀಯ ಬಹುಮಾನ ₹20,000 ಇದರಲ್ಲಿ ₹2 ಸಾವಿರ ನಗದು, ₹18 ಸಾವಿರ ಶಿಷ್ಯ ವೇತನ ಸೇರಿ ಒಟ್ಟು ₹3 ಲಕ್ಷ ಬಹುಮಾನ ಮೊತ್ತ ಪರೀಕ್ಷೆ ಇದಾಗಿತ್ತು. ಬಹು ಆಯ್ಕೆಯ 100 ಅಂಕದ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡ, ಇಂಗ್ಲಿಷ್, ವಿಜ್ಞಾನ, ಗಣಿತ, ಸಮಾಜವಿಜ್ಞಾನ, ಸಾಮಾನ್ಯ ಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಉತ್ತರ ಬರೆದರು. ಬಹುಮಾನ ವಿತರಣೆ:
6ನೇ, 7ನೇ ತರಗತಿ ವಿಭಾಗ: ಯಶಸ್ ಬೇಲಾಳ (ಪ್ರಥಮ), ಅನಿಕೇತ ವಾಲಿ, ಅಮೃತವರ್ಷಿಣಿ ಸಜ್ಜನ (ದ್ವಿತೀಯ), ಸಮರ್ಥ ರೂಗಿ (ತೃತೀಯ).