ನೀಲಕಂಠ ಮಹಾಶಿವಯೋಗೀಶ್ವರರ ಅದ್ಧೂರಿ ಜಾತ್ರೆ

KannadaprabhaNewsNetwork |  
Published : Feb 09, 2026, 03:15 AM IST
ಜಾತ್ರೆ | Kannada Prabha

ಸಾರಾಂಶ

ಬೈಲಹೊಂಗಲ: ಮೂರು ಸಾವಿರಮಠದ ಲಿಂಗೈಕ್ಯ ನೀಲಕಂಠ ಮಹಾಶಿವಯೋಗೀಶ್ವರರ ಜಾತ್ರಾ ಮಹೋತ್ಸವ ಹಾಗೂ ಲಿಂಗೈಕ್ಯ ಗಂಗಾಧರ ಮಹಾಸ್ವಾಮೀಜಿ ಅವರ 73ನೇ ಜಯಂತಿ ಮಹೋತ್ಸವ ಮತ್ತು ಮಹಾಶಿವರಾತ್ರಿ ಉತ್ಸವ ಫೆ.13ರಿಂದ 15 ರವರೆಗೆ ಅದ್ಧೂರಿಯಿಂದ ನೆರವೇರಿಸಲಾಗುವುದು ಎಂದು ಮೂರುಸಾವಿರಮಠದ ಪೀಠಾಧಿಪತಿ ಪ್ರಭುನೀಲಕಂಠ ಮಹಾಸ್ವಾಮಿಗಳು ಹೇಳಿದರು.

ಬೈಲಹೊಂಗಲ: ಮೂರು ಸಾವಿರಮಠದ ಲಿಂಗೈಕ್ಯ ನೀಲಕಂಠ ಮಹಾಶಿವಯೋಗೀಶ್ವರರ ಜಾತ್ರಾ ಮಹೋತ್ಸವ ಹಾಗೂ ಲಿಂಗೈಕ್ಯ ಗಂಗಾಧರ ಮಹಾಸ್ವಾಮೀಜಿ ಅವರ 73ನೇ ಜಯಂತಿ ಮಹೋತ್ಸವ ಮತ್ತು ಮಹಾಶಿವರಾತ್ರಿ ಉತ್ಸವ ಫೆ.13ರಿಂದ 15 ರವರೆಗೆ ಅದ್ಧೂರಿಯಿಂದ ನೆರವೇರಿಸಲಾಗುವುದು ಎಂದು ಮೂರುಸಾವಿರಮಠದ ಪೀಠಾಧಿಪತಿ ಪ್ರಭುನೀಲಕಂಠ ಮಹಾಸ್ವಾಮಿಗಳು ಹೇಳಿದರು.ಶ್ರೀಮಠದ ಆವರಣದಲ್ಲಿ ಭಕ್ತರ ಮಧ್ಯ ಜಾತ್ರಾ ಮಹೋತ್ಸವ ಆಮಂತ್ರಣ ಪತ್ರಿಕೆ ಶನಿವಾರ ಬಿಡುಗಡೆಗೊಳಿಸಿ ಮಾತನಾಡಿದರು. ಫೆ.13ರಂದು ಬೆಳಗ್ಗೆ 8ಕ್ಕೆ ದೇವರಶೀಗಿಹಳ್ಳಿ ವಿರೇಶ್ವರ ಸ್ವಾಮೀಜಿ ಅವರಿಂದ ಷಟಸ್ಥಲ ಧ್ವಜಾರೋಹಣ, ಸಂಜೆ 7ಕ್ಕೆ ಲಿಂ.ಗಂಗಾಧರ ಸ್ವಾಮೀಜಿ 73ನೇ ಜಯಂತಿ ಮಹೋತ್ಸವ, ಸಂಜೆ ಪ್ರವಚನ ಮಂಗಲ, ಲೇಕ್ ಮ್ಯಾನ್ ಆಫ್ ಇಂಡಿಯಾ ಆನಂದ ಮಲ್ಲಿಗವಾಡಗೆ ನೀಲಕಂಠ ಶ್ರೀಪ್ರಶಸ್ತಿ ಪ್ರದಾನ, ಫೆ.14 ಸಂಜೆ 7ಕ್ಕೆ ಗುರುವಂದನಾ, ಸನ್ಮಾನ ಸಮಾರಂಭ, ಫೆ.15ರಂದು ಬೆಳಗ್ಗೆ 6ಕ್ಕೆ ನೀಲಕಂಠ ಮಹಾಶಿವಯೋಗೀಶ್ವರ, ಲಿಂಗೈಕ್ಯ ಗಂಗಾಧರ ಸ್ವಾಮೀಜಿ ಅವರ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪಲ್ಲಕ್ಕಿ ಉತ್ಸವ, ಬೆಳಗ್ಗೆ 7ಕ್ಕೆ ಅಯ್ಯಾಚಾರ, ಲಿಂಗದೀಕ್ಷೆ ಸಂಜೆ 4ಕ್ಕೆ ಮಹಾರಥೋತ್ಸವ ನೆರವೇರಲಿದೆ. ಈ ಎಲ್ಲ ಕಾರ್ಯಕ್ರಮಗಳಿಗೆ ನಾಡಿನ ಪೂಜ್ಯರು, ರಾಜಕಾರಣಿಗಳು, ಜನಪ್ರತಿನಿಧಿಗಳು, ಕಲಾವಿದರು ಅಥಿಗಳಾಗಿದ್ದಾರೆ.ಜಾತ್ರಾ ಮಹೋತ್ಸವ ಅಂಗವಾಗಿ ಫೆ.13ರದು ಸಂಜೆ 7ಕ್ಕೆ ತಾರಾ ಮೆರಗು ನಡೆಯಲಿದೆ. ಬಿಗ್ ಬಾಸ್ ಖ್ಯಾತಿಯ ರಕ್ಷಿತ್ ಶೆಟ್ಟಿ, ಪ್ರಥಮ, ಅಶ್ವಿನಿ ಗೌಡ, ಸುಷ್ಮಿತಾ ಗೌಡ, ಜಾನ್ವಿ, ಡಿಕೆಡಿ ಖ್ಯಾತಿಯ ರುದ್ರಾ ಮಾಸ್ಟರ್ ತಂಡದಿಂದ ನೃತ್ಯ ವೈಭವ, ಫೆ.14ರಂದು ಸಂಜೆ 7ಕ್ಕೆ ಖ್ಯಾತ ಗಾಯಕ ರಾಜೇಶ ಕೃಷ್ಣನ್ ತಂಡದಿಂದ ಸಂಗೀತ ಸಂಜೆ ನಡೆಯಲಿದೆ.

ಜಾತ್ರಾ ಸಮಿತಿಯ ಸುಭಾಷ ತುರಮರಿ, ಶಿವಾನಂದ ಬಡ್ಡಿಮನಿ, ಬಸವರಾಜ ದೊಡಮನಿ, ಮಲ್ಲಯ್ಯ ಶೀಲಯ್ಯನವರ, ಎನ್.ಎಸ್.ಚಿಲಮುರ, ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರೈ ಘಟಕಕ್ಕಾಗಿ ಮಂಡ್ಯದಲ್ಲೇ 100 ಎಕ್ರೆ ಕೊಡಿ: ಎಚ್‌ಡಿಕೆ ಪತ್ರ
ಭರ್ಜರಿ ಯಶಸ್ಸು ಕಂಡ ಕೆಪೆಕ್‌ ವಾಣಿಜ್ಯ ಮೇಳ