ಕನ್ನಡಪ್ರಭ ವಾರ್ತೆ ಐಗಳಿ
ನಾಡಿನ ಸಂತರು ಶರಣರು ಶಿವಯೋಗಿಗಳ ಮಾತುಗಳಿಂದ ನಮಗೆ ಒಳ್ಳೆಯ ಸಂದೇಶ ಹೇಳಿದ್ದಾರೆ ಎಂದು ತೆಲಸಂಗದ ವೀರೇಶ ದೇವರು ನುಡಿದರು.ಸ್ಥಳೀಯ ರಾಚೋಟೇಶ್ವರ ಸ್ವಾಮೀಜಿ ಜಾತ್ರೆಯ ನಿಮಿತ್ತ ಪ್ರಥಮ ದಿ.ಶಿವಾನುಭವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಬಸವಾದಿ ಪ್ರಮಥರು ಸಮಾನತೆ ಸಾರಿದರು. ಅಂತಹವರಲ್ಲಿ ಶಿವಯೋಗಿಗಳಾದ ಲಿಂ.ರಾಚೋಟೇಶ್ವರ ಸ್ವಾಮೀಜಿ ಕೋಡಾ ಒಬ್ಬರು. ಇವರು ಮಾಡಿದ ಅನೇಕ ಪವಾಡಗಳು ತಮಗೆಲ್ಲ ಗೊತ್ತಿದೆ. ಅವರ ಮಾರ್ಗದರ್ಶನದಲ್ಲಿ ನೀವೆಲ್ಲರೂ ನಡೆಯಿರಿ ಎಂದರು.ಇಲ್ಲಿ ನೆತ್ತಿಗೆ ದಾಸೋಹ, ಹೊಟ್ಟೆಗೆ ಅನ್ನದಾಸೋಹ. ಜಾನುವಾರ ಜಾತ್ರೆ ಈ ಭಾಗದಲ್ಲಿ ದೊಡ್ಡದು. ಉತ್ತರಾಧಿಕಾರಿ ಅಭಿನವ ರಾಚೋಟೇಶ್ವರ ದೇವರು ಒಳ್ಳೆ ಉತ್ಸಾಹ ಉಮ್ಮಸು ಇದೆ. ಬರುವ ಜಾತ್ರೆಯಲ್ಲಿ ಕೃಷಿಮೇಳ ಪ್ರಾರಂಭಿಸೋಣ ಎಂದಿದ್ದಾರೆ. ಎಲ್ಲ ರೈತರು ಸಹಕಾರ ನೀಡಿರಿ. ಸೈನಿಕ, ರೈತ, ಶಿಕ್ಷಕರನ್ನು ಗೌರವಿಸಿರಿ ಎಂದು ಸಲಹೆ ನೀಡಿದರು.ಬಟಕುರ್ಕಿಯ ಗದಗಯ್ಯ ದೇವರು ಮಾತನಾಡಿ, ನಿತ್ಯ ದೇವರು ನೆನೆಯುವದು ಆರಾಧಿಸುವುದು. ಸ್ಮರಣೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಅಲ್ಲದೆ ಭಗವಂತ ಸದಾ ನಿಮ್ಮ ಮನೆಯಲ್ಲಿ ವಾಸನಾಗುತ್ತಾನೆ. ಮನೆಯಲ್ಲಿ ಸಂಸ್ಕಾರ ಇದ್ದರೇ ಅದು ಮಂತ್ರಾಲಯ ಆಗಲಿದೆ. ಅದರಂತೆ ಮಕ್ಕಳಿಗೆ ಆಸ್ತಿಕ್ಕಿಂತ ಸಂಸ್ಕಾರ ಕೊಡಿ ಎಂದರು.ಉತ್ತರಾಧಿಕಾರಿ ಅಭಿನವ ರಾಚೋಟೇಶ್ವರ ದೇವರು ಸಾನ್ನಿಧ್ಯ ವಹಿಸಿದ್ದರು. ಧುರೀಣ ಅಪ್ಪಾಸಾಬ ಅವತಾಡೆ, ಗಿರೀಶ ಬುಟಾಳೆ, ಮಾತನಾಡಿದರು. ಸಿದ್ದಲಿಂಗ ದೇವರು, ಶಿವಬಸವ ಪೂಜ್ಯರು, ಮಾತೋಶ್ರೀ ಪ್ರಮೀಳಾತಾಯಿ, ಬಸವರಾಜ ರೂಡಗಿ, ಶಿವಾನಂದ ಸಿಂಧೂರ, ಅಪ್ಪಾಸಾಬ ಮಾಕಾಣಿ, ಸಂಗಪ್ಪ ಬಿರಾದಾರ, ಸುರೇಶ ಘಾಟಗೆ, ಶ್ರೀಶೈಲ ಜಂಬಗಿ, ಮನೋಹರ ಸಾಳುಂಕೆ, ಮಲ್ಲಪ್ಪ ಬೇವಿನಗಿಡದ, ಕಮಿಟಿ ಅಧ್ಯಕ್ಷ ಪ್ರಲ್ಹಾದ ಪಾಟೀಲ ಸೇರಿದಂತೆ ಅನೇಕರು ಇದ್ದರು. ಅನ್ನದಾತರನ್ನು ಸತ್ಕರಿಸಲಾಯಿತು. ಶಿಕ್ಷಕ ಕೆ.ಎಸ್.ಬಿಜ್ಜರಗಿ ಸ್ವಾಗತಿಸಿದರು. ಕೇದಾರಿ ಬಿರಾದಾರ ವಂದಿಸಿದರು.