ಗಾಯತ್ರಿ ಸಿದ್ದೇಶ್ವರ್‌ಗೆ ಒನಕೆ ಗಿಫ್ಟ್‌!

KannadaprabhaNewsNetwork | Published : May 1, 2024 1:19 AM

ಸಾರಾಂಶ

ಚುನಾವಣೆ ಸಂದರ್ಭದಲ್ಲಿ ನಾಯಕರು, ಅಭ್ಯರ್ಥಿಗಗಳಿಗೆ ಕಂಬಳಿ ಹಾಕಿ, ಬೆಳ್ಳಿ ಕಿರೀಟ, ಮೈಸೂರು ಪೇಟ ತೊಡಿಸಿ, ಶಾಲು ಹಾಕಿ, ಕ್ರೇನ್ ಸಹಾಯದಿಂದ ಸೇಬು ಹಣ್ಣಿನ ಹಾರ, ಹೂವಿನ ಹಾಕುವುದು, ಪುಟ್ಟ ನೇಗಿಲು ಕೊಡುವುದು, ಬೆಳ್ಳಿ ಇತರೆ ಲೋಹದ ಖಡ್ಗ ಸಾಮಾನ್ಯ. ಆದರೆ, ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ಗೆ ಮಹಿಳೆಯೊಬ್ಬರು ಹೊಸ ಒನಕೆ ನೀಡುವ ಮೂಲಕ ಎಲ್ಲರ ಗಮನ ಸೆಳೆಸಿದ್ದಾರೆ.

- ಕಂಬಳಿ ಸನ್ಮಾನ, ಕುರಿ-ಮೇಕೆ ಕೊಡುಗೆ, ಕ್ರೇನ್‌ ಹಾರದ ಮಧ್ಯೆ ವಿಶಿಷ್ಟ ಗಿಫ್ಟ್! - - - ಕನ್ನಡಪ್ರಭ ವಾರ್ತೆ, ದಾವಣಗೆರೆ, ಏ.30 ಚುನಾವಣೆ ಸಂದರ್ಭದಲ್ಲಿ ನಾಯಕರು, ಅಭ್ಯರ್ಥಿಗಗಳಿಗೆ ಕಂಬಳಿ ಹಾಕಿ, ಬೆಳ್ಳಿ ಕಿರೀಟ, ಮೈಸೂರು ಪೇಟ ತೊಡಿಸಿ, ಶಾಲು ಹಾಕಿ, ಕ್ರೇನ್ ಸಹಾಯದಿಂದ ಸೇಬು ಹಣ್ಣಿನ ಹಾರ, ಹೂವಿನ ಹಾಕುವುದು, ಪುಟ್ಟ ನೇಗಿಲು ಕೊಡುವುದು, ಬೆಳ್ಳಿ ಇತರೆ ಲೋಹದ ಖಡ್ಗ ಸಾಮಾನ್ಯ. ಆದರೆ, ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ಗೆ ಮಹಿಳೆಯೊಬ್ಬರು ಹೊಸ ಒನಕೆ ನೀಡುವ ಮೂಲಕ ಎಲ್ಲರ ಗಮನ ಸೆಳೆಸಿದ್ದಾರೆ. ತಾಲೂಕಿನ ಮಾಯಕೊಂಡ ಕ್ಷೇತ್ರದ ಆನಗೋಡು, ಬಾಡಾ ಜಿಪಂ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಿಜೆಪಿ ಮುಖಂಡರ ಸಭೆಯ ವೇಳೆ ಹೊನ್ನನಾಯಕನಹಳ್ಳಿ ಗ್ರಾಮದ ಗ್ರಾಪಂ ಸದಸ್ಯೆ, ಮಹಿಳಾ ಮೋರ್ಚಾದ ರೂಪಶ್ರೀ ಹೆಸರಿನ ಗೃಹಿಣಿ ಬಿಜೆಪಿ ಮೇಲಿನ ತಮ್ಮ ಅಭಿಮಾನ, ಕ್ಷೇತ್ರದ ಪ್ರಥಮ ಮಹಿಳಾ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ಗೆ ಹೊಸದಾದ ಒನಕೆಯೊಂದನ್ನು ಕೊಡುಗೆ ನೀಡುವ ಮೂಲಕ ಚುನಾವಣೆಯಲ್ಲಿ ಭಾರೀ ಗೆಲುವು ನಿಮ್ಮದಾಗಲೆಂದು ಹಾರೈಸಿದ್ದಾರೆ. ರೂಪಶ್ರೀಯವರು ನೀಡಿದ ಒನಕೆಯನ್ನು ಅಷ್ಟೇ ಖುಷಿ, ಅಭಿಮಾನದಿಂದ ಸ್ವೀಕರಿಸಿದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಒನಕೆಗೆ ಕನ್ನಡ ನಾಡು, ಭಾರತ ದೇಶದ ಇತಿಹಾಸದಲ್ಲಿ ಮಹತ್ವದ ಸ್ಥಾನವಿದೆ. ಏಳು ಸುತ್ತಿನ ಕೋಟೆ ಚಿತ್ರದುರ್ಗ ಕೋಟೆಗೆ ಶತೃಗಳು ಲಗ್ಗೆ ಹಾಕಲು ಯತ್ನಿಸಿ, ಎಲ್ಲದರಲ್ಲೂ ವಿಫಲವಾಗಿದ್ದರು. ಆಗ ಕಾವಲು ಗೋಪುರ ಕಾಯುತ್ತಿದ್ದ ತನ್ನ ಪತಿಗೆ ನೀರು ತರಲು ಹೋಗಿದ್ದ ಓಬವ್ವನಿಗೆ ಕೋಟೆಯ ಕಲ್ಲುಗಳ ಸಂದಿಯಿಂದ ಶತೃಪಾಳೆಯ ನುಗ್ಗುತ್ತಿರುವುದು ಕಂಡು, ಶತೃಗಳನ್ನು ಸದೆ ಬಡಿಯಲು ಇದೇ ಒನಕೆಯನ್ನು ಅಸ್ತ್ರವಾಗಿ ಬಳಸಿದ್ದರು ಎಂದು ಸ್ಮರಿಸಿದರು. ಇಂದಿಗೂ ಚಿತ್ರದುರ್ಗದ ಇತಿಹಾಸದಲ್ಲಿ ವೀರ ಮದಕರಿ ನಾಯಕರು, ನಾಯಕರ ಹೆಸರುಗಳು, ಏಳು ಸುತ್ತಿನ ಕೋಟೆ ಜೊತೆಗೆ ಒನಕೆ ಹಿಡಿದ ಓಬವ್ವನ ಹೆಸರು ಸಹ ಸಹ ಅಜರಾಮರ

ವಾಗಿದೆ. ಇಂತಹ ಕೋಟೆ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಒನಕೆಯನ್ನು ಸಾಂಕೇತಿಕವಾಗಿ ನನಗೆ ನೀಡುವ ಮೂಲಕ ರೂಪಶ್ರೀ ಶುಭಾರೈಸಿದ್ದಾರೆ. ಒನಕೆ ನೀಡುವ ಮೂಲಕ ಎಲ್ಲರ ಕಣ್ಣುಗಳ ಮುಂದೆ ಒಂದು ಕ್ಷಣ ಒನಕೆ ಓಬವ್ವ ನೆನಪಾಗುವಂತೆ ಮಾಡಿದ್ದಾರೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸವನ್ನು ಉಳಿಸಿಕೊಳ್ಳುವಂತೆ ಕೆಲಸ ಮಾಡುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ. ಮೇ.5ರಂದು ನನ್ನ ಗುರುತಾದ ಕಮಲದ ಹೂವಿಗೆ ಮತ ನೀಡಿ, ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ನನ್ನನ್ನು ಭಾರೀ ಮತಗಳ ಅಂತರದಿಂದ ಇಲ್ಲಿಂದ ಗೆಲ್ಲಿಸಿ, ದೆಹಲಿಗೆ ಕಳಿಸಿಕೊಡಿ ಎಂದು ಗಾಯತ್ರಿ ಸಿದ್ದೇಶ್ವರ ಮನವಿ ಮಾಡಿದರು. ಪಕ್ಷದ ಹಿರಿಯ ಮುಖಂಡರಾದ ಜೀವನಮೂರ್ತಿ, ಮಾಯಕೊಂಡ ಕ್ಷೇತ್ರದ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಎಸ್.ರಮೇಶ, ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜ ಸೇರಿದಂತೆ ಅನೇಕರು ಇದ್ದರು. - - -

-30ಕೆಡಿವಿಜಿ25:

ಮಾಯಕೊಂಡ ಕ್ಷೇತ್ರದ ಮುಖಂಡರ ಸಭೆಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ಗೆ ಗ್ರಾಪಂ ಸದಸ್ಯೆ ಹೊನ್ನನಾಯಕನಹಳ್ಳಿ ರೂಪಶ್ರೀ ಹೊಸ ಒನಕೆ ನೀಡಿ, ಶುಭಾರೈಸಿದರು.

Share this article