ಅದ್ಧೂರಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆ

KannadaprabhaNewsNetwork |  
Published : Jan 11, 2025, 12:49 AM IST
ಪೋಟೋ ಇದೆ. | Kannada Prabha

ಸಾರಾಂಶ

ಹಿರೇಕೆರೂರು ಪಟ್ಟಣದಲ್ಲಿ ಆಯೋಜಿಸಿರುವ ಹಾವೇರಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಪಟ್ಟಣದ ಜಿ.ಬಿ. ಶಂಕರರಾವ್ ವೃತ್ತದಲ್ಲಿ ನಾಡದೇವಿ ಭುವನೇಶ್ವರಿ ದೇವಿ ಹಾಗೂ ಸಮ್ಮೇಳನಾಧ್ಯಕ್ಷೆ ಸಂಕಮ್ಮ ಸಂಕಣ್ಣನವರ ಅವರ ಮೆರವಣಿಗೆ ಹಿರಿಯ ನ್ಯಾಯವಾದಿ ಎನ್.ಜಿ. ಬಣಕಾರ ಹಾಗೂ ಪಪಂ ಅಧ್ಯಕ್ಷೆ ಸುಧಾ ಚಿಂದಿ ಚಾಲನೆ ನೀಡಿದರು.

ಹಿರೇಕೆರೂರು: ಪಟ್ಟಣದಲ್ಲಿ ಆಯೋಜಿಸಿರುವ ಹಾವೇರಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಪಟ್ಟಣದ ಜಿ.ಬಿ. ಶಂಕರರಾವ್ ವೃತ್ತದಲ್ಲಿ ನಾಡದೇವಿ ಭುವನೇಶ್ವರಿ ದೇವಿ ಹಾಗೂ ಸಮ್ಮೇಳನಾಧ್ಯಕ್ಷೆ ಸಂಕಮ್ಮ ಸಂಕಣ್ಣನವರ ಅವರ ಮೆರವಣಿಗೆ ಹಿರಿಯ ನ್ಯಾಯವಾದಿ ಎನ್.ಜಿ. ಬಣಕಾರ ಹಾಗೂ ಪಪಂ ಅಧ್ಯಕ್ಷೆ ಸುಧಾ ಚಿಂದಿ ಚಾಲನೆ ನೀಡಿದರು. ಪಟ್ಟಣದ ಜಿ.ಬಿ.ಶಂಕರರಾವ್ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಚಾವಡಿ ವೃತ್ತ, ಬಸ್ ನಿಲ್ದಾಣ, ಸರ್ವಜ್ಞ ವೃತ್ತ ಮೂಲಕ ಪೊಲೀಸ್‌ ಮೈದಾನದಲ್ಲಿನ ಸರ್ವಜ್ಞ- ಶಾಂತಕವಿ ವೇದಿಕೆಯವರೆಗೆ ಸಾರೋಟಿಯಲ್ಲಿ ಸಮ್ಮೇಳನಾಧ್ಯಕ್ಷೆ ಸಂಕಮ್ಮ ಸಂಕಣ್ಣನವರ ಅವರ ಅವರನ್ನು ವಿವಿಧ ವಾದ್ಯಗಳೊಂದಿಗೆ ಶಾಲಾ ಮಕ್ಕಳು, ಶಿಕ್ಷಕರು, ಅಧಿಕಾರಿಗಳು ಕನ್ನಡಪರ ಸಂಘಟನೆಗಳು, ಸಾಹಿತ್ಯಾಭಿಮಾನಗಳು, ಕನ್ನಡ ಪರ ಜಯಘೋಷಗಳನ್ನು ಹಾಕುತ್ತಾ ಮೆರವಣಿಗೆ ಮೂಲಕ ಸ್ವಾಗತಿಸಿದರು.ವಿವಿಧ ಕಲಾತಂಡಗಳು: ನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ಮೆರೆಸುವ ವೀರಗಾಸೆ, ನಂದಿಕೋಲು, ಶಾಲಾ ಮಕ್ಕಳಿಂದ ಅನುಭವ ಮಂಟಪದ ವಚನಕಾರರ ವೇಷಗಳು, ದುರ್ಗಾದೇವಿ, ಮದಕರಿ ನಾಯಕ ವೇಷಗಳು ಮೆರವಣಿಗೆಗೆ ಸಾಥ್ ನೀಡಿದವು.ಈ ಸಂದರ್ಭದಲ್ಲಿ ಶಾಸಕ ಯು.ಬಿ.ಬಣಕಾರ, ಎಸ್.ಎಸ್. ಪಾಟೀಲ, ಪಪಂ ಉಪಾಧ್ಯಕ್ಷ ರಾಜು ಕರಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಬಡಳ್ಳಿ, ತಹಸೀಲ್ದಾರ್ ಎಚ್.ಪ್ರಭಾಕರಗೌಡ, ಕೆ.ಗುರುಬಸವರಾಜ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕು ಘಟಕದ ಅಧ್ಯಕ್ಷ ಎನ್.ಸುರೇಶಕುಮಾರ,ಸಿಪಿಐ ಬಸವರಾಜ ಪಿ.ಎಸ್., ಪಿಎಸೈ ನೀಲಪ್ಪ ನರನಾಲ, ಮುಖ್ಯಾಧಿಕಾರಿ ಕೋಡಿ ಭೀಮರಾಯ, ಚಂದ್ರಶೇಖರ ಒಡೆಯರ, ಗಿರೀಶ ಬಾರ್ಕಿ, ಭರಮಪ್ಪ ಡಮ್ಮಳ್ಳಿ, ಮಾರುತಿ ಪೂಜಾರ, ಇಸೂಫ್ ಸೈಕಲ್‌ಗಾರ, ಸುರೇಶ ತಳವಾರ ಸೇರಿದಂತೆ ಪಪಂ ಸದಸ್ಯರು, ವಿವಿಧ ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳು, ಕಸಾಪ ಪದಾಧಿಕಾರಿಗಳು ಇದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ