ಪೌರ ಕಾರ್ಮಿಕರಿಗೆ ಆಹಾರ ಕಿಟ್‌ಮತ್ತು ಬಟ್ಟೆ ವಿತರಣೆ

KannadaprabhaNewsNetwork |  
Published : Jul 21, 2025, 12:00 AM IST
45 | Kannada Prabha

ಸಾರಾಂಶ

ನಾಡ ದೇವತೆ ಚಾಮುಂಡೇಶ್ವರಿ, ನನ್ನ ಪೋಷಕರು, ಸಮಸ್ತ ಶಿಕ್ಷಕ ಬಂಧುಗಳ, ರಾಜಕೀಯ ನಾಯಕರುಗಳ ಶುಭ ಹಾರೈಕೆಯ ಆಶೀರ್ವಾದದೊಂದಿಗೆ ನಾನು ಈ ಮಟ್ಟಕ್ಕೆ ಬಂದು ನಿಂತಿದ್ದೇನೆ.

ಕನ್ನಡಪ್ರಭ ವಾರ್ತೆ ಮೈಸೂರುದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್‌ ಸದಸ್ಯ ಕೆ. ವಿವೇಕಾನಂದ ಅವರ ಹುಟ್ಟುಹಬ್ಬ ಅಂಗವಾಗಿ ಅವರ ಸ್ವಂತ ಊರಾದ ಮದ್ದೂರು ತಾಲೂಕು ಕೊಪ್ಪ ‌ಹೋಬಳಿಯ ಅವರೇಳ್ಳಿ ಗ್ರಾಮಕ್ಕೆ ತೆರಳಿ ತಾಯಿಯ ಆಶೀರ್ವಾದ ಪಡೆದು ವಿಶೇಷ ಪೂಜೆ ಸಲ್ಲಿಸಿದರು.ಅವರ ತಾಯಿ ಚಿಕ್ಕತಾಯಮ್ಮ ಅವರ ಆಶೀರ್ವಾದ ಪಡೆದ ಕೆ. ವಿವೇಕಾನಂದ ಅವರು, ಮೈಸೂರಿಗೆ ಆಗಮಿಸಿ ಮೈಸೂರಿಗೆ ಸ್ವಚ್ಛ ನಗರಿಯ ಸ್ಥಾನಪಡೆಯಲು ಕಾರಣರಾದ ಪೌರ ಕಾರ್ಮಿಕರಿಗೆ ಆಹಾರ ಕಿಟ್‌ಮತ್ತು ಬಟ್ಟೆಗಳನ್ನು ಉಚಿತವಾಗಿ ವಿತರಿಸಿದರು.ಬಳಿಕ ಸಾರ್ವಜನಿಕರಿಗೆ ಕಣ್ಣಿನ ತಪಾಸಣೆ ಶಿಬಿರ ಮತ್ತು ಉಚಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಅಲ್ಲದೆ ಸಾಮಾಜಿಕ ಚಟುವಟಿಕೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಶಾಸಕರ ಹಿತೈಷಿಗಳು, ಹಲವು ಜನಪ್ರತಿನಿಧಿಗಳು, ಹಲವು ಶಿಕ್ಷಕ ಸಂಘಟನೆಯ ಪದಾಧಿಕಾರಿಗಳು, ಯುವ ಸಂಘಟನೆಯ ಪದಾಧಿಕಾರಿಗಳು, ಮಹಿಳಾ ಸಂಘದ ಪದಾಧಿಕಾರಿಗಳು, ವಿಧಾನ ಪರಿಷತ್ ಸದಸ್ಯರಿಗೆ ಪುಷ್ಪಗುಚ್ಛ ನೀಡಿ ಶುಭ ಹಾರೈಸಿದರು.ಈ ವೇಳೆ ಮಾತನಾಡಿದ ಕೆ. ವಿವೇಕಾನಂದ ಅವರು, ನಾಡ ದೇವತೆ ಚಾಮುಂಡೇಶ್ವರಿ, ನನ್ನ ಪೋಷಕರು, ಸಮಸ್ತ ಶಿಕ್ಷಕ ಬಂಧುಗಳ, ರಾಜಕೀಯ ನಾಯಕರುಗಳ ಶುಭ ಹಾರೈಕೆಯ ಆಶೀರ್ವಾದದೊಂದಿಗೆ ನಾನು ಈ ಮಟ್ಟಕ್ಕೆ ಬಂದು ನಿಂತಿದ್ದೇನೆ. ಈ ಶಾಸಕ ಸ್ಥಾನವನ್ನು ಕಲ್ಪಿಸಿಕೊಟ್ಟ ಎಲ್ಲರನ್ನು ಒಂದಲ್ಲ ಒಂದು ರೀತಿ ನೆನೆಪಿಸಿಕೊಳ್ಳಬೇಕು. ಅದರಲ್ಲೂ ನನ್ನ ಮತದಾರರಾದ ಸಮಸ್ತ ಶಿಕ್ಷಕ ಬಂಧುಗಳ ಸಮಸ್ಯೆಗಳನ್ನು ನಿರಂತರವಾಗಿ ಬಗೆಹರಿಸಿಕೊಂಡು ಬರುತ್ತಿದ್ದು, ಇನ್ನು ಹೆಚ್ಚಿನ ಶಕ್ತಿಯನ್ನು ಆ ದೇವರು ಮತ್ತು ನನ್ನ ಆತ್ಮೀಯ ಶಿಕ್ಷಕ ಬಂಧುಗಳಿಗೆ ನೀಡಲಿ ಎಂದು ಕೋರಿದರು.ಈ ವೇಳೆ ಮಾಜಿ ಶಾಸಕ ಹಾಗೂ ಬಿಜೆಪಿ ಅಧ್ಯಕ್ಷ ಎಲ್‌. ನಾಗೇಂದ್ರ, ಮಾಜಿ ಮೇಯರ್‌ಶಿವಕುಮಾರ್, ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರೇಮಾ, ಸುಬ್ಬಯ್ಯ, ಶಿವಣ್ಣ, ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾ ನಂದೀಶ್, ಸರ್ಕಾರಿ ನೌಕರ ಸಂಘದ ಜಿಲ್ಲೆಯ ಮಾಜಿ ಅಧ್ಯಕ್ಷ ಗೋವಿಂದರಾಜು, ಶಿಕ್ಷಕರ ಸಂಘಟನೆಯ ಪದಾಧಿಕಾರಿಗಳಾದ ದೀಪು, ಸತೀಶ್, ಹನುಮಂತುರಾಜು ಮೊದಲಾದವರು ಇದ್ದರು.

PREV

Latest Stories

ದಾವಣಗೆರೆಯಲ್ಲಿ ವೀರಶೈವ ಪಂಚಪೀಠಗಳ ಸಮಾಗಮ
ಹವ್ಯಕ ಪ್ರತಿಷ್ಠಾನ ವಾರ್ಷಿಕೋತ್ಸವ ಸಂಪನ್ನ
5 ಪಾಲಿಕೆ ರಚನೆಗೆ ಆಕ್ಷೇಪಣೆ ಸಲ್ಲಿಸಲು ಹಕ್ಕಿದೆ: ಡಿಕೆಶಿ