ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷಕ ಟಿ.ವೆಂಕಟೇಶ್‌ಗೆ ಅದ್ಧೂರಿ ಬೀಳ್ಕೊಡುಗೆ

KannadaprabhaNewsNetwork |  
Published : Aug 03, 2025, 11:45 PM IST
3ಕೆಎಂಎನ್ ಡಿ27 | Kannada Prabha

ಸಾರಾಂಶ

27 ವರ್ಷ ಕಾಲ ಶಿಕ್ಷಣ ಕ್ಷೇತ್ರದಲ್ಲಿ ವೆಂಕಟೇಶ್ ಅಪಾರ ಕೊಡುಗೆ ನೀಡಿದ್ದಾರೆ. ಅವರು ಬಹಳ‌‌ ಹಿಂದಿನಿಂದಲೂ ರೈತ ಸಂಘಟನೆ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡು ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಸಕ್ರಿಯವಾಗಿ ರೈತ ಸಂಘಟನೆಯಲ್ಲಿ ನಮ್ಮೊಂದಿಗೆ ತೊಡಗಿಕೊಳ್ಳಲಿ.

ಕನ್ನಡಪ್ರಭ ವಾರ್ತೆ ಪಾಂಡವಪುರ

27 ವರ್ಷಗಳವರೆಗೆ ಶಿಕ್ಷಕ ವೃತ್ತಿಯಲ್ಲಿದ್ದು, 19 ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಕಳೆದ 2 ತಿಂಗಳ ಹಿಂದೆ ನಿವೃತ್ತರಾದ ಹುಣಸನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಟಿ.ವೆಂಕಟೇಶ್ ಅವರಿಗೆ ಅದ್ಧೂರಿಯಾಗಿ ಬೀಳ್ಕೊಡುಗೆ ನೀಡಿ ಅಭಿನಂದಿಸಲಾಯಿತು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿನಂದಿಸಿ ಮಾತನಾಡಿ, 27 ವರ್ಷ ಕಾಲ ಶಿಕ್ಷಣ ಕ್ಷೇತ್ರದಲ್ಲಿ ವೆಂಕಟೇಶ್ ಅಪಾರ ಕೊಡುಗೆ ನೀಡಿದ್ದಾರೆ. ಅವರು ಬಹಳ‌‌ ಹಿಂದಿನಿಂದಲೂ ರೈತ ಸಂಘಟನೆ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡು ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಸಕ್ರಿಯವಾಗಿ ರೈತ ಸಂಘಟನೆಯಲ್ಲಿ ನಮ್ಮೊಂದಿಗೆ ತೊಡಗಿಕೊಳ್ಳಲಿ ಎಂದರು.

ಕೆ.ಆರ್.ಪೇಟೆ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಆರ್.ಆನಂದಕುಮಾರ್ ಮಾತನಾಡಿ, ವೆಂಕಟೇಶ್ ಅವರು ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ ಎರಡು ತಿಂಗಳು ಕಳೆದಿದ್ದರೂ ಜನರ ಪ್ರೀತಿ, ವಿಶ್ವಾಸ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂಬುದಕ್ಕೆ ಇಂದಿನ ಸಮಾರಂಭವೇ ಪೂರಕ ಸಾಕ್ಷಿ ಎಂದರು.

ಅಭಿನಂದನೆ ಸ್ವೀಕರಿಸಿದ ಶಿಕ್ಷಕ ಟಿ.ವೆಂಕಟೇಶ್‌ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದರು.

ಇದೇ ವೇಳೆ ಶಿಕ್ಷಕ ಟಿ.ವೆಂಕಟೇಶ್ ಹಾಗೂ ಅನಿತಾ ದಂಪತಿಗೆ ಮೈಸೂರು ಪೇಟ, ಶಾಲು-ಹಾರ ಹಾಕಿ ನೆನಪಿನ ಕಾಣಿಕೆ ನೀಡಿ ಅದ್ದೂರಿಯಾಗಿ ಅಭಿನಂದಿಸಲಾಯಿತು. ಈ ವೇಳೆ ಹುಣಸನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ 1200ಕ್ಕೂ ಹೆಚ್ಚು ಜನರಿಗೆ ಹೋಳಿಗೆ ಊಟ ಉಣಬಡಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಆ‌ರ್.ವಿ.ಧರ್ಮ ರತ್ನಾಕರ, ಇಸಿಒ ಮೋಹನ್ ಕುಮಾರ್, ಬಿಆರ್‌ಪಿ‌ ಎನ್.ಮಂಜು, ಸಿಆರ್ ಪಿಗಳಾದ ಪ್ರಕಾಶ್, ಮಹೇಶ್, ಎಸ್‌ಡಿಎಂಸಿ ಅಧ್ಯಕ್ಷ ಕುಮಾರ್, ಉಪಾಧ್ಯಕ್ಷ ದೀಪು, ನಿವೃತ್ತ ಪೊಲೀಸ್ ಅಧಿಕಾರಿ ಕಾಳೇಗೌಡ, ಯಜಮಾನರಾದ ಗಂಗಾಧರ, ಪಾಲಾಕ್ಷ, ಎಚ್.ಎನ್. ಮಹೇಶ್, ಎಂಬಿಬಿಎಸ್ ವಿದ್ಯಾರ್ಥಿನಿ ಇಂಚರ, ಅಂಗನವಾಡಿ ಶಿಕ್ಷಕಿ ಸುಶೀಲ, ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಆರ್ ಟಿಒ‌ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಚಿನಕುರಳಿ ಯಜಮಾನ್, ರೈತಸಂಘದ ಮುಖಂಡರಾದ ಕೆ.ಟಿ.ಗೋವಿಂದೇಗೌಡ, ಕೆನ್ನಾಳು ನಾಗರಾಜು, ಕಟ್ಟೇರಿ ಮಹದೇವ್, ಇಳ್ಳೇನಹಳ್ಳಿ ನರಸಿಂಹೇಗೌಡ, ಅತ್ತಿಗಾನಹಳ್ಳಿ ಸಿದ್ದೇಗೌಡ, ಚಿನುಕುರಳಿ ಪುಟ್ಟೇಗೌಡ, ನಾಗೇಶ್, ಕನಗನಹಳ್ಳಿ ಜ್ಯೋತಿ, ಪಾಂಡವಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ‌ ಎಚ್.ಎನ್.ದಯಾನಂದ್, ಕರವೇ ಅಧ್ಯಕ್ಷ ಗಜೇಂದ್ರ ಗೋವಿಂದರಾಜು, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎನ್.ಕೆಂಪೇಗೌಡ, ಮಾಜಿ ಅಧ್ಯಕ್ಷ ಎಸ್.ಪರಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಡಿ.ಕುಮಾರ್, ಮಾಜಿ ಅಧ್ಯಕ್ಷ ಪಿ.ಮಂಜುನಾಥ್, ಶಿಕ್ಷಕ ಎಂಎಚ್.ನಂದೀಶ್ ಹಾಗೂ ವಿವಿಧ ಶಾಲೆಗಳ ಶಿಕ್ಷಕ ವೃಂದ ಹಾಜರಿದ್ದು ಸನ್ಮಾನಿಸಿ ಬೀಳ್ಕೊಟ್ಟರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ