ಕನ್ನಡಪ್ರಭ ವಾರ್ತೆ ಸಿಂದಗಿ
ನಾವೆಲ್ಲ ಉತ್ತಮ ಆರೋಗ್ಯವಂತರಿದ್ದಾಗ ಮಾತ್ರ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ. ಆರೋಗ್ಯದ ಕಡೆಗೆ ಸದಾ ನಾವು ಜಾಗೃತಿ ವಹಿಸಬೇಕಾಗಿರುವುದು ಇಂದು ಅನಿವಾರ್ಯವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಮನಗೂಳಿ ಆಸ್ಪತ್ರೆಯಲ್ಲಿ ಭಾನುವಾರ ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರ 3ನೇ ಪುಣ್ಯಸ್ಮರಣೆಯ ನಿಮಿತ್ತ ಆಯೋಜಿಸಿರುವ ಉಚಿತ ಬೃಹತ್ ಆರೋಗ್ಯ ತಪಾಷಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನ ವೈಜ್ಞಾನಿಕ ಬದುಕಿನಲ್ಲಿ ನಾವೇಲ್ಲ ಹೆಚ್ಚು ಒತ್ತಡದಲ್ಲಿದ್ದೇವೆ. ನಿರಂತರವಾಗಿ ಎಷ್ಟೆ ಕಾರ್ಯಗಳು ಮಾಡಿದರೂ ಮೊದಲು ನಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿಕೊಳ್ಳಬೇಕು. ಇಲ್ಲವಾದರೇ ದುಡಿದ ಹಣವನ್ನು ಆಸ್ಪತ್ರೆಗಳಿಗೆ, ರೋಗ ನಿವಾರಣಕ್ಕೆ ಖರ್ಚು ಮಾಡಬೇಕಾಗುತ್ತದೆ. ನಮ್ಮ ತಂದೆ ದಿ.ಎಂ.ಸಿ.ಮನಗೂಳಿ ಸ್ಮರಣೆಗಾಗಿ ಮನಗೂಳಿ ಆಸ್ಪತ್ರೆಯಲ್ಲಿ ನಮ್ಮ ಕುಟುಂಬದವರು ಸೇರಿ ಅನೇಕರಿಗೆ ಪ್ರಯೋಜನವಾಗಲಿ ಎಂದು ಬೃಹತ್ ಉಚಿತ ಆರೋಗ್ಯ ತಪಾಷಣಾ ಶಿಬಿರ ಆಯೋಜಿಸಿದ್ದೇವೆ ಎಂದರು.
ಈ ವೇಳೆ ಮನಗೂಳಿ ಆಸ್ಪತ್ರೆಯ ಡಾ.ಶಾಂತವೀರ ಮನಗೂಳಿ ಮಾತನಾಡಿ, ಅನೇಕ ವೈದ್ಯರ ಸಹಕಾರದಿಂದ ಈ ಭಾಗದ ಜನತೆಗೆ ಅನುಕೂಲವಾಗಲೆಂದು ಈ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿದೆ. ಬಡವರ, ಸಾಮಾನ್ಯರ ಪಾಲಿಗೆ ಶಿಬಿರಗಳು ಹೆಚ್ಚು ಪ್ರಯೋಜನಕಾರಿಯಾಗಲಿವೆ ಎಂದರು.ಈ ವೇಳೆ ಶಿಬಿರದಲ್ಲಿ ವಿವಿಧ ರೋಗಗಳಾದ ಹೃದಯ ಸಂಬಂಧಿಸಿದ ಕಾಯಿಲೆ, ನರರೋಗ, ಕ್ಯಾನ್ಸರ್, ಸ್ತ್ರೀರೋಗ, ಮೂತ್ರಪಿಂಡದಲ್ಲಿ ಕಲ್ಲು, ಚರ್ಮರೋಗ, ಇಸಿಜಿ, ರಕ್ತ ತಪಾಷಣೆ, ರಕ್ತದ ಒತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಅನೇಕ ರೋಗಗಳ ತಪಾಷಣಾ ಕಾರ್ಯದಲ್ಲಿ ಸುಮಾರು 380ಕ್ಕೂ ಹೆಚ್ಚು ಜನ ರೋಗಿರಗಳು ಶಿಬಿರದ ಲಾಭಗಳನ್ನು ಪಡೆದುಕೊಂಡರು.
ಶಿಬಿರದಲ್ಲಿ ಡಾ.ಸಂಧ್ಯಾ ಮನಗೂಳಿ, ಡಾ.ಕುಶಾಲ ತಾರಾಪೂರ, ಡಾ.ವಿಜಯಲಕ್ಷ್ಮೀ ತಾರಾಪೂರ, ಡಾ.ಮಲ್ಲಪ್ಪ ಹುಗ್ಗಿ, ಡಾ.ಸುನೀಲ ಸಜ್ಜನ, ಡಾ.ಸೌಮ್ಯಾ ಮನಗೂಳಿ, ಡಾ.ಕಿರಣಕುಮಾರಿ ಶ್ರೀಗೀರಿ ರೋಗಿಗಳಿಗೆ ತಪಾಷಣೆ ಮಾಡಿದರು.ಕಾರ್ಯಕ್ರಮದಲ್ಲಿ ಸಿದ್ದಮ್ಮಗೌಡತಿ ಮನಗೂಳಿ, ನಾಗರತ್ನಾ ಮನಗೂಳಿ, ಡಾ.ಸಂಜು ಅವಟಿ, ಡಾ.ಆರತಿ ಚಿಕ್ಕೋಡಿ, ಡಾ.ಪ್ರತಿಭಾ ಬಿರಾದಾರ, ಡಾ.ಅಶ್ವಿನಿ ಆಲೂರ, ರವಿ ಗೋಲಾ, ಬಿ.ಜಿ.ನೇಲ್ಲಗಿ, ಸಂಗನಬಸು ಬಿರಾದಾರ, ಶ್ರೀಶೈಲ ಬಿರಗೊಂಡ, ಮಹಾನಂದ ಬೊಮ್ಮಣ್ಣಿ, ಜಯಶ್ರೀ ಹಗನೂರ, ಸುನಂದ ಯಂಪೂರೆ, ಶಶಿಕಲಾ ಪಟ್ಟಣಶೆಟ್ಟಿ, ಶಕುಂತಲಾ ಚಳ್ಳಗಿ, ವರ್ಷಾ ಪಾಟೀಲ, ಎಲ್.ಎಸ್.ಪೂಜಾರಿ, ಕುಮಾರ ಬಗಲಿ, ವಿನೋದ ಕಲಬುರ್ಗಿ, ಸಿದ್ದು ಮಲ್ಲೇದ, ಆನಂದ ಮುರಗಾನೂರ, ಪ್ರವೀಣ ಯಾಳವಾರ, ಸಾವಿತ್ರಿ ಗಾಣಿಗೇರ, ಮೀನಾಕ್ಷಿ ನಾಯ್ಕೋಡಿ, ಪವಿತ್ರಾ ರಾಠೋಡ, ಶಂಭು ಕಕ್ಕಳಮೇಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.