ವೈಭವಯುತವಾಗಿ ನಡೆದ ವೈಕುಂಠ ಏಕಾದಶಿ

KannadaprabhaNewsNetwork |  
Published : Jan 11, 2025, 12:45 AM IST
ಏಕಾದಶಿ | Kannada Prabha

ಸಾರಾಂಶ

ವೈ​ಕುಂಠ ಏ​ಕಾ​ದ​ಶಿ​ಯಂದು ದೈ​ವ​ತ್ವದ ಬಾ​ಗಿ​ಲು ತೆ​ರೆ​ಯು​ತ್ತದೆ ಎಂಬ ನಂಬಿಕೆ. ಕು​ಟುಂಬ ಸ​ಮೇತ ವೆಂಕ​ಟೇ​ಶ್ವರ ದೇ​ವ​ಸ್ಥಾ​ನ​ಗ​ಳಿಗೆ ತೆ​ರಳಿ ಪೂ​ಜೆ, ಅ​ಭಿ​ಷೇಕ ಸ​ಮ​ರ್ಪಿಸಿ ವೆಂಕೆ​ಟೇ​ಶ್ವರ ದೇ​ವರ ದ​ರ್ಶ​ನಾ​ಶೀ​ರ್ವಾದ ಪ​ಡೆದು ಪು​ನೀತ​ರಾ​ದರು.

ಹು​ಬ್ಬಳ್ಳಿ:

ಮ​ಹಾ​ನ​ಗ​ರ​ದ ವಿ​ವಿಧ ದೇ​ವಾ​ಲ​ಯ​, ಮನೆ-ಮ​ನೆ​ಗ​ಳಲ್ಲಿ ವೈ​ಕುಂಠ ಏ​ಕಾ​ದಶಿಯನ್ನು ವೈ​ಭ​ವ​ಯು​ತ​ವಾಗಿ ಆ​ಚ​ರಿ​ಸ​ಲಾ​ಯಿ​ತು.

ವೈ​ಕುಂಠ ಏ​ಕಾ​ದ​ಶಿ​ಯಂದು ದೈ​ವ​ತ್ವದ ಬಾ​ಗಿ​ಲು ತೆ​ರೆ​ಯು​ತ್ತದೆ ಎಂಬ ನಂಬಿಕೆ. ಕು​ಟುಂಬ ಸ​ಮೇತ ವೆಂಕ​ಟೇ​ಶ್ವರ ದೇ​ವ​ಸ್ಥಾ​ನ​ಗ​ಳಿಗೆ ತೆ​ರಳಿ ಪೂ​ಜೆ, ಅ​ಭಿ​ಷೇಕ ಸ​ಮ​ರ್ಪಿಸಿ ವೆಂಕೆ​ಟೇ​ಶ್ವರ ದೇ​ವರ ದ​ರ್ಶ​ನಾ​ಶೀ​ರ್ವಾದ ಪ​ಡೆದು ಪು​ನೀತ​ರಾ​ದರು.

ನೃ​ಪ​ತುಂಗ ಬೆ​ಟ್ಟ​ದ​​ಲ್ಲಿ​ರುವ ವೆಂಕ​ಟೇ​ಶ್ವರ ದೇ​ವ​ಸ್ಥಾನ, ಕುಂಬ​ಕೋಣಂ ಹಾಗೂ ರಾ​ಯಾ​ಪುರ ಇ​ಸ್ಕಾನ್‌ ಮಂದಿ​ರ​ದಲ್ಲಿ ಶ್ರೀ​ನಿ​ವಾಸ ಕ​ಲ್ಯಾ​ಣೋ​ತ್ಸ​ವದ ಉ​ತ್ಸಾಹ ಸಂಭ್ರ​ಮದಿಂದ ಕೂ​ಡಿ​ದ್ದ​ವು. ಭಗವಂತನ ದರ್ಶನಕ್ಕಾಗಿ ಸಾ​ವಿ​ರಾ​ರು ಭಕ್ತರು ಆಗಮಿಸಿದ್ದರು.ಇ​ಸ್ಕಾನ್‌ ಮಂದಿ​ರ​ದಲ್ಲಿ ಬೆಳಗಿನ ಜಾವ 4.30ಕ್ಕೆ ಶ್ರೀ​ಕೃಷ್ಣ ಬಲರಾಮರ ಮಹಾ ಮಂಗಳಾರತಿಯೊಂದಿಗೆ ಶುಕ್ರವಾರದ ಕಾರ್ಯಕ್ರಮ ಆರಂಭವಾದವು. ಈ ಸಮಯದಲ್ಲಿ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವೈಕುಂಠ ನಾರಾಯಣನ ಅಲಂಕಾರದಲ್ಲಿದ್ದ ​ಶ್ರೀ​ಕೃಷ್ಣನ ದರ್ಶನ ಪ​ಡೆದು ಭ​ಕ್ತರು ಧ​ನ್ಯತೆ ಮೆರೆದರು. ಭಗವಂತನನ್ನು ಸ್ತುತಿಸುವ ಭಜನೆ ಹಾಗೂ ಕೀರ್ತನೆಗಳಲ್ಲಿ ಪಾ​ಲ್ಗೊಂಡು ಭಾವುಕರಾದ ಭಕ್ತರು ಭಗವಂತನ ವಿಗ್ರಹಗಳ ಮುಂದೆ ನರ್ತಿಸಿದರು.

ವಿಶೇಷವಾಗಿ ಅಲಂಕರಿಸಿ ಸ್ಥಾಪಿಸಲಾಗಿದ್ದ ಸ್ವರ್ಣ ವರ್ಣದ ವೈಕುಂಠ ದ್ವಾರವನ್ನು 10.30ಕ್ಕೆ ತೆರೆಯಲಾಯಿತು. ಈ ಮಂಗಳಕರ ಸಂದರ್ಭಕ್ಕೆಂದೇ ಭಗವಂತನ ಒಂದು ಲಕ್ಷನಾಮಗಳ ಜಪ ಸೇವೆಯು ಇಡೀ ದಿನ ನೆರವೇರಿತು. ವಿಶೇಷ ಮಂಟಪದ ಮುಂದೆ ಸುಂದರವಾಗಿ ಅಲಂಕಾರದೊಂದಿಗೆ ಸ್ಥಾಪಿತಗೊಂಡ ಕಲಶಗಳಿಗೆ ಭ​ಕ್ತರು ಪುಷ್ಪಾರ್ಚನೆ ಸೇವೆ ಮಾ​ಡಿ ಭ​ಕ್ತಿಯ ಪ​ರ​ವ​ಶ​ರಾ​ದ​ರು.

ಶ್ರೀವೈಕುಂಠ ನಾರಾಯಣನನ ಕೃಪೆ ಮತ್ತು ವಿಶ್ವ ಶಾಂತಿಗಾಗಿ ಮ​ಹ​ತ್ವ​ವಾ​ದ ವೆಂಕಟೇಶ್ವರನ ಹೋಮ ನೆ​ರ​ವೇ​ರಿ​ಸ​ಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!