ಹನುಮಸಾಗರದಲ್ಲಿ ರಾಮಮಂದಿರದ ಮಂತ್ರಾಕ್ಷತೆ ವಿತರಣೆಗೆ ಅದ್ಧೂರಿ ಚಾಲನೆ

KannadaprabhaNewsNetwork |  
Published : Jan 07, 2024, 01:30 AM ISTUpdated : Jan 07, 2024, 04:52 PM IST
ಫೋಟೋ 06 ಎಚ್,ಎನ್,ಎಮ್, 01  ಹನುಮಸಾಗರದ ಶ್ರೀಅಂಬಭವಾನಿ ದೇಗುಲದಲ್ಲಿ ಶನಿವಾರ ಶ್ರೀರಾಮ ಮಂದಿರದ ಮಂತ್ರಾಕ್ಷಿಗೆ ಚಾಲನೆಯನ್ನು ನೀಡಲಾಯಿತು. | Kannada Prabha

ಸಾರಾಂಶ

ಮಂತ್ರಾಕ್ಷತೆ ತಲುಪಿಸುವ ನಾನಾ ಗ್ರಾಮಗಳಲ್ಲಿ ಶ್ರೀರಾಮನ ಭಾವಚಿತ್ರ ಹಿಡಿದುಕೊಂಡು, ಜೈಶ್ರೀರಾಮ ಎಂಬ ಜಯಘೋಷ ಮೊಳಗಿಸುತ್ತಾ, ಡೋಲು ಬಾರಿಸುತ್ತಾ ಭಕ್ತಿಯಿಂದ ಹಿಂದೂ ಕಾರ್ಯಕರ್ತರು ಹೆಜ್ಜೆ ಹಾಕಿದರು.

ಹನುಮಸಾಗರ: ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ದೇಗುಲ ಲೋಕಾರ್ಪಣೆ ಹಿನ್ನೆಲೆಯಲ್ಲಿ ಪವಿತ್ರ ಮಂತ್ರಾಕ್ಷತೆಯನ್ನು ದೇಶಾದ್ಯಂತ ಎಲ್ಲ ಮನೆಗಳಿಗೆ ವಿತರಿಸುವ ಹಿನ್ನೆಲೆಯಲ್ಲಿ ಗ್ರಾಮದ ಅಂಬಾಭವಾನಿ ದೇವಸ್ಥಾನದಲ್ಲಿ ಶನಿವಾರ ಮಂತ್ರಾಕ್ಷತೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಮುಖಂಡ ಬಸವರಾಜ ಹಳ್ಳೂರ ಮಾತನಾಡಿ, ಗ್ರಾಮದಲ್ಲಿ ಗ್ರಾಮ ಸಮಿತಿ, ವಾರ್ಡ್ ಸಮಿತಿ, ರಾಮಭಕ್ತರ ಸಮಿತಿ ರಚಿಸಲಾಗಿದೆ. ಈ ಎಲ್ಲ ಸಮಿತಿಯ ಸದಸ್ಯರು ಮತ್ತು ಕಾರ್ಯಕರ್ತರು ಪ್ರತಿ ಮನೆಗೂ ಮಂತ್ರಾಕ್ಷತೆ ವಿತರಿಸಲಿದ್ದಾರೆ. ಅಕ್ಕಪಕ್ಕದ ಗ್ರಾಮಗಳಿಗು ಮಂತ್ರಾಕ್ಷತೆ ನೀಡಲಾಗುತ್ತಿದೆ. 

ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ದಿನದಂದು ಪ್ರತಿಯೊಬ್ಬರೂ ಸ್ವೀಕರಿಸಿದ ಮಂತ್ರಾಕ್ಷತೆಯನ್ನು ತಮ್ಮ ಮನೆಯಲ್ಲಿ ಪಾಯಸ ಮಾಡಿ ಸ್ವೀಕರಿಸಬೇಕು. ಕನಿಷ್ಠ ಐದು ದೀಪಗಳನ್ನು ಉತ್ತರ ದಿಕ್ಕಿಗೆ ಮುಖ ಮಾಡಿ ಹೊತ್ತಿಸಬೇಕು. 

ಭಕ್ತರು ತಮ್ಮ ನೆರೆಹೊರೆಯಲ್ಲಿರುವ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆಯಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.ಮಂತ್ರಾಕ್ಷತೆ ತಲುಪಿಸುವ ನಾನಾ ಗ್ರಾಮಗಳಲ್ಲಿ ಶ್ರೀರಾಮನ ಭಾವಚಿತ್ರ ಹಿಡಿದುಕೊಂಡು, ಜೈಶ್ರೀರಾಮ ಎಂಬ ಜಯಘೋಷ ಮೊಳಗಿಸುತ್ತಾ, ಡೋಲು ಬಾರಿಸುತ್ತಾ ಭಕ್ತಿಯಿಂದ ಹಿಂದೂ ಕಾರ್ಯಕರ್ತರು ಹೆಜ್ಜೆ ಹಾಕಿದರು.

ಗ್ರಾಮದ ಎಲ್ಲ ಸಮಾಜದ ಮುಖಂಡರಾದ ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ವಿಶ್ವನಾಥ ಕನ್ನೂರ, ಮಹಾಂತೇಶ ಅಗಸಿಮುಂದಿನ, ವಿಶ್ವನಾಥ ನಾಗೂರ, ವಾಸುದೇವ ನಾಗೂರ, ಮರೇಗೌಡ ಬೋದುರ, ಚಂದ್ರು ಬೆಳಗಲ್, ಸೂಚಪ್ಪ ದೇವರಮನಿ, ಮಹಾಂತೇಶ ಕುಷ್ಟಗಿ, ಮುತ್ತಣ್ಣ ಸಂಗಮದ, ಸಂಗಮೇಶ ಕರಂಡಿ, ಸಿದ್ದಯ್ಯ ಬಾಳಿಹಳ್ಳಮಠ, ಶರಣು ಹವಾಲ್ದಾರ, ಬಸವರಾಜ ದ್ಯಾವಣ್ಣನವರ, ರಮೇಶ ಬಡಿಗೇರ, ಶಿವಪ್ಪ ಹುಲ್ಲೂರ, ಸಕ್ರಪ್ಪ ಬಿಂಗಿ, ಬೈಲಪ್ಪಗೌಡರ ಪಾಟೀಲ್, ಸುಬ್ಬಣಚಾರ್ಯ ಕಟ್ಟಿ, ವೀರೇಶ ಈಳಗೇರ, ರುಕ್ಮಣಸಾ ರಂಗ್ರೇಜ, ಭಗೀರಥಸಾ ಪಾಟೀಲ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!