ಕನ್ನಡಪ್ರಭ ವಾರ್ತೆ ತುಮಕೂರು
ಪ್ರಸ್ತುತ ನಮ್ಮ ಕಾಲೇಜು ೫೮ನೇ ವರ್ಷಕ್ಕೆ ಕಾಲಿಟ್ಟಿದ್ದು, ಶೈಕ್ಷಣಿಕವಾಗಿ ಪ್ರಗತಿಯ ಪಥದಲ್ಲಿ ಸಾಗುತ್ತಿದೆ. ಈಗಾಗಲೇ ಕಾಲೇಜಿಗೆ ನ್ಯಾಕ್ ತಜ್ಞರ ಸಮಿತಿಯು ಶಿಕ್ಷಣದ ಗುಣಮಟ್ಟ ಮೌಲ್ಯಮಾಪನ ಮಾಡಲು ಮೂರು ಬಾರಿ ಭೇಟಿ ನೀಡಿ, ಕಾಲೇಜಿನ ಗುಣಮಟ್ಟವನ್ನು ಪರಿಶೀಲಿಸಿ ಕ್ರಮವಾಗಿ ಬಿ+, ಬಿ ಮತ್ತು ಬಿ++ ಶ್ರೇಣಿಯನ್ನು ನೀಡಿತ್ತು ಎಂದು ಅವರು ತಿಳಿಸಿದರು.
ಈಗ 4ನೇ ಬಾರಿಗೆ ಭೇಟಿ ನೀಡಿದ್ದ ಡಾ.ಗೌತಮ್ ಬರುವ, ಡಾ.ವೆಂಕಟಾಚಲಂ ಕುರುಮ ಹಾಗ ಡಾ. ಶೋಭನಾ ಅವರನ್ನು ಒಳಗೊಂಡ ನ್ಯಾಕ್ ಸಮಿತಿಯ ತಜ್ಞರ ತಂಡ ಕಾಲೇಜಿನ ಅಧ್ಯಾಪಕರು, ಪೋಷಕರು ಮತ್ತು ವಿದ್ಯಾರ್ಥಿಗಳೊದಿಗೆ ಸಂವಾದ ನಡೆಸಿ ಗುಣಮಟ್ಟವನ್ನು ಪರಿಶೀಲಿಸಿ ನಮ್ಮ ಕಾಲೇಜಿಗೆ "ಎ " ಗ್ರೇಡ್ ಮಾನ್ಯತೆ ನೀಡಿದ್ದಾರೆ. ಇದಕ್ಕೆ ಕಾರಣರಾದ ಆಡಳಿತ ಮಂಡಳಿ, ಹಿರಿಯ ವಿದ್ಯಾರ್ಥಿಗಳ ಸಂಘ, ಪೋಷಕರು, ಬೋಧಕ-ಬೋಧಕೇತರ ವರ್ಗದವರು, ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.2024-25ನೇ ಶೈಕ್ಷಣಿಕ ಸಾಲಿನ ಬಿಎ, ಬಿಎಸ್ಸಿ, ಬಿಕಾಂ, ಬಿಸಿಎ ಮತ್ತು ಬಿಬಿಎ ಪದವಿ ಕೋರ್ಸ್ಗಳಿಗೆ ಪ್ರವೇಶ ದಾಖಲಾತಿಯನ್ನು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಬಂದ ತಕ್ಷಣವೇ ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರೊ. ಸೋಮಶೇಖರಯ್ಯ, ಪ್ರೊ. ಅನಿಲ್‌ಕುಮಾರ್, ಪ್ರೊ. ಬಿ. ಬಸವೇಶ್ ಉಪಸ್ಥಿತರಿದ್ದರು.