ಕೋಮಲ ನರ್ಸಿಂಗ್ ಹೋಂ ವೈದ್ಯೆ ಡಾ.ಕೋಮಲ ಮರಿಗುದ್ದಿ ಉದ್ಘಾಟನೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ದಿವಂಗತರಾದ ಶಾಂತಮ್ಮ, ಪಿ.ಎಚ್.ಚನ್ನವೀರಪ್ಪ ಹಾಗೂ ಪಿ.ಸಿ.ವೀರಣ್ಣ ಪಟ್ಟಣಶೆಟ್ರು ಅವರು ಸ್ಮರಣಾರ್ಥವಾಗಿ ಏಕನಾಥೇಶ್ವರಿ ಅಮ್ಮನವರ ಪಾದಗುಡಿ ಜಾತ್ರೆ ಬಯಲಿನಲ್ಲಿ ನಿರ್ಮಿಸಲಾಗಿರುವ ಮಹಾದ್ವಾರ ಲೋಕಾರ್ಪಣೆಗೊಳಿಸಿ ನಂತರ ಸನ್ಮಾನ ಸ್ವೀಕರಿಸಿದರು. ಏಕನಾಥೇಶ್ವರಿ ಅಮ್ಮ ನನ್ನ ಇಷ್ಟಾರ್ಥ ಈಡೇರಿಸಿದ್ದರಿಂದ ದ್ವಾರ ಬಾಗಿಲು ನಿರ್ಮಿಸಿ ಹರಕೆ ತೀರಿಸಿದ್ದೇನೆ. ಸಮಸ್ತ ಜನತೆಗೆ ಒಳಿತುಂಟು ಮಾಡಲಿ ಎಂದು ಅಮ್ಮನವರಲ್ಲಿ ಪ್ರಾರ್ಥಿಸಿದರು.
ಏಕನಾಥೇಶ್ವರಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಮೀನ್ದಾರ್ ದೊರೆಸ್ವಾಮಿ, ನಿರ್ದೇಶಕರಾದ ಬಿ.ರಾಮಜ್ಜ, ಎಸ್.ಬಿ.ಎಲ್.ಮಲ್ಲಿಕಾರ್ಜುನ್, ಶಾರದ ಬ್ರಾಸ್ ಬ್ಯಾಂಡ್‍ನ ಗುರುಮೂರ್ತಿ, ಕೆ.ಪಿ.ಶಿವಕುಮಾರ್, ತಾಲೂಕು ಕಚೇರಿಯ ಕಂದಾಯ ನಿರೀಕ್ಷಕ ಪ್ರಾಣೇಶ್, ಗ್ರಾಮ ಆಡಳಿತಾಧಿಕಾರಿ ಶ್ರೀನಿವಾಸ್, ಕೆ.ಇ.ಬಿ.ಷಣ್ಮುಖಪ್ಪ ಹಾಗೂ ನೂರಾರು ಭಕ್ತರು ಈ ಸಂದರ್ಭದಲ್ಲಿ ಹಾಜರಿದ್ದರು.